ಟೊಮ್ಯಾಟೊ ರಕ್ಷಣೆಗೆ ವಿದ್ಯುತ್ ದೀಪ ಅಳವಡಿಸಿ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿರುವ ರೈತ

By Suvarna News  |  First Published Jul 21, 2023, 7:50 PM IST

ಮೊಳಕಾಲ್ಮೂರು ತಾಲ್ಲೂಕಿನ ಮುತ್ತಿಗಾರಹಳ್ಳಿ ಗ್ರಾಮದ ರೈತ ಟಿಪ್ಪು ಸುಲ್ತಾನ್ ತನ್ನ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ಹಾಕಿ ಅವುಗಳನ್ನು ಕಾಯಲು ಸಾಕಷ್ಟು ಹರಸಾಹಸ ಪಡ್ತಿದ್ದಾರೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.21): ಟೊಮ್ಯಾಟೊ ಬೆಳೆಗೆ ಸದ್ಯ ರಾಜ್ಯದಲ್ಲಿ ಬಂಗಾರದ ಬೆಲೆ ಇದೆ. ಹಾಗಾಗಿ ಟೊಮ್ಯಾಟೊ ಬೆಳೆಯನ್ನು ರೈತರು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬರ್ತಿದ್ದಾರೆ. ಕೋಟೆನಾಡು ಚಿತ್ರದುರ್ಗ ಕೂಡ ಟೊಮ್ಯಾಟೊ ಬೆಳೆಯೋದ್ರಲ್ಲಿ ಸ್ವಲ್ಪ ಮುಂದು ಎಂದ್ರೆ ತಪ್ಪಾಗಲಿಕ್ಕಿಲ್ಲ. ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೊಮ್ಯಾಟೊ ಬೆಳೆ‌ ಬೆಳೆಯುತ್ತಾರೆ. ಅದಕ್ಕಾಗಿ ರೈತರು ಟೊಮ್ಯಾಟೊ ಬೆಳೆ ಕಾಯಲು ಸಾಕಷ್ಟು ಸರ್ಕಸ್ ಮಾಡ್ತಿದ್ದಾರೆ.

Latest Videos

undefined

6 ವರ್ಷದಲ್ಲಿಯೇ ಎರಡು ವಿಶ್ವದಾಖಲೆ ಮುಡಿಗೇರಿಸಿಕೊಂಡ ಚಿತ್ರದುರ್ಗದ ಪೋರ!

ಮೊಳಕಾಲ್ಮೂರು ತಾಲ್ಲೂಕಿನ ಮುತ್ತಿಗಾರಹಳ್ಳಿ ಗ್ರಾಮದ ರೈತ ಟಿಪ್ಪು ಸುಲ್ತಾನ್ ತನ್ನ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ಹಾಕಿ ಅವುಗಳನ್ನು ಕಾಯಲು ಸಾಕಷ್ಟು ಹರಸಾಹಸ ಪಡ್ತಿದ್ದಾರೆ. ಜಮೀನನ್ನು ಗುತ್ತಿಗೆ ಪಡೆದು ಆರು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿರುವ ಟಿಪ್ಪು ತನ್ನ ಬೆಳೆಯ ರಕ್ಷಣೆಗಾಗಿ ಜಮೀನಿನ‌ ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಸಿದ್ದು ವಿಶೇಷವಾಗಿದೆ. ಹಗಲು ರಾತ್ರಿ ಎನ್ನದೇ ಟೊಮ್ಯಾಟೊ ರಕ್ಷಣೆ ಮಾಡೋದ್ರಲ್ಲಿಯೇ ರೈತರು ಮುಂದಾಗಿದ್ದಾರೆ. 

ಸದ್ಯ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಗೆ ಬಂಗಾರದ ಬೆಲೆ ಇರುವ ಕಾರಣ ಕಳ್ಳ,‌ ಖದೀಮರ ಹಾವಳಿ ತಪ್ಪಿಸಲು ರೈತ ಟಿಪ್ಪು ಮಾಡಿರುವ ಡಿಫರೆಂಟ್ ಪ್ಲಾನ್ ಎಲ್ಲೆಡೆ ವೈರಲ್‌ ಆಗಿದೆ. ಈ ಹಿಂದೆಯೂ ಮೂರು ಬಾರಿ ಟೊಮ್ಯಾಟೊ ಬೆಳೆದಿದ್ದ ಟಿಪ್ಪು ಲಾಸ್ ನಿಂದಾಗಿ ಕೈ ಸುಟ್ಟುಕೊಂಡಿದ್ದ, ಆದ್ರೆ ಈ ಬಾರಿ ಟೊಮ್ಯಾಟೊಗೆ ಉತ್ತಮ ಬೆಲೆ ಇರುವ ಕಾರಣ ಈ ಬಾರಿಯಾದ್ರು ಉತ್ತಮ ಲಾಭ ಪಡೆಯುವ ನಿಟ್ಟಿನಲ್ಲಿ ಟೊಮ್ಯಾಟೊ ರಕ್ಷಣೆ ಮಾಡೋದ್ರಲ್ಲಿ ಸ್ವಲ್ಪ ಜಾಸ್ತಿ ಕಳೆಯುತ್ತಿದ್ದಾರೆ.

ದಾವಣಗೆರೆಯಲ್ಲಿ ಬಾರ್ ಹಟಾವೋ, ಕುಡುಕರ ಕಾಟಕ್ಕೆ ಬೇಸತ್ತ ಮಹಿಳೆಯರಿಂದ ಧರಣಿ ಎಚ್ಚರಿಕೆ

ಟೊಮ್ಯಾಟೊ ಬೆಳೆ ಸುತ್ತಲೂ ವಿದ್ಯುತ್ ದೀಪ ಅಳವಡಿಸಿದ್ದಲ್ಲದೇ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನಿತ್ಯ ಹಗಲು ರಾತ್ರಿ ಎನ್ನದೇ ಟೊಮ್ಯಾಟೊ ರಕ್ಷಣೆ‌ ಮಾಡಿಸುತ್ತಿದ್ದಾನೆ. ಕೂಲಿ ಕಾರ್ಮಿಕರನ್ನು ಸರದಿಯಂತೆ ಪಾಳಿ ಕೆಲದ ಮಾಡಿಸ್ತಿರೋ ರೈತ ಟಿಪ್ಪು ಸದ್ಯಕ್ಕೆ ಸುಮಾರು ೨೦ ಲಕ್ಷಕ್ಕೂ ಅಧಿಕ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಟೊಮ್ಯಾಟೊ ಬೆಳೆ ರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸಿರೋ ರೈತನ ಪ್ಲಾನ್ ಜಿಲ್ಲೆಯ ಎಲ್ಲೆಡೆ ಸಖತ್ ವೈರಲ್ ಆಗಿದೆ.

click me!