ತುಮಕೂರು ಕುಣಿಗಲ್‌ನಿಂದ ಮದ್ದೂರು ಮಾರ್ಗವಾಗಿ ಮಳವಳ್ಳಿ ಹೆದ್ದಾರಿ ಕಾಮಗಾರಿಗೆ ಮತ್ತೆ ಸರ್ಕಾರದಿಂದ ಹೋರಾಟ ಮಾಡಿ 12 ಕೋಟಿ ರು. ಮಂಜೂರು ಮಾಡಿಸಿ ರುವುದಾಗಿ ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು.
ಭಾರತೀನಗರ (ನ.05): ತುಮಕೂರು ಕುಣಿಗಲ್‌ನಿಂದ ಮದ್ದೂರು ಮಾರ್ಗವಾಗಿ ಮಳವಳ್ಳಿ ಹೆದ್ದಾರಿ ಕಾಮಗಾರಿಗೆ ಮತ್ತೆ ಸರ್ಕಾರದಿಂದ ಹೋರಾಟ ಮಾಡಿ 12 ಕೋಟಿ ರು. ಮಂಜೂರು ಮಾಡಿಸಿ ರುವುದಾಗಿ ಶಾಸಕ ಡಿ.ಸಿ. ತಮ್ಮಣ್ಣ ತಿಳಿಸಿದರು. ಇಲ್ಲಿಗೆ ಸಮೀಪದ ಬಿದರ ಹೊಸಹಳ್ಳಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕುಣಿಗಲ್‌ನಿಂದ ಮಳವಳ್ಳಿ ವರೆಗೆ ಕೆಲವು ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿತ್ತು. ಸರ್ಕಾರ ಮಟ್ಟದಲ್ಲಿ ಸಾಕಷ್ಟುಹೋರಾಟ ನಡೆಸಿ ಇನ್ನುಳಿದ 45 ಕಿ.ಮೀ ವರೆಗೆ ಅರ್ಧಕ್ಕೆ ನಿಂತು ಹೋಗಿದ್ದ ಕಾಮಗಾರಿ ಪೂರ್ಣಗೊಳಿಸಲು 12 ಕೋಟಿ ರು. ಮಂಜೂರು ಮಾಡಿಸಿದ್ದೇನೆ ಎಂದರು.
ಕ್ಷೇತ್ರದಲ್ಲಿ ಜನರು ನನಗೆ ನೀಡಿರುವ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ರಾಜ್ಯದಲ್ಲಿ ಯಾವುದೇ ಸರ್ಕಾರ ಇದ್ದರೂ ನಾನಾ ಮೂಲಗಳಿಂದ ಅಗತ್ಯ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಜನರು ಮುಂದೆಯೂ ಸಹ ನನಗೆ ಇಂತಹ ಶಕ್ತಿ ನೀಡಿದರೆ ಆತ್ಮವಿಶ್ವಾಸದಿಂದ ಅಭಿವೃದ್ಧಿ ಕಾರ್ಯದಲ್ಲಿ ತೊಡಗುತ್ತೇನೆ. ಕ್ಷೇತ್ರದಲ್ಲಿ ಇನ್ನು ಸಾಕಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ ಮಾದರಿ ಕ್ಷೇತ್ರವನ್ನಾಗಿಸುವೆ ಎಂಬ ಭರವಸೆ ನೀಡಿದರು. ಜೆಡಿಎಸ್ ಮುಖಂಡ ಮಾದನಾಯಕನಹಳ್ಳಿ ರಾಜಣ್ಣ ಮಾತನಾಡಿ, ಚುನಾವಣೆ ಗುರಿಯಾಗಿಸಿಕೊಂಡು ಕೆಲ ಉದ್ಯಮಿಗಳು ಹಣ ನೀರಿನಂತೆ ಖರ್ಚು ಮಾಡಿ ರಾಜಕಾರಣ ಮಾಡಲು ಮುಂದಾಗಿದ್ದಾರೆ.
ಪಂಚರತ್ನ ಯೋಜನೆಯಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿ: ನಿಖಿಲ್ ಕುಮಾರಸ್ವಾಮಿ
ಈ ಆಮಿಷಕ್ಕೆ ಮತದಾರರು ಒಳಗಾಗಬಾರದು. ಅಭಿವೃದ್ದಿ ಕಾರ್ಯ ನೋಡಿ ಬೆಂಬಲಿಸುವಂತೆ ಮನವಿ ಮಾಡಿದರು. ಹಣ ಬರುತ್ತದೆ, ನಾಳೆ ಹೋಗುತ್ತದೆ. ಆದರೆ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ದಿ ಕಾರ್ಯಗಳು ಶಾಶ್ವತವಾಗಿ ಇರುತ್ತದೆ. ಡಿ.ಸಿ. ತಮ್ಮಣ್ಣರ ಅವಧಿಯಲ್ಲಿ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದಾರೆ. ಇಂತಹ ಜನನಾಯಕರನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಮನೋಭಾವನೆ ಜನಸಾಮಾನ್ಯರಲ್ಲಿ ಬರಬೇಕಿದೆ ಎಂದು ತಿಳಿಸಿದರು. ಈ ವೇಳೆ ಮೆಳ್ಳಹಳ್ಳಿ, ಕೆ.ಪಿ.ದೊಡ್ಡಿ, ಮಣಿಗೆರೆ, ಬಿದರಹಳ್ಳಿ, ಬಿದರಹೊಸಹಳ್ಳಿ ಯಲಾದಹಳ್ಳಿ, ಗುಡಿಗೆರೆ, ಗುಡಿಗೆರೆ ಕಾಲೋನಿ, 5 ನೇ ನಂಬರ್ ಸೈಟ್‌ಗಳಿಗೆ ಭೇಟಿನೀಡಿ ಜನಸಂಪರ್ಕ ಸಭೆ ನಡೆಸಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಜೆಡಿಎಸ್ ರಾಜ್ಯಸಂಘಟನಾ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ, ಎಚ್.ಎಂ.ಮರಿಮಾದೇಗೌಡ, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಹೇಶ್, ಮಲ್ಲರಾಜು, ಶಿವನಂಜಪ್ಪ, ಗುತ್ತಿಗೆದಾರ ಪುಟ್ಟಸ್ವಾಮಿ, ಸಿದ್ದೇಗೌಡ, ಬೋರೇಗೌಡ, ನಿಂಗೇಗೌಡ, ನಾಗೇಗೌಡ, ಮಣಿಗೆರೆ ಸವೀನಪ್ಪ, ಶಿವಲಿಂಗೇಗೌಡ, ನವೀನ್, ಸಿದ್ದರಾಜು, ತಿಬ್ಬಯ್ಯ, ಕೆ.ಎಲ್. ಶಿವರಾಮು, ಗುಡಿಗೆರೆ ಕಾಂತರಾಜು, ಶಿವು, ಮೈಸ್ಕೆಚ್ ಬಸವರಾಜು, ಮಂಜುನಾಥ, ಶಿವರುದ್ರ, ದೊರೆ, ಬಿದರಹಳ್ಳಿ ಬಸವೇಗೌಡ, ಶಶಿ, ರಮೇಶ್, ಕಾಲೋನಿ ಜಿ.ಎನ್.ಪುಟ್ಟಸ್ವಾಮಿ, ಪಾಪಣ್ಣ, ಬಿದರಹೊಸಹಳ್ಳಿ ಸುನಾಮಿ ಬೋರೇಗೌಡ, ಪುಟ್ಟಸ್ವಾಮಿ, ಯಲಾದಹಳ್ಳಿ ರಾಜೇಶ, ಲೋಕೇಶ, ವೈ,ಡಿ.ಸಿದ್ದರಾಜು ಸೇರಿದಂತೆ ಹಲವರಿದ್ದರು.
ಸ್ಪರ್ಧೆಗೆ ಯಾರೂ ದೃಢ ನಿರ್ಧಾರ ಮಾಡಿಲ್ಲ: ಸಂಸದೆ ಸುಮಲತಾ
ಫುಟ್‌ಪಾತ್ ಅಗಲೀಕರಣ, ಗುಂಡಿಬಿದ್ದ ಹಳ್ಳಗಳಿಗೆ ಡಾಂಬರೀಕರಣ ಸೇರಿದಂತೆ ಹೆದ್ದಾರಿಗೆ ಸಂಪರ್ಕ ಹೊಂದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನನ್ನ 10 ವರ್ಷದ ಹೋರಾಟ ಫಲವಾಗಿ ಈ ಕಾಮಗಾರಿ ನಡೆಯಲಿದೆ.
- ಡಿ.ಸಿ.ತಮ್ಮಣ್ಣ , ಶಾಸಕ