ಕರ್ನಾಟಕ ಸಾರಿಗೆ ಸಂಸ್ಥೆ ಯಿಂದ 110 ವಿಶೇಷ ಬಸ್ : ಸಂಚಾರ ಮಾರ್ಗ ಯಾವುದು..?

By Kannadaprabha News  |  First Published Mar 3, 2020, 2:25 PM IST

ಕರ್ನಾಟಕ ಸಾರಿಗೆ ಸಂಸ್ಥೆಯಿಂದ 110 ವಿಶೇಷ ಬಸ್ಸುಗಳು ಸಂಚಾರ ಮಾಡಲಿವೆ. ವಿಶೇಷ ಬಸ್ಸುಗಳ ಸಂಚಾರ ವ್ಯವಸ್ಥೆಯು ಸಿರಿಸಿ ಮಾರಿಕಾಂಬ ಜಾತ್ರೆಯ ಹಿನ್ನೆಲೆಯಲ್ಲಿ ಬಿಡಲಾಗುತ್ತಿದೆ.


ಶಿರಸಿ [ಮಾ.03]:  ನಾಡಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾಮಹೋತ್ಸವಕ್ಕೆ ಭಕ್ತರು ಆಗಮಿಸಲು ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ನಿತ್ಯ ಓಡಾಡುವ ಬಸ್‌ಗಳ ಹೊರತಾಗಿ ಸುಮಾರು 110 ವಿಶೇಷ ಬಸ್ ಗಳನ್ನು ಓಡಿಸಲಾಗುತ್ತಿದೆ. 

ನಗರದ ಹೊಸ ಬಸ್ ನಿಲ್ದಾಣದಲ್ಲಿ ಸೋಮವಾರ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್ ವಿಶೇಷ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಜಾತ್ರೆಗೆ ಮುಖ್ಯವಾಗಿ ಭಕ್ತಾದಿಗಳು ಹೆಚ್ಚಾಗಿ ಬರುವ ಕುಂದಾಪುರ, ಶಿರೂರು, ಭಟ್ಕಳ, ಬೈಂದೂರು, ಕುಮಟಾ, ಸಾಗರ, ಹಾನಗಲ್, ಹಾವೇರಿ, ಹುಬ್ಬಳ್ಳಿ ಭಾಗಗಳಿಗೆ ಈ ಬಸ್‌ಗಳು ಓಡಾಡಲಿವೆ. 

Latest Videos

undefined

ಜಾತ್ರೆಯಲ್ಲಿ ಮಾ. 6 ರಿಂದ 8 ವರೆಗೆ ಬಸ್‌ಗಳಿಗೆ ಪ್ರಯಾಣಿಕರ ಒತ್ತಡ ಜಾಸ್ತಿ ಇರುತ್ತದೆ ಎಂದರು. ಕಳೆದ ಆರು ವರ್ಷಗಳಿಂದ ಬಸ್‌ಗಳ ದರ ಏರಿಸಿರಲಿಲ್ಲ. ಈ ಬಾರಿ ಜಾತ್ರೆಯ ವಿಶೇಷ ಸಾರಿಗೆಗೆ ಶೇ.10 ರಷ್ಟು ಏರಿಕೆ ಮಾಡುತ್ತಿದ್ದೇವೆ ಎಂದರು. 

ಬಜೆಟ್‌ನಲ್ಲಿ ಬೇಡಿಕೆ: ರಾಜ್ಯ ಬಜೆಟ್‌ನಲ್ಲಿ ವಾಯವ್ಯ ಕನಾಟಕ ಸಾರಿಗೆ ಸಂಸ್ಥೆಯಿಂದ ವಿವಿಧ ಬೇಡಿಕೆ ಮುಂದಿಟ್ಟಿದ್ದೇವೆ. ಮೋಟಾರ್ ವೆಹಿಕಲ್ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದೇವೆ. ಕಳೆದ ೨೦೧೬ರಿಂದ ವಿನಾಯಿತಿ ಬಂದ್ ಆಗಿದ್ದು, ವಿನಾಯಿತಿ ನೀಡದರೆ ಸಂಸ್ಥೆಗೆ ನಿತ್ಯ ಆಗುತ್ತಿರುವ 50 ಲಕ್ಷ ರು. ಹಾನಿಯನ್ನು ನಿಭಾಯಿಸಬಹುದು ಎಂದು ವಿ.ಎಸ್. ಪಾಟೀಲ್ ತಿಳಿಸಿದರು.

ಬಸ್‌ ಟಿಕೆಟ್‌ ದರ ಶೇ.12 ಹೆಚ್ಚಳ, ಎಲ್ಲಿಗೆ ಎಷ್ಟು? ಇಲ್ಲಿದೆ ಮಾಹಿತಿ.

ಅದೇ ರೀತಿ ವಿದ್ಯಾರ್ಥಿಗಳ ಬಸ್ ಪಾಸ್‌ಗೆ ಸಂಬಂಧಿಸಿ 720  ಕೋಟಿ ರು. ಸಂಸ್ಥೆಗೆ ಬರಬೇಕಿದೆ. ಅದಕ್ಕೂ ಬೇಡಿಕೆ ಇಟ್ಟಿದ್ದೇವೆ ಎಂದರು. ಬನವಾಸಿ ಮಾರ್ಗದ ಬಸ್‌ಗಳು ರಾಮನಬೈಲ್ ನಿಂದಲೇ ಸಂಚರಿಸುತ್ತವೆ. ಹುಬ್ಬಳ್ಳಿ, ಯಲ್ಲಾಪುರ ಭಾಗಗಳಿಂದ ಬರುವ ಬಸ್‌ಗಳು ಹೊಸ ಬಸ್ ನಿಲ್ದಾಣಕ್ಕೆ ಬರುತ್ತವೆ. ಹಾನಗಲ್, ಹಾವೇರಿ ಕಡೆಯಿಂದ ಬರುವ ಬಸ್‌ಗಳು ಎಪಿಎಂಸಿ ಆವಾರಕ್ಕೆ ಬರುತ್ತವೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ತಿಳಿಸಿದರು. 

ಹೊಸ ಬಸ್ ನಿಲ್ದಾಣ: ಜಾತ್ರೆ ಹಿನ್ನೆಲೆಯಲ್ಲಿ ಹಳೆ ಬಸ್ ನಿಲ್ದಾಣದಿಂದ ಸಂಚಾರ ಬಂದ್ ಆಗಿದೆ. ನಿತ್ಯದ ಹಾಗೂ ವಿಶೇಷ ಸಾರಿಗೆ ಬಸ್‌ಗಳು ಹೊಸ ಬಸ್ ನಿಲ್ದಾಣದಿಂದ ಕಾರ್ಯಚರಿಸಲಿವೆ. ಒಟ್ಟು 700 ಕ್ಕೂ ಹೆಚ್ಚು ರೂಟ್‌ಗಳ ಬಸ್‌ಗಳು ಇಲ್ಲಿಂದ ಓಡಾಡಲಿವೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು. 

40 ಮಂದಿ ಪ್ರಯಾಣಿಕರಿದ್ದರೆ ಬಸ್: ಜಾತ್ರೆಯ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೆ ಮಧ್ಯರಾತ್ರಿ ಬಸ್‌ಗಳನ್ನು ಓಡಿಸಬೇಕೆಂಬ ಆಗ್ರಹವಿದೆ. ಆದರೆ ಸುಮಾರು 40  ಪ್ರಯಾಣಿಕರಿದ್ದರೆ ಬಸ್ ಬಿಡಲು ಸಿದ್ಧರಿದ್ದೇವೆ. ಇದಕ್ಕಾಗಿ ನಿಲ್ದಾಣ ಹಾಗೂ ತಾತ್ಕಾಲಿಕ ನಿಲ್ದಾಣಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿಡಲಾಗುವುದು. ಆದರೆ, ನಾಲ್ಕಾರು ಮಂದಿ ಇದ್ದು, ಬಸ್ ಬಿಡಿ ಎಂದರೆ ಕಷ್ಟವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

click me!