ಕೋವಿಡ್ ನಿಂದ ಪತ್ರಕರ್ತ ಸಾವು : ಆಸ್ಪತ್ರೆಯಿಂದ 13 ಲಕ್ಷ ಬಿಲ್, 3.50 ರು. ಲಕ್ಷ ವಾಪಸ್‌

By Kannadaprabha NewsFirst Published Oct 7, 2020, 11:16 AM IST
Highlights

ಪತ್ರಕರ್ತರೋರ್ವರು ಕೋವಿಡ್ ನಿಂದ ಮೃತಪಟ್ಟಿದ್ದು ಆಸ್ಪತ್ರೆ 13 ಲಕ್ಷ ಬಿಲ್ ನೀಡಿದೆ. ಆದರೆ ಇಷ್ಟೂ ಹಣ ನೀಡುವಂತೆ ಒತ್ತಡ ಹೇರಿದ್ದು ಪತ್ರಕರ್ತರ ಸಂಘ ಈ ಕುಟುಂಬಕ್ಕೆ ನರವಾಗಿದೆ.

 ಮಂಡ್ಯ (ಅ.07): ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಕನ್ನಡಪ್ರಭ ಪತ್ರಿಕೆಯ ವರದಿಗಾರ ಎಸ್‌.ಕೆ. ಸುರೇಶ್‌ ಕೋವಿಡ್‌ಗೆ ಬಲಿಯಾಗಿದ್ದು ನೋವಿನ ಸಂಗತಿ.

ಬೆಂಗಳೂರು ಖಾಸಗಿ ಆಸ್ಪತ್ರೆ ಅವರ ಚಿಕಿತ್ಸೆಗಾಗಿ ಮಾಡಿದ್ದ 13.50 ಲಕ್ಷ ರು. ಬಿಲ್ ನಲ್ಲಿ 3.50 ಲಕ್ಷ ರು.ಗಳನ್ನು ಕುಟುಂಬದವರಿಗೆ ವಾಪಸ್‌ ಕೊಡಿಸುವಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಯಶಸ್ವಿಯಾಗಿದೆ.

ಮಾಸ್ಕ್‌ ಧರಿಸದೆ ಓಡಾಡುವವರಿಗೆ ಕೊರೋನಾ ಟೆಸ್ಟ್‌! ...

ಹಣ ಪಾವತಿಸುವಂತೆ ಕಾಸಿಗೆ ಆಸ್ಪತ್ರೆಯವರು ಪದೇಪದೇ ಒತ್ತಡ ಹೇರುತ್ತಿದ್ದ ಕಾರಣ ಪತಿಯ ಚಿಕಿತ್ಸಾ ವೆಚ್ಚ ಭರಿಸಲು ಪತ್ನಿ ಉಮಾ ಅವರು, ತನ್ನ ಒಡವೆಗಳನ್ನು ಮಾರಿ ಆಸ್ಪತ್ರೆ 6.50 ಬಿಲ್ ಪಾವತಿ ಮಾಡಿದ್ದರು. ಆದರೂ, ಬಾಕಿ ಬಿಲ… ಪಾವತಿಗಾಗಿ ಹಣ ಕೊಡುವಂತೆ ಆಸ್ಪತ್ರೆಯವರು ತಾಕೀತು ಮಾಡಿ ದಿನವೂ ಪೋನ್‌ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಕುಟುಂಬ ಭಾರತೀಯ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಗಮನಕ್ಕೆ ತಂದರು.

ಈ ಬಗ್ಗೆ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ದೂರು ಸಲ್ಲಿಸಿ, ಸತತ ಫಾಲೊ ಅಪ್‌ ಮಾಡಿದ ಬಳಿಕ ತನಿಖೆ ನಡೆದು, ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಆಸ್ಪತ್ರೆಯಲ್ಲಿ ಹೆಚ್ಚುವರಿ ಬಿಲ… ಮಾಡಿರುವುದು ಬಯಲಾಯಿತು.

ಭಾರತೀಯ ಪತ್ರಕರ್ತರ ಒಕ್ಕೂಟ ಹಾಗೂ ಕೆಯುಡಬ್ಲ್ಯೂಜೆ ಸತತ ಫಾಲೊ ಅಪ್‌ ಮಾಡಿದ ಹಿನ್ನೆಲೆಯಲ್ಲಿ ತಪ್ಪು ಅರಿವಾದ ಆ ಖಾಸಗಿ ಆಸ್ಪತ್ರೆ ಹೆಚ್ಚುವರಿಯಾಗಿ ಪಡೆದಿದ್ದ 3.50 ಲಕ್ಷ ರೂ ಗಳನ್ನು ಚೆಕ್‌ ಮೂಲಕ ದಿ. ಸುರೇಶ್‌ ಪತ್ನಿ ಉಮಾ ಅವರಿಗೆ ಹಿಂತಿರುಗಿಸಿದೆ.

ಮಂಗಳವಾರ ಕರ್ನಾಟಕದಲ್ಲಿ ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..!

ನೊಂದ, ತೀವ್ರ ಸಂಕಷ್ಟದಲ್ಲಿದ್ದ ಬಡ ಪತ್ರಕರ್ತನ ಕುಟುಂಬದ ಅಹವಾಲಿಗೆ ಕೂಡಲೇ ಸ್ಪಂದಿಸಿದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು, ಸಹಕಾರ ನೀಡಿದ ಭಾರತೀಯ ಪತ್ರಕರ್ತರ ಒಕ್ಕೂಟದಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಅವರಿಗೆ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸುರೇಶ್‌ ಕುಟುಂಬ ಸಲ್ಲಿಸಿದೆ.

ಹೀಗೆ ದುಬಾರಿ ಬಿಲ್ಗೆ ರೋಸಿ ಹೋದ ಎಷ್ಟುಕುಟುಂಬಗಳಿವೆಯೋ? ಸರ್ಕಾರ ಈ ಬಗ್ಗೆ ಗಂಭೀರವಾಗಿ ಗಮನಹರಿಸಲಿ ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.

ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಹಿರಿಯ ಅಧಿಕಾರಿಗಳ ತಂಡ ದುಬಾರಿ ಬಿಲ್ ವಾಪಸ್‌ ಕೊಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದನ್ನು ಭಾರತೀಯ ಪತ್ರಕರ್ತರ ಒಕ್ಕೂಟ ಹಾಗೂ ಕೆಯುಡಬ್ಲ್ಯೂಜೆ ಶ್ಲಾಘಿಸಿದೆ.

click me!