ರಸ್ತೆ ಅಪಘಾತಕ್ಕೆ 13 ಜನ ದುರ್ಮರಣ ಪ್ರಕರಣ: ಎಮ್ಮೆಹಟ್ಟಿ ಗ್ರಾಮಕ್ಕೆ ಗೀತಾ ಶಿವರಾಜ್ ಕುಮಾರ್ ಭೇಟಿ

By Ravi Janekal  |  First Published Jul 8, 2024, 3:50 PM IST

ಹಾವೇರಿ ಜಿಲ್ಲೆಯಲ್ಲಿ ರಸ್ತೆ ಅಪಘಾತಕ್ಕೆ 13 ಜನರು ಬಲಿಯಾದ ಸುದ್ದಿ ಕೇಳಿ ದುಃಖವಾಯ್ತು, ಮೃತ ಕುಟುಂಬಕ್ಕೆ ಆಗಿರುವ ನಷ್ಟ ತುಂಬಲು ನಮ್ಮಿಂದ ಆಗೊಲ್ಲ. ಆದರೆ ಅವರ ಜೊತೆಗೆ ನಿಲ್ಲುವ ಕೆಲಸ ಮಾಡೋಣ ಎಂದು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸಂತಾಪ ಸೂಚಿಸದರು.


ಶಿವಮೊಗ್ಗ (ಜು.8): ಹಾವೇರಿ ಜಿಲ್ಲೆಯಲ್ಲಿ ರಸ್ತೆ ಅಪಘಾತಕ್ಕೆ 13 ಜನರು ಬಲಿಯಾದ ಸುದ್ದಿ ಕೇಳಿ ದುಃಖವಾಯ್ತು, ಮೃತ ಕುಟುಂಬಕ್ಕೆ ಆಗಿರುವ ನಷ್ಟ ತುಂಬಲು ನಮ್ಮಿಂದ ಆಗೊಲ್ಲ. ಆದರೆ ಅವರ ಜೊತೆಗೆ ನಿಲ್ಲುವ ಕೆಲಸ ಮಾಡೋಣ ಎಂದು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಸಂತಾಪ ಸೂಚಿಸದರು.

ಇಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮ(yammehatti village)ಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಘಾತದಲ್ಲಿ 13 ಜನರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ನಮ್ಮ ಕೈಲಾದ ಸಹಾಯವನ್ನು ಮಾಡುತ್ತೇವೆ. ಕುಟುಂಬಸ್ಥರಿಗೆ ಏನಾದರೂ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತಂದರೆ ಅವರ ಜೊತೆ ನಿಲ್ಲುವ ಕೆಲಸ ಮಾಡುತ್ತೇವೆ, ಯಾವುದೇ ಸಂದರ್ಭದಲ್ಲೂ ಕುಟುಂಬದೊಂದಿಗೆ ನಾವು ಸದಾ ಇರುತ್ತೇವೆ ಎಂದು ಭರವಸೆ ನೀಡಿದರು.

Tap to resize

Latest Videos

undefined

ನಂಜನಗೂಡು: ತರಕಾರಿ ತುಂಬಿದ ಲಾರಿ ಪಲ್ಟಿ; ಮುಗಿಬಿದ್ದ ಸ್ಥಳೀಯರು!

ಮೃತ ಕುಟುಂಬಕ್ಕೆ ಊರಿನ ಗ್ರಾಮಸ್ಥರು, ಗಣ್ಯರು ಸಹ ಧೈರ್ಯ ತುಂಬಿದ್ದೀರಿ, ಮುಂದೆಯೂ ಎಲ್ಲರೂ ಕುಟುಂಬದ ಜೊತೆ ನಿಲ್ಲೋಣ ಎಂದರು ಇದೇ ವೇಳೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಅರ್ಪಿತಾ ಎನ್ನುವ ಯುವತಿಗೆ ಸಹಾಯಹಸ್ತ ನೀಡುವುದಾಗಿ ತಿಳಿಸಿದರು.

click me!