ದಾವಣಗೆರೆಯಲ್ಲಿ ಮತ್ತೆ 16 ಕೊರೋನಾ ಪಾಸಿಟಿವ್ ಕೇಸ್ ಪತ್ತೆ..!

By Kannadaprabha NewsFirst Published Jul 2, 2020, 9:18 AM IST
Highlights

ದಾವಣಗೆರೆಯಲ್ಲಿ ಮತ್ತೊಮ್ಮೆ ಕೊರೋನಾ ಅಟ್ಟಹಾಸ ಆರಂಭವಾಗಿದ್ದು ಜುಲೈ 01ರಂದು ಒಂದೇ ದಿನ ಹೊಸದಾಗಿ 16 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.

ದಾವಣಗೆರೆ(ಜು.02): ಕೊರೋನಾ ವೈರಸ್‌ ಮತ್ತೆ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದು, ಬುಧವಾರ ಒಂದೇ ದಿನ 16 ಪಾಸಿಟಿವ್‌ ಕೇಸ್‌ಗಳು ವರದಿಯಾಗಿವೆ. ಸೋಂಕಿನಿಂದ ಗುಣಮುಖವಾದ ಮೂವರು ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಲೂಕಿನ ನೇರ್ಲಿಗೆ ಗ್ರಾಮದ 45 ವರ್ಷದ ಪುರುಷ (ಪಿ-15374)ನು ಪಿ-8064ರ ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ. ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ 35 ವರ್ಷದ ಪುರುಷ (15375)ನು ಪಿ-10386ರ ಸಂಪರ್ಕಿತರು. ದಾವಣಗೆರೆ ಆಜಾದ್‌ ನಗರದ 66 ವರ್ಷದ ವೃದ್ಧ (15376)ನು ಶೀತ ಜ್ವರ (ಐಎಲ್‌ಐ) ಹಿನ್ನೆಲೆಯವರು.

ಇಲ್ಲಿನ ಪಿಜೆ ಬಡಾವಣೆ ಪೊಲೀಸ್‌ ಕ್ವಾರ್ಟಸ್‌ ವಾಸಿಯಾದ ಫ್ರಂಟ್‌ ಲೈನ್‌ ವರ್ಕರ್‌ 28 ವರ್ಷದ ಪುರುಷ (15377), ಎಂಸಿಸಿ ‘ಬಿ’ ಬ್ಲಾಕ್‌ ವಾಸಿ ಫ್ರಂಟ್‌ ಲೈನ್‌ ವರ್ಕರ್‌ 30 ವರ್ಷದ ಪುರುಷ (15378)ನ ಸೋಂಕಿನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಹೊನ್ನಾಳಿ ತಾಲೂಕು ಹತ್ತೂರು ಗ್ರಾಮದ 1 ವರ್ಷದ ಮಗು (15379)ವು ಪಿ-9892ರ ಸಂಪರ್ಕಿತ.

ಹರಿಹರದ ವಿದ್ಯಾನಗರ ‘ಸಿ’ ಬ್ಲಾಕ್‌ನ 33 ವರ್ಷದ ಪುರುಷ (15380), ಶೀತಜ್ವರ (ಐಎಲ್‌ಐ) ಹಿನ್ನೆಲೆಯವರು. ಹರಿಹರದ ಚಚ್‌ರ್‍ ಸಮೀಪದ ಚಿನ್ನಪ್ಪ ಕಾಂಪೌಂಡ್‌ನ ವಾಸಿ 40 ವರ್ಷದ ಪುರುಷ (15381)ನು ರಾರ‍ಯಂಡಮ್‌ ಸ್ಯಾಂಪಲ್‌ ವೇಳೆ ಸೋಂಕು ದೃಢಪಟ್ಟಿದೆ.

ಜಗಳೂರು ತಾಲೂಕಿನ ಚಿಕ್ಕ ಉಜ್ಜಿನಿ ಗ್ರಾಮದ 11 ವರ್ಷದ ಬಾಲಕಿ (15382), ದಾವಣಗೆರೆ ಬಾಷಾ ನಗರದ ಮಿಲ್ಲತ್‌ ಕಾಲನಿ ವಾಸಿ 31 ವರ್ಷದ ಪುರುಷ (15383)ನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಹೊಂಡದ ಸರ್ಕಲ್‌ನ ಸುಲ್ತಾನ್‌ ಪೇಟೆಯ 58 ವರ್ಷದ ವೃದ್ಧೆ (15384)ಗೆ ಪಿ-14403ರ ಸಂಪರ್ಕದಿಂದ ಸೋಂಕು ತಗುಲಿದೆ. ಹೊನ್ನಾಳಿ ತಾಲೂಕಿನ ಹತ್ತೂರು ಗ್ರಾಮದ 58 ವರ್ಷದ ಪುರುಷ (15385)ನು ಪಿ-9892ರ ಸಂಪರ್ಕಿತರು. ನ್ಯಾಮತಿ ಪಟ್ಟಣದ ಠಾಗೂರು ರಸ್ತೆಯ 65 ವರ್ಷದ ವೃದ್ಧ (ಪಿ-15386) ರಾರ‍ಯಂಡಮ್‌ ಸಂಗ್ರಹ ವೇಳೆ ದೃಢಪಟ್ಟಿದ್ದು, ಸೋಂಕಿನ ಪತ್ತೆ ಮಾಡಲಾಗುತ್ತಿದೆ.

ಕೊರೋನಾ ಅಟ್ಟಹಾಸ: ಹೋಟೆಲ್‌ ಬಂದ್‌ ಮಾಡಲು ನಿರ್ಧಾರ

ಜಗಳೂರಿನ ಜೆಸಿಆರ್‌ ಬಡಾವಣೆಯ 49 ವರ್ಷದ ಫ್ರಂಟ್‌ ಲೈನ್‌ ವರ್ಕರ್‌ ಆದ ಪುರುಷ (15387), ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸಮೀಪದ ಕುರುಬರ ಕೇರಿ ವಾಸಿಗಳಾದ 58 ವರ್ಷದ ವೃದ್ಧ (15388), 50 ವರ್ಷದ ಮಹಿಳೆ (15389)ರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಚನ್ನಗಿರಿಯ ಗೌಡರ ಬೀದಿಯ ವಾಸಿಗಳಾದ 14 ವರ್ಷದ ಗಂಡುಮಗು (ಪಿ-9891), 11 ವರ್ಷದ ಹೆಣ್ಣುಮಗು (ಪಿ9895), 39 ವರ್ಷದ ಪುರುಷ (ಪಿ9896) ಈ ಮೂವರನ್ನೂ ಜಿಲ್ಲಾ ನಿಗದಿತ ಕೋವಿಡ್‌-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 325 ಪಾಸಿಟಿವ್‌ ಪ್ರಕರಣ ದಾಖಲಾಗಿವೆ. ಇದರಲ್ಲಿ 8 ಜನ ಸಾವನ್ನಪ್ಪಿದ್ದಾರೆ. 266 ಮಂದಿ ಗುಣಮುಖರಾಗಿದ್ದು, ಪ್ರಸ್ತುತ 51 ಸಕ್ರಿಯ ಪ್ರಕರಣಗಳಿವೆ.
 

click me!