ಅಮೆರಿಕದ ಸಮುದ್ರ ಮಧ್ಯೆ ಹಡಗಲ್ಲಿ 131 ಭಾರತೀಯರ ದಿಗ್ಬಂಧನ

By Kannadaprabha News  |  First Published Mar 20, 2020, 10:28 AM IST

ಕೊರೋನಾ ವೈರಸ್‌ ಭೀತಿಯಿಂದ ಭಾರತ ಪ್ರವೇಶಕ್ಕೆ ಅವಕಾಶ ನಿರಾಕಸಲಾಗಿರುವ 131 ಭಾರತೀಯರೂ ಅಮೆರಿಕದ ಸಮುದ್ರದ ಮಧ್ಯೆ ಹಡಗಿನಲ್ಲಿ ದಿಗ್ಬಂಧನದಲ್ಲಿದ್ದಾರೆ. ಕಳೆದ ಭಾನುವಾರ ಇವರನ್ನು ಭಾರತಕ್ಕೆ ಕಳುಹಿಸುವ ಏರ್ಪಾಡು ಮಾಡಲಾಗಿತ್ತು.


 

ಮಂಗಳೂರು(ಮಾ.20): ಕೊರೋನಾ ವೈರಸ್‌ ಭೀತಿಯಿಂದ ಭಾರತ ಪ್ರವೇಶಕ್ಕೆ ಅವಕಾಶ ನಿರಾಕಸಲಾಗಿರುವ 131 ಭಾರತೀಯರೂ ಅಮೆರಿಕದ ಸಮುದ್ರದ ಮಧ್ಯೆ ಹಡಗಿನಲ್ಲಿ ದಿಗ್ಬಂಧನದಲ್ಲಿದ್ದಾರೆ. ಕಳೆದ ಭಾನುವಾರ ಇವರನ್ನು ಭಾರತಕ್ಕೆ ಕಳುಹಿಸುವ ಏರ್ಪಾಡು ಮಾಡಲಾಗಿತ್ತು.

Tap to resize

Latest Videos

ಆದರೆ ಕೊನೆಯ ಕ್ಷಣದಲ್ಲಿ ಕೊರೋನಾ ವೈರಸ್‌ ಕುರಿತಾದ ನೆಗೆಟಿವ್‌ ರಿಪೋರ್ಟ್‌ ನೀಡಲಿಲ್ಲ ಎನ್ನುವ ಕಾರಣಕ್ಕೆ 131 ಭಾರತೀಯರಿಗೂ ವಿಮಾನ ಪ್ರಯಾಣಕ್ಕೆ ಅವಕಾಶ ನಿರಾಕರಿಸಲಾಯಿತು.

ಕೊರೋನಾ ಭೀತಿ: ಕೇರಳ-ಕರ್ನಾಟಕ ಬಾರ್ಡರ್‌ನಲ್ಲಿ ದಿನಪೂರ್ತಿ ತಪಾಸಣೆ

ಈ ಕುರಿತಾಗಿ ಕೇಂದ್ರ ಸಚಿವ ಜೈಶಂಕರ್‌ ಅವರ ಗಮನ ಸೆಳೆಯಲಾಗಿತ್ತಾದರೂ, ಕೊರೋನಾ ಕುರಿತಾದ ಕೇಂದ್ರ ಸರ್ಕಾರದ ಕಠಿಣ ನಿಲುವಿನಿಂದ ವಿಮಾನ ಯಾನ ಸಂಸ್ಥೆಗಳು ನಿಯಮಗಳನ್ನೇ ಬಲಪಡಿಸಿತ್ತು.

ಈ ಕಾರಣದಿಂದ ದಡದಿಂದ ಸುಮಾರು 70 ಕಿ.ಮೀ. ದೂರದ ಸಮುದ್ರದಲ್ಲಿ ಹಡಗು ತಂಗಿದ್ದು ಭಾರತ ಸೇರಿದಂತೆ ಕೆಲವು ದೇಶದ ಪ್ರಜೆಗಳು ಕ್ರೂಸ್‌ ಹಡಗಿನಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದಾರೆ. ಇನ್ನೂ 14 ದಿನಗಳು ಅಲ್ಲೇ ಕಳೆಯಬೇಕಾದ ಸ್ಥಿತಿ ಎದುರಾಗಿದೆ ಎಂದು ಹಡಗಿನಲ್ಲೇ ಉಳಿದುಕೊಂಡಿರುವ ಮಂಗಳೂರು ಮೂಲದ ನಟೇಶ್‌ ಬಂಗೇರ ಅವರು ತಮ್ಮ ಮನೆಮಂದಿಯಲ್ಲಿ ಹೇಳಿಕೊಂಡಿದ್ದಾರೆ.

click me!