ಶಿವಮೊಗ್ಗ (ಮೇ.31): ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದ್ದು, ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಕೊರೋನಾ ಸೋಂಕಿನಿಂದ ಮಗು ಮೃತಪಟ್ಟಿಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ನಗರದ ಗಾಂಧಿಬಜಾರ್ ನಿವಾಸಿ ಉದಯ ಹಾಗೂ ಚಿತ್ರಾ ದಂಪತಿಯ 13 ತಿಂಗಳ ಮಗು ಉದ್ದಮ್ ಮೃತಪಟ್ಟಿದೆ. ಮಗುವಿನ ಆರೋಗ್ಯದಲ್ಲಿ ಕಳೆದ ಒಂದು ವಾರದಿಂದ ಏರುಪೇರು ಕಾಣಿಸಿಕೊಮಡಿತ್ತು. ಈ ಹಿನ್ನೆಲೆ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಮಗುವಿಗೆ ಉಸಿರಾಟದ ತೊಂದರೆಯಿಂದಾಗಿ ಖಾಸಗಿ ಆಸ್ಪತ್ರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.
ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದವನೇ ಸೋಂಕಿಗೆ ಬಲಿ .
ಜಿಲ್ಲಾ ಮೆಗ್ಗಾನ್ ಅಧೀಕ್ಷಕ ಡಾ. ಶ್ರೀಧರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಮಗುವಿನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು ನಿಜ. ಆದರೆ ಮಗು ಸಾವನ್ನಪ್ಪಿರುವುದು ಕೋವಿಡ್‌ನಿಂದಲ್ಲ. ಬೇರೆ ಕಾಯಿಲೆಯಿಮದ ಮೃತಪಟ್ಟಿದೆ ಎಂದಿದ್ದಾರೆ.