ಶಾಲಾ ಮಕ್ಕಳ ಮೇಲೆ ಹೆಜ್ಜೇನು ದಾಳಿ, 12 ವಿದ್ಯಾರ್ಥಿಗಳು ಅಸ್ವಸ್ಥ

By Suvarna News  |  First Published Jul 30, 2022, 8:46 PM IST

ಶಾಲಾ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಸಲಾಗುತ್ತಿದೆ.
 


ಹಾವೇರಿ, (ಜುಲೈ.30):  ಖುಷಿ ಖುಷಿಯಾಗಿ ಶಾಲೆಯಲ್ಲಿ ಕುಳಿತಿದ್ದ ಮಕ್ಕಳಿಗೆ  ಒಮ್ಮಿಂದೊಮ್ಮೆಲೆ ಹೆಜ್ಜೇನು ಹುಳಗಳು ದಾಳಿ ಮಾಡಿವೆ. ಹುಳ ಕಡಿದು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. 

ಹಾವೇರಿ ತಾಲ್ಲೂಕಿನ ದೇವಿಹೊಸೂರು ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ಹೆಜ್ಜೇನು ದಾಳಿ ನಡೆಸಿವೆ. ಕೂಡಲೇ ಅಸ್ವಸ್ಥಗೊಂಡ 12 ಮಕ್ಕಳನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ‌.

Latest Videos

undefined

ಹಾವೇರಿ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಾಲೆಯ ಹಿಂಭಾಗದಲ್ಲೇ ಮರದಲ್ಲಿ ಇದ್ದ ಜೇನುಹುಳುಗಳು ಏಕಾಏಕಿ ಇಂದು ಸಂಜೆ 4 ಗಂಟೆ  ವೇಳೆಗೆ ಮಕ್ಕಳ ಮೇಲೆ ದಾಳಿ ನಡೆಸಿವೆ. ಸುಮಾರು 22 ಮಕ್ಕಳಿಗೆ ಹೆಜ್ಜೇನು ಕಚ್ಚಿವೆ. ಇದರಿಂದ  ಕೆಲಕಾಲ ಆತಂಕದ ವಾತಾವರಣವೇ ಸೃಷ್ಟಿಯಾಯಿತು. ಮಕ್ಕಳ ತಲೆ, ಬೆನ್ನು, ಕೆನ್ನೆ, ತುಟಿ ಮುಂತಾದ ಭಾಗಗಳಿಗೆ ಕಚ್ಚಿದ ಪರಿಣಾಮ ಊತ ಕಾಣಿಸಿಕೊಂಡಿದೆ.

ತಕ್ಷಣ ಸ್ಥಳೀಯ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಪಡೆದ ಸುಮಾರು 10 ಮಕ್ಕಳು ಆರಾಮಾಗಿ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡಿದ್ದ 12 ಮಕ್ಕಳನ್ನು ನಗು–ಮಗು ವಾಹನದ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ.

click me!