ಕೊರೋನಾತಂಕ: ಮಹಾರಾಷ್ಟ್ರದಿಂದ ವಿಜಯಪುರಕ್ಕೆ ಬಂದ 1348 ಮಂದಿ..!

By Kannadaprabha News  |  First Published May 16, 2020, 12:51 PM IST

ವಿಜಯಪುರ ನಗರಕ್ಕೆ ಆಗಮಿಸಿದ 1348 ಪ್ರಯಾಣಿಕರು| ಇವರಿಗೆಲ್ಲ ಆಯಾ ತಾಲೂಕಿನಲ್ಲಿ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಮಾಡಿದ ಜಿಲ್ಲಾಡಳಿತ| ಪ್ರಯಾಣಿಕರನ್ನು ವಿಜಯಪುರ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಿಗೆ ಕರೆದೊಯ್ಯಲು 41 ಬಸ್‌ಗಳ ವ್ಯವಸ್ಥೆ|


ವಿಜಯಪುರ(ಮೇ.16): ಮಹಾರಾಷ್ಟ್ರದ ಸಿಂಧುದುರ್ಗದ ಮೂಲಕ ಒಟ್ಟು 1348 ಪ್ರಯಾಣಿಕರು ಶುಕ್ರವಾರ ವಿಜಯಪುರ ಜಿಲ್ಲೆಗೆ ಆಗಮಿಸಿದ್ದಾರೆ. ಇವರನ್ನು ನಗರದ ರೈಲ್ವೆ ನಿಲ್ದಾಣದಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಕಳುಹಿಸಿದ ಜಿಲ್ಲಾಡಳಿತ ಆಯಾ ತಾಲೂಕಿನಲ್ಲಿಯೇ ಕ್ವಾರಂಟೈನ್‌ ಮಾಡಲು ವ್ಯವಸ್ಥೆ ಮಾಡಿಕೊಂಡಿದೆ. 

ಈ ಎಲ್ಲ ಪ್ರಯಾಣಿಕರನ್ನು ವಿಜಯಪುರ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಿಗೆ ಕರೆದೊಯ್ಯಲು 41 ಬಸ್‌ಗಳ ವ್ಯವಸ್ಥೆ ಮಾಡಿಕೊಂಡಿತ್ತು. ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಉಪಾಹಾರ, ಕುಡಿಯುವ ನೀರು, ಬಿಸ್ಕೆಟ್‌ ನೀಡಲಾಗಿದೆ. 

Tap to resize

Latest Videos

ಸಮುದಾಯ ಭವನ ಕೀ ಕೇಳಿದ ಪೊಲೀಸಪ್ಪನ ಕಿವಿ ಕಚ್ಚಿದ ಶಿಕ್ಷಕ!

ಈ ಎಲ್ಲ ಪ್ರಯಾಣಿಕರಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಸೇರಿದಂತೆ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾದ್ಯಂತ ಈ ಎಲ್ಲ ಪ್ರಯಾಣಿಕರ ಕ್ವಾರಂಟೈನ್‌ಗೂ ಜಿಲ್ಲಾಡಳಿತದ ವತಿಯಿಂದ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿಸಲಾಗಿದೆ.
 

click me!