625 ಗ್ರಾಮಗಳಲ್ಲಿ ಉಲ್ಬಣಿಸಿದ ರೋಗ: ಮುಂದವರೆದ ಜಾನುವಾರು ಸಂತೆ ನಿಷೇಧ

By Govindaraj S  |  First Published Dec 3, 2022, 9:05 PM IST

ಜಿಲ್ಲೆಯಲ್ಲಿ ಜಾನುವಾರುಗಳ ಮರಣ ಮೃದಂಗಕ್ಕೆ ಕಾರಣವಾದ ಮಾರಣಾಂತಿಕ ಚರ್ಮಗುಂಟು ರೋಗಕ್ಕೆ ಜಿಲ್ಲಾದ್ಯಂತ ಅನ್ನದಾತರ ಬರೋಬ್ಬರಿ 113 ರಾಸುಗಳು ರೋಗಕ್ಕೆ ಬಲಿಯಾಗಿರುವುದು ಬೆಳಕಿಗೆ ಬಂದಿವೆ. 


ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ (ಡಿ.03): ಜಿಲ್ಲೆಯಲ್ಲಿ ಜಾನುವಾರುಗಳ ಮರಣ ಮೃದಂಗಕ್ಕೆ ಕಾರಣವಾದ ಮಾರಣಾಂತಿಕ ಚರ್ಮಗುಂಟು ರೋಗಕ್ಕೆ ಜಿಲ್ಲಾದ್ಯಂತ ಅನ್ನದಾತರ ಬರೋಬ್ಬರಿ 113 ರಾಸುಗಳು ರೋಗಕ್ಕೆ ಬಲಿಯಾಗಿರುವುದು ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿರವ ಬಡ ಕುಟುಂಬಗಳು ಸಾವಿರಾರು ಸಂಖ್ಯೆಯಲ್ಲಿದ್ದು ಸಹಜವಾಗಿಯೆ ಚರ್ಮಗಂಟು ರೋಗ ಜಿಲ್ಲೆಯ ಅನ್ನದಾತರನ್ನು ಚಿಂತೆಗೀಡು ಮಾಡಿದ್ದು ರೋಗದ ಉಲ್ಬಣಕ್ಕೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ರಾಸುಗಳ ಮರಣ ಹೋಮಕ್ಕೆ ಕಾರಣವಾಗಿದೆ.

Tap to resize

Latest Videos

625 ಗ್ರಾಮಗಳಲ್ಲಿ ರೋಗ ಉಲ್ಬಣ: ಜಿಲ್ಲೆಯ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 625 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು ಅನ್ನದಾತರನ್ನು ತತ್ತರಿಸುವಂತೆ ಮಾಡಿದೆ. ಕಾಲುಬಾಯಿ ಜ್ವರದ ಮಾದರಿಯಲ್ಲಿ ಚರ್ಮಗಂಟು ರೋಗ ಇದೀಗ ಜಾನುವಾರುಗಳನ್ನು ಸಾವಿನ ದವಡೆಗೆ ತಳ್ಳುತ್ತಿದ್ದು ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ರೋಗ ಪ್ರಮಾಣ ತಾರಕ್ಕೇರಿ ಜಾನುವಾರುಗಳನ್ನೆ ನಂಬಿ ಬದುಕಿನ ಬಂಡಿ ನಡೆಸುತ್ತಿರುವ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.

ಚುನಾವಣಾ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಕಡ್ಡಾಯ: ಡಿಸಿ ವೆಂಕಟ್‌ ರಾಜಾ ಸೂಚನೆ

ಜಿಲ್ಲೆಯಲ್ಲಿ ಒಟ್ಟು 1,933 ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿವೆ ಆಪೈಕಿ 893 ಜಾನುವಾರುಗಳು ರೋಗದಿಂದ ಗುಣಮುಖವಾಗಿ ಪಾರಾಗಿದ್ದರೆ ಆ ಪೈಕಿ 113 ಜಾನುವಾರುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿವೆ. ಇನ್ನೂ ಚರ್ಮಗಂಟು ರೋಗ ಕಾಣಿಸಿಕೊಂಡ ತಕ್ಷಣ ಸಕಾಲದಲ್ಲಿ ಜಾನುವಾರುಗಳಿಗೆ ಸರ್ಕಾರ ಲಸಿಕೆ ಕೊಡಲಿಲ್ಲ. ಆಗಾಗಿ ರಾಸುಗಳ ಸಾವಿನ ಪ್ರಮಾಣದ ಜೊತೆಗೆ ರೋಗ ಕೂಡ ಹೆಚ್ಚು ಉಲ್ಬಣಗೊಳ್ಳಲು ಸಾಧ್ಯವಾಯಿತು ಎಂದು ರೈತರು ತಿಳಿಸುತ್ತಾರೆ.

1,06,932 ರಾಸುಗಳಿಕೆ ಲಸಿಕೆ: ಜಿಲ್ಲೆಯ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಚರ್ಮಗಂಟು ರೋಗದ ವಿರುದ್ದ ಲಸಿಕಾ ಕಾರ್ಯಕ್ರಮ ಕೈಗೊಂಡು ಒಟ್ಟು 1,06,932 ರಾಸುಗಳಿಗೆ ಲಸಿಕೆ ಹಾಕಲಾಗಿದ್ದು ಜಿಲ್ಲೆಗೆ ಒಟ್ಟು 1,66,500 ಡೋಸ್‌ ಲಸಿಕೆ ಸರಬರಾಜು ಆಗಿದ್ದು ಆ ಪೈಕಿ 55,600 ಲಸಿಕೆ ಇನ್ನೂ ದಾಸ್ತುಣು ಇದೆಯೆಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಲಾರದಲ್ಲಿ ಸ್ಪರ್ಧಿಸುವಂತೆ ಸಿದ್ದುಗೆ ಮನವಿ ಮಾಡಿದ್ದೇ ನಾನು: ಶಾಸಕ ಶ್ರೀನಿವಾಸಗೌಡ

ಮುಂದವರೆದ ಸಂತೆ ನಿಷೇಧ: ಜಿಲ್ಲೆಯ ರಾಸುಗಳಿಗೆ ಚರ್ಮಗುಂಟು ರೋಗ ಭಾದಿಸುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ ಮುಂದುವರೆದಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ವಿವಿಧೆಡೆ ನಡೆಯುವ ಜಾನುವಾರುಗಳ ಸಂತೆ ಹಾಗೂ ಜಾತ್ರೆಯನ್ನು ಡಿ.15 ರವರೆಗೂ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

click me!