ಚಿಕ್ಕಮಗಳೂರು: ಅಡಕೆ ತೋಟದಲ್ಲಿತ್ತು 12 ಅಡಿ ಉದ್ದದ ಹೆಬ್ಬಾವು

By Kannadaprabha News  |  First Published Jul 25, 2019, 11:57 AM IST

ಚಿಕ್ಕಮಗಳೂರಿನಲ್ಲಿ ಅಡಕೆ ತೋಟದಲ್ಲಿ ಕಳೆ ತೆಗೆಯುವ ವೇಳೆಯಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ. ಪತ್ತೆಯಾದ ಹೆಬ್ಬಾವು ಹಿಡಿದು ಹೆಬ್ಬೆ ಮೀಸಲು ಅರಣ್ಯಕ್ಕೆ ಬಿಡಲಾಯಿತು.


ಚಿಕ್ಕಮಗಳೂರು(ಜು.25): ಅಡಕೆ ತೋಟದಲ್ಲಿ ಕಳೆ ತೆಗೆಯುವ ವೇಳೆಯಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿದೆ.

ಎನ್‌.ಆರ್‌.ಪುರ- ಬಾಳೆಹೊನ್ನೂರು ಮಾರ್ಗದಲ್ಲಿರುವ ಗಡಿಗೇಶ್ವರ ಗ್ರಾಮದ ಸಿರಾಜುದ್ದೀನ್‌ ಎಂಬುವವವರಿಗೆ ಸೇರಿರುವ ದಾಸನಗದ್ದೆ ಎಸ್ಟೇಟ್‌ನಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾದ ಹೆಬ್ಬಾವು ಹಿಡಿದು ಹೆಬ್ಬೆ ಮೀಸಲು ಅರಣ್ಯಕ್ಕೆ ಬಿಡಲಾಯಿತು.

Latest Videos

ಚಿತ್ರದುರ್ಗ: ಬಾಳೆಕಾಯಿ ಸಿದ್ದೇಶ್ವರ ಬೆಟ್ಟದಲ್ಲಿ ಚಿರತೆ ಪ್ರತ್ಯಕ್ಷ

ಅಡಕೆ ತೋಟದಲ್ಲಿ ಬೆಳೆದಿದ್ದ ಕಳೆಯನ್ನು ಯಂತ್ರದ ಮೂಲಕ ತೆಗೆಯುವಾಗ ತೋಟದ ಮಧ್ಯದಲ್ಲಿ ಹೆಬ್ಬಾವು ಯಾವುದೋ ಪ್ರಾಣಿಯನ್ನು ನುಂಗಿ ಅದನ್ನು ಜೀರ್ಣಿಸಿಕೊಳ್ಳಲು ಒದ್ದಾಡುತ್ತಿತ್ತು. ಇದನ್ನು ಕಂಡ ತೋಟದಲ್ಲಿದ್ದ ಕಾರ್ಮಿಕರು ಉರಗ ತಜ್ಞ ಹರೀಂದ್ರ ಅವರನ್ನು ಸಂಪರ್ಕಿಸಿದರು.

undefined

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಹಿಡಿದ ಹಾವನ್ನು ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಮಾರುತಿ ಹಾಗೂ ರಂಗನಾಥ್‌ ಅವರ ಸಮ್ಮುಖದಲ್ಲಿ ಹೆಬ್ಬೆ ಮೀಸಲು ಅರಣ್ಯದಲ್ಲಿ ಬಿಡಲಾಯಿತು.

click me!