ಬೆಳಗಾವಿ ಜಿಲ್ಲೆಯ 14.71 ಲಕ್ಷ ಕುಟುಂಬಗಳಿಗೆ ಗೃಹಲಕ್ಷ್ಮೀ ಲಾಭ

By Kannadaprabha News  |  First Published Jul 21, 2023, 9:16 PM IST

ಅರ್ಜಿ ಸಲ್ಲಿಕೆ ಕಾರ್ಯವನ್ನು ಆರಂಭಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಇಲಾಖೆಯ ಅಧಿಕಾರಿಗಳು ಅರ್ಹ ಮನೆ ಯಜಮಾನಿಯ ಬ್ಯಾಂಕ್‌ ಖಾತೆಗೆ ನೇರವಾಗಿ .2 ಸಾವಿರ ನಗದು ಜಮೆಯಾಗುವಂತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.


ಜಗದೀಶ ವಿರಕ್ತಮಠ

ಬೆಳಗಾವಿ(ಜು.21): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಮನೆ ಯಜಮಾನಿಗೆ ಮಾಸಿಕ .2 ಸಾವಿರ ಹಣ ನೀಡುವ ಗೃಹಲಕ್ಷ್ಮೀ ಯೋಜನೆಗೆ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದ್ದು, ಜಿಲ್ಲೆಯಲ್ಲಿ 14.71 ಲಕ್ಷ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

Tap to resize

Latest Videos

ಕುಟುಂಬದ ಯಜಮಾನಿಗೆ ಖಾತೆಗೆ ಪ್ರತಿ ತಿಂಗಳು 2 ಸಾವಿರ ನಗದನ್ನು ಸರ್ಕಾರ ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಿದೆ. ಈ ಯೋಜನೆ ಲಾಭಪಡೆದುಕೊಳ್ಳಲು ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ. ಘೋಷಣೆ ಮಾಡಿದಾಗಿನಿಂದಲೂ ಒಂದಿಲ್ಲೊಂದು ಅಡೆತಡೆಗಳನ್ನು ಎದುರಿಸುತ್ತ ಬಂದಿದ್ದ ಗೃಹಲಕ್ಷ್ಮೀ ಯೋಜನೆಗೆ ಕೊನೆಗೆ ಸರ್ಕಾರ ಜಾರಿಗೊಳಿಸಲು ಕನಿಷ್ಠ ಷರತ್ತುಗಳನ್ನು ಹಾಕುವುದರ ಮೂಲಕ ಅನುಷ್ಠಾನಗೊಳಿಸಿದೆ. ಅಲ್ಲದೇ ಅರ್ಜಿ ಸಲ್ಲಿಕೆ ಕಾರ್ಯವನ್ನು ಆರಂಭಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಇಲಾಖೆಯ ಅಧಿಕಾರಿಗಳು ಅರ್ಹ ಮನೆ ಯಜಮಾನಿಯ ಬ್ಯಾಂಕ್‌ ಖಾತೆಗೆ ನೇರವಾಗಿ .2 ಸಾವಿರ ನಗದು ಜಮೆಯಾಗುವಂತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿಯೂ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 2.58 ಲಕ್ಷ ಫಲಾನುಭವಿಗಳು

ಪ್ರತಿ ತಿಂಗಳು ಜಿಲ್ಲೆಗೆ ಒಟ್ಟು .2,94,14,84,000 ನಗದು:

ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಳ ಸಂಖ್ಯೆ 68,642, ಬಡತನ ರೇಖೆಗಿಂತ ಕಡಿಮೆ (ಬಿಪಿಎಲ್‌) ಇರುವ ಕುಟುಂಬಗಳು 10,80,890 ಹಾಗೂ ಬಡತನ ರೇಖೆಗಿಂತ ಮೇಲಿನ (ಎಪಿಎಲ್‌) 3,21,210 ಕುಟುಂಬಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 14,70,742 ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳು ಈ ಯೋಜನೆ ವ್ಯಾಪ್ತಿಗೆಗೊಳಪಡಲಿದ್ದಾರೆ. ಮಾಸಿಕ .2 ಸಾವಿರದಂತೆ ಪ್ರತಿ ತಿಂಗಳು ಜಿಲ್ಲೆಗೆ ಒಟ್ಟು .2,94,14,84,000 ನಗದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿನದಲ್ಲಿರುವ ಅಂಗನವಾಡಿ ಕಾರ್ಯಕರ್ತರು ಗೃಹಲಕ್ಷ್ಮೇ ಯೋಜನೆ ಯಶಸ್ವಿಗೆ ಹೆಚ್ಚಿನ ಶ್ರಮವಹಿಸಲಿದ್ದಾರೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಮಯದಲ್ಲಿ ಮಹಿಳೆಯರಿಗೆ ಸಹಾಯ ಮಾಡಲಿದ್ದಾರೆ. ಆದರೆ, ಆದಾಯ ತೆರಿಗೆ ಪಾವತಿದಾರರು, ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಮನೆ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರನಾಗಿದ್ದರೂ ಈ ಯೋಜನೆಯಿಂದ ವಂಚಿತರಾಗಲಿದ್ದು, ಉಳಿದಂತೆ ಇತರರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

ಯಾರು ಅರ್ಹರು, ಯಾರು ಅನರ್ಹರು?

ಪಡಿತರ ಚೀಟಿ ಹೊಂದಿ ಅದರಲ್ಲಿ ಯಜಮಾನಿ ಎಂದು ಗುರುತಿಸಿರುವವರು, ಸಕ್ರೀಯ ಬ್ಯಾಂಕ್‌ ಖಾತೆ, ಪಡಿತರ ಚೀಡಿ ಹೊಂದಿದವರು ಅರ್ಹರಾಗಿದ್ದಾರೆ. ಯಜಮಾನಿ ಹಾಗೂ ಅವಳ ಪತಿ ಜಿಎಸ್‌ಟ್‌ ರಿಟರ್ನ್ಸ್‌ ಸಲ್ಲಿಸುವ, ಆದಾಯ ತೆರಿಗೆ ಪಾವತಿಸುತ್ತಿದ್ದರೇ ಅಂತಹವರು ಅನರ್ಹರಾಗುತ್ತಾರೆ. ಅಲ್ಲದೇ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಜನರಲ್ಲಿ ಗೃಹಲಕ್ಷ್ಮೀ ಯೋಜನೆ ಕುರಿತು ಮೂಡುವ ಸುಮಾರು 48 ಪ್ರಶ್ನೆಗಳಿಗೆ ಮಾರ್ಗೊಪಾಯಗಳನ್ನು ಕಂಡುಕೊಂಡಿದ್ದಾರೆ. ಅಲ್ಲದೇ ಅರ್ಜಿ ಸಲ್ಲಿಕೆ ಸಮಯದಲ್ಲಿ ದಟ್ಟಣೆಯಾಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಂಡಿರುವ ಅಧಿಕಾರಿಗಳು 8147500500ಗೆ ಎಸ್‌ಎಂಎಸ್‌ ಮಾಡಿದಲ್ಲಿ ತಕ್ಷಣ ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ದಿನಾಂಕ ಮತ್ತು ಸಮಯದ ಬಗ್ಗೆ ಮರಳಿ ಬರಲಿದ್ದು, ಆ ಸಮಯಕ್ಕೆ ಅರ್ಜಿದಾರರು ಹೋಗಿ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ನಿಗದಿಸದಿರುವುದರಿಂದ ಅರ್ಜಿದಾರರು ಶುಲ್ಕ ನೀಡುವಂತಿಲ್ಲ.

ಅರ್ಜಿ ಸಲ್ಲಿಕೆಗಿಲ್ಲ ಗಡವು:

ಹಲವು ಸವಾಲು ಮತ್ತು ಅಡೆತಡೆಗಳ ಮಧ್ಯೆ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಕಾರ್ಯಕ್ಕೂ ಚಾಲನೆಯನ್ನು ನೀಡಲಾಗಿದ್ದು, ಆ.15ರ ನಂತರ ಮನೆ ಯಜಮಾನಿ ಬ್ಯಾಂಕ್‌ ಖಾತೆಗೆ ನೇರವಾಗಿ .2 ಸಾವಿರ ನಗದು ಜಮೆಯಾಗಲಿದೆ. ಗ್ರಾಮ ಒನ್‌, ಬೆಳಗಾವಿ ಓನ್‌, ಕರ್ನಾಟಕ ಓನ್‌ ಸೆಂಟರ್‌ಗಳಲ್ಲಿ ಹಾಗೂ ಸರ್ಕಾರ ನೇಮಕ ಮಾಡುವ ಪ್ರಜಾಪ್ರತಿನಿಧಿಗಳ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ಅರ್ಜಿ ಸಲ್ಲಿಕೆಗೆ ಯಾವುದೇ ದಿನ ಗಡವು ನೀಡಿಲ್ಲ.

ಗೃಹ ಲಕ್ಷ್ಮಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: ಮೊದಲ ದಿನ 60 ಸಾವಿರ ಮಹಿಳೆಯರ ನೋಂದಣಿ

ಅರ್ಹ ಮನೆ ಯಜಮಾನಿಗೆ ಮಾಸಿಕ 2 ಸಾವಿರ ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಹಾಕಲಾಗುತ್ತದೆ. ನಿಗದಿತ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಪಡಿಸಿಲ್ಲ. ಯಾವಗಲಾದರೂ ಅರ್ಜಿಸಲ್ಲಿಬಹುದು. ಹೆಚ್ಚಿನ ಮಾಹಿತಿಗಾಗಿ ಸಹವಾಣಿ 1902 ಕರೆ ಮಾಡಿ ಅಥವಾ 8147500500ಗೆ ಪಡಿತರ ಸಂಖ್ಯೆಯನ್ನು ಎಸ್‌ಎಂಎಸ್‌ ಮಾಡಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದ್ದಾರೆ.  

ಕ್ರಮ ಸಂಖ್ಯೆ ತಾಲೂಕು ಕುಟುಂಬಗಳ ಸಂಖ್ಯೆ (ಪಡಿತರ ಚೀಟಿ)

1. ಅಥಣಿ 1,16,368
2. ಬೈಲಹೊಂಗಲ 79,558
3. ಬೆಳಗಾವಿ 2,91,611
4. ಚಿಕ್ಕೋಡಿ 1,16,559
5. ಗೋಕಾಕ 1,23,415
6. ಹುಕ್ಕೇರಿ 1,19,338
7. ಖಾನಾಪೂರ 82,909
8. ರಾಯಬಾಗ 1,19,967
9. ರಾಮದುರ್ಗ 75,983
10. ಸವದತ್ತಿ 1,04,913
11. ಕಾಗವಾಡ 48,851
12. ಚನ್ನಮ್ಮನ ಕಿತ್ತೂರ 38,944
13. ಮೂಡಲಗಿ 65,432
14. ನಿಪ್ಪಾಣಿ 86,894
ಒಟ್ಟು 14,70,742

click me!