ಉಡುಪಿಯಲ್ಲಿ ಕ್ವಾರಂಟೈನ್‌ನಿಂದ 1500 ಮಂದಿ ಮನೆಗೆ

Kannadaprabha News   | Asianet News
Published : May 27, 2020, 02:30 PM IST
ಉಡುಪಿಯಲ್ಲಿ ಕ್ವಾರಂಟೈನ್‌ನಿಂದ 1500 ಮಂದಿ ಮನೆಗೆ

ಸಾರಾಂಶ

ಜಿಲ್ಲೆಯ ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸುಮಾರು 1500 ಮಂದಿ ತಮ್ಮ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿದ್ದು ಮತ್ತು ಅವರ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು ಅವರನ್ನೆಲ್ಲಾ ಮಂಗಳವಾರ ಮನೆಗೆ ಕಳುಹಿಸಲಾಗಿದೆ.

ಉಡುಪಿ(ಮೇ 27): ಜಿಲ್ಲೆಯ ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸುಮಾರು 1500 ಮಂದಿ ತಮ್ಮ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿದ್ದು ಮತ್ತು ಅವರ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು ಅವರನ್ನೆಲ್ಲಾ ಮಂಗಳವಾರ ಮನೆಗೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ ಮುಂಬೈ, ತೆಲಂಗಾಣ ಇತ್ಯಾದಿ ಹೊರ ರಾಜ್ಯ ಮತ್ತು ದುಬೈ, ಮಸ್ಕತ್‌ಗಳಿಂದ ಬಂದ ಸುಮಾರು 8142 ಮಂದಿ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದು, ಅವರೆಲ್ಲರ ಗಂಟಲದ್ರವದ ಮಾದರಿಗಳನ್ನು ಹಂತಹಂತವಾಗಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.

ವಿದ್ಯಾರ್ಥಿನಿಯ ಕವನ ಪುಸ್ತಕಕ್ಕೆ ಅಭಿ​ನಂದನಾ ಪತ್ರ ಬರೆದ ಶಿಕ್ಷಣ ಸಚಿವ

ಇದುವರೆಗೆ ಸುಮಾರು 3,200 ಮಂದಿಯ ಪರೀಕ್ಷಾ ವರದಿಗಳು ನೆಗೆಟಿವ್‌ ಬಂದಿವೆ, ಅವರಲ್ಲಿ 14 ದಿನಗಳ ಕ್ವಾರಂಟೈನ್‌ ಅವಧಿಯನ್ನು ಮುಗಿಸಿದ ಸುಮಾರು 1500 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ. ಉಳಿದವರನ್ನು 14 ದಿನಗಳ ಅವಧಿ ಮುಗಿಯುತ್ತಿದ್ದಂತೆ ಮನೆಗೆ ಕಳುಹಿಸಲಾಗುವುದು ಮತ್ತು ಅವರ ಮೇಲೆ ಆರೋಗ್ಯ ಇಲಾಖೆಯಿಂದ ನಿಗಾ ಇಡಲಾಗುತ್ತದೆ.

ಗುಜರಾತಿಂದ ಬಿಹಾರಕ್ಕೆ ಹೊರಟಿದ್ದ ಶ್ರಮಿಕ್‌ ರೈಲು ತಲುಪಿದ್ದು ಬೆಂಗಳೂರಿಗೆ!

ಒಂದು ಬಾರಿ ಕ್ವಾರಂಟೈನ್‌ ಕೇಂದ್ರ ಸಂಪೂರ್ಣ ಖಾಲಿಯಾದ ಮೇಲೆ ಅದನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿ, ಮತ್ತೆ ಹೊರ ರಾಜ್ಯ - ದೇಶಗಳಿಂದ ಬರುವವರಿಗೆ ಅವಕಾಶ ನೀಡಿ ಆ ಕೇಂದ್ರಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದವರು ತಿಳಿಸಿದ್ದಾರೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!