ಮಂಡ್ಯ: ಪಾನಮತ್ತನಾಗಿ ಅಡ್ಡಾದಿಡ್ಡಿ ಲಾರಿ ಚಾಲನೆ, 15 ಸಾವಿರ ದಂಡ

Published : Dec 21, 2023, 01:00 AM IST
ಮಂಡ್ಯ: ಪಾನಮತ್ತನಾಗಿ ಅಡ್ಡಾದಿಡ್ಡಿ ಲಾರಿ ಚಾಲನೆ, 15 ಸಾವಿರ ದಂಡ

ಸಾರಾಂಶ

ತಮಿಳುನಾಡಿನ ತೂತುಕುಡಿ ಗೌರ್ನಗಿರಿಯ ಒಟ್ಟಿಪಾಳ್ಯಂನ ಎಂ.ಪಾಂಡಿಯನ್ ಅವರಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಪ್ರಿಯಾಂಕ 15 ಸಾವಿರ ರು. ದಂಡ ವಿಧಿಸಿ ಆದೇಶ ನೀಡಿದ್ದಾರೆ. 

ಮದ್ದೂರು(ಡಿ.21):  ಪಾನಮತ್ತನಾಗಿ ಹೆದ್ದಾರಿಯಲ್ಲಿ ಕಂಟೈನರ್ ಲಾರಿಯನ್ನು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ್ದ ತಮಿಳುನಾಡು ಮೂಲದ ಚಾಲಕನಿಗೆ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯ ದಂಡ ವಿಧಿಸಿದೆ.

ತಮಿಳುನಾಡಿನ ತೂತುಕುಡಿ ಗೌರ್ನಗಿರಿಯ ಒಟ್ಟಿಪಾಳ್ಯಂನ ಎಂ.ಪಾಂಡಿಯನ್ (51) ಅವರಿಗೆ ಪ್ರಧಾನ ಸಿವಿಲ್ ನ್ಯಾಯಾಧೀಶೆ ಬಿ.ಪ್ರಿಯಾಂಕ 15 ಸಾವಿರ ರು. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಕಳೆದ ಡಿ.16 ರಂದು ಕಂಟೈನರ್ ಲಾರಿ ಚಾಲಕ ಪಾನಮತ್ತನಾಗಿ ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿ ಇತರೆ ವಾಹನ ಚಾಲಕರಿಗೆ ಆತಂಕ ಸೃಷ್ಟಿಸಿದ್ದನು.

ಲೋಕಸಭೆಗೆ ನಿಖಿಲ್ ಸ್ಪರ್ಧಿಸಿದರೆ ಬೆಂಬಲ ನೀಡುವುದರಲ್ಲಿ ನಾನೇ ಮೊದಲಿಗ: ಶಿವರಾಮೇಗೌಡ

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ದೂರಿನ ಮೇರೆಗೆ ಮದ್ದೂರು ಸಂಚಾರಿ ಠಾಣೆ ಪಿಎಸ್‌ಐ ಜೆ.ಇ.ಮಹೇಶ್ ಲಾರಿಯನ್ನು ವಶಕ್ಕೆ ತೆಗೆದುಕೊಂಡು ಚಾಲಕನ ವಿರುದ್ಧ ಮೊಕದ್ದಮೆ ದಾಖಲು ಮಾಡಿಕೊಂಡು ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದರು. ವಿಚಾರಣೆ ನಂತರ ನ್ಯಾಯಾಧೀಶೆ ಪ್ರಿಯಾಂಕ ಅವರು ಲಾರಿ ಚಾಲಕ ಪಾಂಡಿಯನ್‌ಗೆ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ