ಕರ್ನಾಟಕದ ನಕ್ಸಲ್‌ ಶ್ರೀಮತಿಗೆ 15 ದಿನ ನ್ಯಾಯಾಂಗ ಬಂಧನ

Kannadaprabha News   | Asianet News
Published : Mar 13, 2020, 10:06 AM IST
ಕರ್ನಾಟಕದ ನಕ್ಸಲ್‌ ಶ್ರೀಮತಿಗೆ 15 ದಿನ ನ್ಯಾಯಾಂಗ ಬಂಧನ

ಸಾರಾಂಶ

ನಕ್ಸಲರ ಜೊತೆ ನಂಟು ಹೊಂದಿದ ಶಂಕೆ ಮೇರೆಗೆ ಬುಧವಾರ ಕೊಯಮತ್ತೂರಿನಲ್ಲಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ಮೂಲದ ಮಹಿಳೆ ಶ್ರೀಮತಿ ಅವರನ್ನು ಗುರುವಾರ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶಿಸಿದೆ.  

ಬೆಂಗಳೂರು[ಮಾ.13]: ನಕ್ಸಲರ ಜೊತೆ ನಂಟು ಹೊಂದಿದ ಶಂಕೆ ಮೇರೆಗೆ ಬುಧವಾರ ಕೊಯಮತ್ತೂರಿನಲ್ಲಿ ಬಂಧನಕ್ಕೊಳಗಾಗಿದ್ದ ಕರ್ನಾಟಕ ಮೂಲದ ಮಹಿಳೆ ಶ್ರೀಮತಿ ಅವರನ್ನು ಗುರುವಾರ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಖಚಿತ ಮಾಹಿತಿ ಮೇರೆಗೆ ಬುಧವಾರ ಕಾರಾರ‍ಯಚರಣೆಗೆ ಇಳಿದಿದ್ದ ತಮಿಳುನಾಡಿನ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ತಂಡ, ಕರ್ನಾಟಕದಲ್ಲಿ ಮಾವೋವಾದಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಚಿಕ್ಕಮಗಳೂರು ಮೂಲದ ಶ್ರೀಮತಿಯನ್ನು ಬಂಧಿಸಿತ್ತು.

ಶಾಲಾ ಶುಲ್ಕ ಕಟ್ಟದ್ದಕ್ಕೆ ಮಕ್ಕಳನ್ನು ಪರೀಕ್ಷಾ ಹಾಲ್‌ನಿಂದ ಹೊರಹಾಕಿದ್ರು!

ಗುರುವಾರ ಆಕೆಯನ್ನು ಭಾರೀ ಬಿಗಿ ಬಂದೋಬಸ್ತ್‌ನಲ್ಲಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಆರ್‌. ಶಕ್ತಿವೇಲ್‌ ಅವರ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು ಮಾ.26ರವರೆಗೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

PREV
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ