ಕನ್ನಡಪ್ರಭ, ಸುವರ್ಣ ನ್ಯೂಸ್‌.ಕಾಂ ವರದಿ: ಪಾರ್ಶ್ವವಾಯು ಪೀಡಿತ ವೃದ್ಧೆಗೆ ಸಿಕ್ತು ಔಷಧ, ಆಹಾರ ಧಾನ್ಯ

By Kannadaprabha News  |  First Published May 16, 2020, 12:30 PM IST

70 ವರ್ಷದ ಪಾರ್ಶ್ವವಾಯು ಪೀಡಿತ ವೃದ್ಧೆಗೆ ಸಿಕ್ಕಿದ ಔಷಧ, ಆಹಾರ ಧಾನ್ಯ| ಸಂಕಷ್ಟದಲ್ಲಿದ್ದ ಬಾದಾಮಿ ತಾಲೂಕಿನ ಗೋನಾಳ ಗ್ರಾಮದ ವೃದ್ಧೆ ಶಾಂತಮ್ಮ ಹಿರೇಮಠ ಎಂಬ ವೃದ್ಧೆ| ವೃದ್ಧೆಯ ಬಗ್ಗೆ ‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್‌.ಕಾಂನಲ್ಲಿ ವರದಿ ಮಾಡಿತ್ತು|


ಬಾಗಲಕೋಟೆ(ಮೇ.16): ಲಾಕ್‌ಡೌನ್‌ನಿಂದಾಗಿ ಅನ್ನ, ಔಷಧ ಇಲ್ಲದೇ ಸಂಕಷ್ಟಪಡುತ್ತಿದ್ದ 70 ವರ್ಷದ ಪಾರ್ಶ್ವವಾಯು ಪೀಡಿತ ವೃದ್ಧೆಯ ಬಗ್ಗೆ ಶುಕ್ರವಾರ ‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್‌.ಕಾಂನಲ್ಲಿ ವರದಿ ಪ್ರಸಾರಗೊಂಡಿತ್ತು. ಈ ವರದಿಯ ನಂತರ ಬಾದಾಮಿ ಅಭಿವೃದ್ಧಿ ಸಮಿತಿಯ ಸದಸ್ಯರು ವೃದ್ಧೆಗೆ ಔಷಧ, ಅಗತ್ಯ ದಿನಸಿ ವಸ್ತುಗಳನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. 

ಬಾದಾಮಿ ತಾಲೂಕಿನ ಗೋನಾಳ ಗ್ರಾಮದ ವೃದ್ಧೆ ಶಾಂತಮ್ಮ ಹಿರೇಮಠ ಕಳೆದ ಕೆಲವು ದಿನಗಳಿಂದ ಪಾಶ್ರ್ವವಾಯುವಿಗೆ ತೆಗೆದುಕೊಳ್ಳುತ್ತಿದ್ದ ಔಷ​ಧ ಇಲ್ಲದೆ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಅಗತ್ಯ ದಿನಸಿ ಇಲ್ಲದೆ ಪರಿದಾಡುತ್ತಿದ್ದರು. ಈ ಬಗ್ಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌.ಕಾಂ ವರದಿ ಮಾಡಿತ್ತು. 

Tap to resize

Latest Videos

ಬಾದಾಮಿ: ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಆಹಾರ, ಔಷಧಿಯಿಲ್ಲದೆ ವೃದ್ಧೆಯ ಪರದಾಟ..!

ಇದನ್ನು ಗಮನಿಸಿದ ನಿವೃತ್ತ ಸೈನಿಕ ಈರಣ್ಣ ಪಟ್ಟಣದ, ಪ್ರವೀಣ ಬೋಳಿ, ಸತೀಶ್‌ ರಾಣೆಬೆನ್ನೂರ, ಬಸವರಾಜ ಗೋಗೇರಿ, ಬಸವರಾಜ ಹೂಲಿ, ಮಾರುತಿ ಬಾರಕೇರ ನೇತೃತ್ವದ ಸ್ನೇಹಿತ ಬಳಗ ಅಜ್ಜಿಗೆ ಸಹಾಯ ಮಾಡಿದ್ದಾರೆ. ದಾನಿಗಳಿಗೆ ವೃದ್ಧೆ ಕೃತಜ್ಞತೆ ಸಲ್ಲಿಸಿದ್ದಾಳೆ.
 

click me!