ಚಾಮರಾಜನಗರ: ಹೆಣ್ಣು ಮಗುವಿಗೆ ಜನ್ಮ ನೀಡಿದ 14ರ ಬಾಲೆ

Kannadaprabha News   | Asianet News
Published : Apr 16, 2020, 11:32 AM IST
ಚಾಮರಾಜನಗರ: ಹೆಣ್ಣು ಮಗುವಿಗೆ ಜನ್ಮ ನೀಡಿದ 14ರ ಬಾಲೆ

ಸಾರಾಂಶ

ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಮಂಗಳವಾರ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ. ತಾಲೂಕಿನ ಪಾಳ್ಯ ಗ್ರಾಮದ ಬಾಲಕಿಯೊಬ್ಬಳು ತಾಯಿಯಾಗಿದ್ದಾಳೆ.

ಚಾಮರಾಜನಗರ(ಏ.16): ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಮಂಗಳವಾರ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿರುವ ಘಟನೆ ನಡೆದಿದೆ. ತಾಲೂಕಿನ ಪಾಳ್ಯ ಗ್ರಾಮದ ಬಾಲಕಿಯೊಬ್ಬಳು ತಾಯಿಯಾಗಿದ್ದಾಳೆ.

ಈ ಸಂಬಂಧ ಸರ್ಕಾರಿ ಆಸ್ಪತ್ರೆ ವೈದ್ಯಾ​ಧಿಕಾರಿ ಅವರು ಅಪ್ರಾಪ್ತ ಬಾಲಕಿಯೊಬ್ಬಳು ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿದ್ದು, ಏಪ್ರಿಲ್‌ 14 ರ ಸಂಜೆ 7.50 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ.

ಹಾಲು ಕುಡಿಯುವಾಗ ಕಂದಮ್ಮ ಕಚ್ಚಿದ್ದಕ್ಕೆ 90 ಬಾರಿ ಚುಚ್ಚಿದ ತಾಯಿ..!

ವೈದ್ಯಾ​ಧಿಕಾರಿ ಪೊಲೀಸ್‌ ಠಾಣೆಗೆ ಅಪ್ರಾಪ್ತ ಬಾಲೆ ತಾಯಿ ಆಗಿರುವ ಬಗ್ಗೆ ಮೆಮೋ ಕಳುಹಿಸಿದಾಗ, ಬಾಲಕಿಯೂ ವಿವಾಹವಾಗಿರುವ ಆಕೆಯ ಗಂಡ ರಮೇಶನ ಮೇಲೆ ಪೊಸ್ಕೋ ಕಾಯಿದೆಯಡಿ ಮೊಕದ್ದಮೆ ದಾಖಲು ಮಾಡಲು, ಪಿಎಸ್‌ಐ ಸುಜಾತ ಅವರು ಬಾಲಕಿ ಹೇಳಿಕೆ ಪಡೆದಿದ್ದಾರೆ. ಹೇಳಿಕೆಯಲ್ಲಿ ನನ್ನ ತಂದೆ ತಾಯಿ ಚಿಕ್ಕಂದಿನಲ್ಲೇ ಬಿಟ್ಟು ಹೋಗಿರುತ್ತಾರೆ. ನಾನು ನನ್ನ ಅಜ್ಜಿ ಮನೆಯಲ್ಲಿದ್ದಾಗ, ಇದೇ ಗ್ರಾಮದ ರಮೇಶನನ್ನು ಪ್ರೀತಿ ಮಾಡಿ, ಅಜ್ಜಿಯ ಒಪ್ಪಿಗೆ ಪಡೆದು ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಮದುವೆಯಾದ ಬಳಿಕ ಸುಂಟಿಕೊಪ್ಪದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದೆವು. ಇದೀಗ ಕೊರೋನಾ ಪರಿಣಾಮ ನಾವು ಊರಿಗೆ ಬಂದಿದ್ದೆವು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾಳೆ.

ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಕಾರಣಕರ್ತ ಜೈಲಿಗೆ

ಈಗ ಹೆರಿಗೆಗೆ ಬಂದಾಗ ನಾನು ಅಪ್ರಾಪ್ತ ಬಾಲಕಿಯಾಗಿ ಮಗುವಿಗೆ ತಾಯಿಯಾಗಿರುವುದು ಅಪರಾಧ ಎಂದು ಗೊತ್ತಾಯಿತು. ನಾನು ವಿದ್ಯಾವಂತಳಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ರಮೇಶ ಪೊಸ್ಕೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಉತ್ತರಕನ್ನಡ: ಒಂದು ಎಕರೆ ಜಮೀನಿಗೆ ಹರಿದ ನೆತ್ತರು; ಕೋರ್ಟ್ ಮೆಟ್ಟಿಲೇರಿದ್ದಕ್ಕೇ ಪ್ರಾಣ ತೆಗೆದ ಪಾಪಿ!
Breaking News: ಕೋಮುದ್ವೇಷ ಭಾಷಣ ಆರೋಪ: ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮತ್ತೆ ಎಫ್‌ಐಆರ್!