ಬೀದಿನಾಯಿಗಳ ದಾಳಿಗೆ ಚಿತ್ರದುರ್ಗದ ಜನರು ಬೆಚ್ಚಿಬಿದ್ದಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಟೆಂಡರ್ ಕಥೆ ಹೇಳ್ತಾ ಕಾಲಾಹರಣ ಮಾಡ್ತಿದ್ದಾರೆ. ಹೀಗಾಗಿ ದುರ್ಗದ ಜನರಲ್ಲಿ ಬಾರಿ ಆತಂಕ ಮನೆ ಮಾಡಿದೆ.
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಡಿ.20): ಇಲ್ಲಿ ತನಕ ಚಿರತೆ, ಕರಡಿಗಳ ಕಾಟಕ್ಕೆ ಬೆಚ್ಚಿ ಬೀಳ್ತಿದ್ದ ಚಿತ್ರದುರ್ಗದಲ್ಲೀಗ, ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ. ಮಹಿಳೆಯರು, ಮಕ್ಕಳು ಎನ್ನದೇ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸ್ತಿರುವ ನಾಯಿಗಳ ದಾಳಿಗೆ ಬ್ರೇಕ್ ಹಾಕಬೇಕಾದ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಕೋಟೆನಾಡಿನ ಜನರಲ್ಲಿ ಬಾರಿ ಆತಂಕ ಮನೆ ಮಾಡಿದೆ.
undefined
ಹೀಗೆ ರಸ್ತೆ ಮಧ್ಯೆ ಬೀಡು ಬಿಟ್ಟಿರುವ ಬೀದಿ ನಾಯಿಗಳು. ಗುಂಪು,ಗುಂಪಾಗಿ ಓಡಾಡುವ ಬೀದಿ ನಾಯಿ ಕಂಡು ಭಯಭೀತರಾದ ಜನರು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ನಗರದಲ್ಲಿ, ಹೌದು, ಚಿತ್ರದುರ್ಗದ 35 ವಾರ್ಡ್ ಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರಬರಲು ಜನರುಯೋಚಿಸುವಂತಾಗಿದೆ.ವಾಯುವಿಹಾರ, ಶಾಲೆ ಹಾಗು ಕಚೇರಿಗೆ ತೆರಳುವ ನಾಗರೀಕರು ಒಮ್ಮೆ ನಾಯಿಗಳ ಬಗ್ಹೆ ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ. ಅಲ್ದೇ ಕಳೆದ ಮೂರು ದಿನಗಳ ಹಿಂದೆಯಷ್ಟೇ ಮೆದೇಹಳ್ಳಿ ಗ್ರಾಮದಲ್ಲಿ ಹತ್ತು ವರ್ಷದ ತರುಣ್ ಎಂಬ ಬಾಲಕ ನಾಯಿ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದೂ, ಜೆಸಿಆರ್ ಬಡಾವಣೆಯ ನಾಲ್ವರು ಮಕ್ಕಳು ನಾಯಿಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತಿದ್ದಾರೆ.ಇದರ ಬೆನ್ನಲ್ಲೆ ಯುವಕನೋರ್ವ ಬೈಕಲ್ಲಿ ತೆರಳುವಾಗ,ದಾಳಿಗೆ ದಾದ ಬೀದಿ ನಾಯಿಯಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಬಿದ್ದ ಚಿತ್ರದುರ್ಗದ ವಿಶ್ವನಾರಯಣಮೂರ್ತಿ ತಮ್ಮ ಕೈ ಮೂಳೆ ಮುರಿತಕ್ಕೊಳಗಾಗಿ,ಯಾತನೆ ಅನುಭವಿಸ್ತಿದ್ದಾರೆ.ಆದ್ರೆ ಈ ನಾಯಿ ಹಾವಳಿಗೆ ಬ್ರೇಕ್ ಹಾಕಬೇಕಾದ ನಗರಸಭೆ ಅಧಿಕಾರಿಗಳು ಮಾತ್ರ ನಿದ್ರಾವಸ್ಥೆಯಲ್ಲಿದ್ದಾರೆ.ಹೀಗಾಗಿ ನೊಂದ ನಾಗರೀಕರು ಅಧಿಕಾರಿಗಳ ನಿರ್ಲಕ್ಷೆವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ಬೀದಿನಾಯಿಗಳನ್ನು ಶಿಫ್ಟ್ ಮಾಡುವಂತೆ ಆಗ್ರಹಿಸಿದ್ದಾರೆ..
ಸಿಎಂ ಸಿದ್ದರಾಮಯ್ಯ ಮೋಸಗಾರ, ದಲಿತರ ಪರವಾಗಿಲ್ಲ: ಗೋವಿಂದ ಕಾರಜೋಳ ಆರೋಪ
ಇನ್ನು ಈ ಬಗ್ಗೆ ಚಿತ್ರದುರ್ಗ ನಗರಸಭೆಯ ಪೌರಾಯುಕ್ತರಾದ ರೇಣುಕ ಅವರನ್ನು ಕೇಳಿದ್ರೆ ನಾಯಿಗಳ ಹಾವಳಿ ನಿಯಂತ್ರಿಸಲು, ಡಿಸೆಂಬರ್ 16 ರಂದು ಟೆಂಡರ್ ಕರೆಯಲಾಗಿದೆ. ಜನವರಿ 5 ರಂದು ಟೆಂಡರ್ ಓಪನ್ ಮಾಡಲಿದ್ದು, ಶೀಘ್ರದಲ್ಲೇ ನಾಯಿಹಾವಳಿಗೆ ಬ್ರೇಕ್ ಹಾಕ್ತಿವಿ ಅಂತ ಭರವಸೆ ನೀಡಿದ್ದಾರೆ. ಅದೇ ರೀತಿ ಸಾರ್ವಜನಿಕರು ಏರಿಯಾಗಳಲ್ಲಿ ಫುಡ್ ಹಾಕೋದನ್ನು ಸ್ವಲ್ಪ ಕಡಿಮೆ ಮಾಡಬೇಕು. ಹಾಗೆಯೇ ನಾನ್ ವೆಜ್ ಶಾಪ್ ಗಳ ಬಳಿಯೂ ಬೀದಿ ನಾಯಿಗಳಿಗೆ ಫುಡ್ ಹಾಕ್ತಿರೋದ್ರಿಂದ ನಾಯಿಗಳ ಹಾವಳಿ ಹೆಚ್ಚಾಗ್ತಿದೆ ಎನ್ನುವ ಮಾಹಿತಿ ಬಂದಿದೆ. ಸಾರ್ವಜನಿಕರು ಸಹಕರಿಸಿದ್ರೆ ಕ್ರಮ ಕೈಗೊಳ್ಳಲು ಅನುಕೂಲ ಆಗಲಿದೆ ಎಂದು ಜನರಲ್ಲಿ ಮನವಿ ಮಾಡಿದರು
ಒಟ್ಟಾರೆ ಬೀದಿನಾಯಿಗಳ ದಾಳಿಗೆ ಚಿತ್ರದುರ್ಗದ ಜನರು ಬೆಚ್ಚಿಬಿದ್ದಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಟೆಂಡರ್ ಕಥೆ ಹೇಳ್ತಾ ಕಾಲಾಹರಣ ಮಾಡ್ತಿದ್ದಾರೆ. ಹೀಗಾಗಿ ದುರ್ಗದ ಜನರಲ್ಲಿ ಬಾರಿ ಆತಂಕ ಮನೆ ಮಾಡಿದೆ. ಇನ್ನಾದ್ರು ಅಧಿಕಾರಿಗಳು ಸ್ಪೀಡಾಗಿ ಬೀದಿ ನಾಯಿಗಳನ್ನು ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಬೇಕಿದೆ.