Gadag| ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕ ಸಾವು: ಬರಿದಾಯ್ತು ಬಡತಾಯಿ ಒಡಲು

By Kannadaprabha News  |  First Published Nov 15, 2021, 12:08 PM IST

*  ಗದಗ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಬಾಲಕ
*  ಡಯಾಲಿಸಿಸ್‌ ಮಾಡಿಸದೇ ಇದ್ದುದರಿಂದ ಬಹಳ ಕಷ್ಟಪಡುತ್ತಿದ್ದ ಚನ್ನಯ್ಯ 
*  ತಾಯಿಯ ಪ್ರಯತ್ನ ಮಾತ್ರ ಯಶಸ್ಸು ಕಾಣಲಿಲ್ಲ


ಹೊಳೆಆಲೂರ(ನ.15):  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಮೀಪದ ಹೊಳೆಹಡಗಲಿ ಗ್ರಾಮದ 11 ವರ್ಷದ ಬಾಲಕ ಚನ್ನಯ್ಯ ಬೆಟದೂರ, ಶನಿವಾರ ರಾತ್ರಿ ಗದುಗಿನ ಜಿಲ್ಲಾಸ್ಪತ್ರೆಯಲ್ಲಿ(Gadag District Hospital) ಕೊನೆಯುಸಿರೆಳೆದಿದ್ದಾನೆ. 5 ವರ್ಷಗಳಿಂದ ಸಾಲ, ಸೋಲ ಮಾಡಿ ಸಾಕಷ್ಟು ಹಣ ಖರ್ಚು ಮಾಡಿದ ಬಡತಾಯಿ ಒಡಲು ಈಗ ಬರಿದಾಗಿ ಹೋಗಿದೆ.

ದುಡ್ಡು ಇರದೇ ಒಂದು ವಾರದಿಂದ ಡಯಾಲಿಸಿಸ್‌ ಮಾಡಿಸದೇ ಇದ್ದುದರಿಂದ ಬಹಳ ಕಷ್ಟಪಡುತ್ತಿದ್ದ ಬಾಲಕನನ್ನು ನೋಡಲು ಆಗದೇ ಹಿರಿಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಆ್ಯಂಬುಲನ್ಸ್‌(Ambulance) ಮುಖಾಂತರ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ರಾತ್ರಿ ಕೊನೆಯುಸಿರೆಳೆದಿದ್ದಾನೆ. ಇದ್ದ ಒಬ್ಬ ಮಗನನ್ನು ಕಳೆದುಕೊಂಡ ತಾಯಿ(Mother) ಈಗ ಕಣ್ಣೀರು ಹಾಕುತ್ತಿದ್ದಾಳೆ.

Latest Videos

undefined

ಬಾಲಕನ ಹಾಗೂ ಬಡತಾಯಿಯ ಬೆಂಬಲಕ್ಕೆ ನಿಂತು ಸಹಾಯಕ್ಕಾಗಿ ಕನ್ನಡಪ್ರಭ(Kannada Prabha) ವಿಶೇಷ ವರದಿ ಮಾಡಿತ್ತು. ಆದರೆ, ಸಹಾಯ ಸಿಗುತ್ತದೆ ಎಂದಿಕೊಳ್ಳುವಷ್ಟರಲ್ಲಿ, ಬಾಲಕನ ಮೃತಪಟ್ಟಿದ್ದಾನೆ. ಪತಿ ಕಳೆದುಕೊಂಡ ಬಡತಾಯಿಗೆ ಆಸರೆಯಾಗಬೇಕಿದ್ದ ಮಗನನ್ನು ಉಳಿಸಿಕೊಳ್ಳಲು ಮೀತಿಮೀರಿ ಪ್ರಯತ್ನ ಮಾಡಿದ ತಾಯಿಯ ಪ್ರಯತ್ನ ಮಾತ್ರ ಯಶಸ್ಸು ಕಾಣಲಿಲ್ಲ. ಮಗನನ್ನೂ ಕಳೆದುಕೊಂಡು ರೋಧಿಸುತ್ತಿದ್ದ ದೃಶ್ಯ ನೋಡುಗರ ಕಣ್ಣುಗಳು ಒದ್ದೆಯಾಗುವಂತೆ ಮಾಡಿತು.

Gadag| ಚಿಕ್ಕ ವಯಸ್ಸಲ್ಲೇ ಕಿಡ್ನಿ ವೈಫಲ್ಯ, ಮಗನ ಚಿಕಿತ್ಸೆಗೆ ಹಣವಿಲ್ಲದೇ ಹೆತ್ತವಳ ಪರದಾಟ..!

ಮಗನ ಚಿಕಿತ್ಸೆಗೆ ಹಣವಿಲ್ಲದೇ ಹೆತ್ತವಳ ಪರದಾಟ..!

10 ವರ್ಷದ ಕೆಳಗೆ ಆನಾರೋಗ್ಯದಿಂದ(Illness) ಮೃತಪಟ್ಟ ಪತಿಯ ನೋವು ಒಂದು ಕಡೆಯಾದರೆ, ಇದ್ದ ಒಬ್ಬ ಮಗನ ಎರಡೂ ಕಿಡ್ನಿ ವೈಫಲ್ಯದಿಂದಾಗಿ ಮಗನ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿ, ಈಗ ಡಯಾಲಿಸಿಸ್‌ಗೂ ಹಣ ಹೊಂದಿಸಲಾಗದ ಶೋಚನೀಯ ಸ್ಥಿತಿ ಬಂದಿತ್ತು ಹೆತ್ತವ್ವಳಿಗೆ. 

ಹೊಳೆಹಡಗಲಿ ಗ್ರಾಮದ ಚನ್ನಯ್ಯ ಶೇಖರಯ್ಯ ಬೆಟದೂರ ಎಂಬ 11 ವರ್ಷದ ಬಾಲಕನು ಕಳೆದ 5 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ(Kidney Failure) ಬಳಲುತ್ತಿದ್ದು ಈಗ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ತಾಯಿ ಈರಮ್ಮ ಕಳೆದ 5 ವರ್ಷಗಳಿಂದ ಸಾಕಷ್ಟು ಸಾಲ(Loan), ಸೋಲ ಮಾಡಿ ಹಣ ಖರ್ಚು ಮಾಡಿ ಚಿಕಿತ್ಸೆ(Treatment) ಕೊಡಿಸಿದ್ದು, ಮುಂದೆ ಚಿಕಿತ್ಸೆ ನೀಡಲು ಹಣವಿರದೇ ಪರದಾಡಿದ್ದಳು.

ಮಗು ಚನ್ನಯ್ಯನಿಗೆ ಹುಬ್ಬಳ್ಳಿ(Hubballi), ಬಾಗಲಕೋಟಿ(Bagalkote) ಸೇರಿದಂತೆ ಹಲವು ಕಡೆ ಚಿಕಿತ್ಸೆ ಕೋಡಿಸಿದ್ದು, 3ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಡಯಾಲಿಸಿಸ್‌(Dialysis) ಮಾಡಿಸಲೂ .5 ರಿಂದ 6 ಸಾವಿರ ಖರ್ಚು ಆಗುತ್ತದೆ. ಅದಕ್ಕೂ ಸಹ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ಕಡೆ ಸಾಲ ಮಾಡಿಬಿಟ್ಟಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ(Private Hospital) ಚಿಕಿತ್ಸೆಗೆ ಸಾಕಷ್ಟು ಹಣ ಕೇಳುತ್ತಾರೆ. ಇದ್ದ ಒಬ್ಬ ಮಗನನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ ಎಂದು ತಾಯಿ ಈರಮ್ಮ ಕಣ್ಣೀರಿಟಿದ್ದಳು. 

Gadag; 10 ನಿಮಿಷದಲ್ಲಿ ಆಪರೇಷನ್, ಮೃತಪಟ್ಟ ಗರ್ಭಿಣಿ ಹೊಟ್ಟೆಯಿಂದ ಮಗು ಹೊರತೆಗೆದ ವೈದ್ಯರು!

ಮಗನಿಗೆ ಶಕ್ತಿ ಮೀರಿ ಚಿಕಿತ್ಸೆ ಕೊಡಿಸಿದ್ದೇವೆ. ವೈದ್ಯರು(Doctors) ಬೆಂಗಳೂರಿಗೆ(Bengaluru) ಹೋಗಿ ಅಲ್ಲಿ .6 ರಿಂದ 8 ಲಕ್ಷ ಖರ್ಚು ಆಗುತ್ತದೆ ಎಂದು ತಿಳಿಸಿದ್ದರು. ಹಣವಿಲ್ಲದೆ ಮನೆಯಲ್ಲಿ ದಿಕ್ಕು ತೋಚದಾಗಿದೆ. ನನ್ನ ಮಗನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಎಂದು ತಾಯಿ ಈರಮ್ಮ ಬೆಟದೂರ ಕಂಡಕಂಡವರ ಬಳಿ ಬೇಡಿಕೊಂಡಿದ್ದಳು.

ನಮ್ಮಲ್ಲಿರುವ ಹಣ ಮುಗಿದು, ಬಂಗಾರದೊಡವೆಗಳು ಮಾರಿ ಖರ್ಚು ಮಾಡಿದ್ದೇವೆ. ಆದರೂ ಆರಾಮ ಆಗವಲ್ಲ. ಆದರೆ, ಡಾಕ್ಟರ್‌ ಬಹಳ ಹಣ ಖರ್ಚಾಗುತ್ತೆ ಹಣ ಹೊಂದಿಸಿಕೊಂಡು, ಬೆಂಗಳೂರಿಗೆ ಹೋಗ್ರಿ ಎಂತಾರ, ನಮ್ಮ ಹತ್ತಿರ ನೋಡಿದ್ರ ಡಯಾಲಿಸಿಸ್‌ ಮಾಡಿಸಲೂ ಹಣ ಇಲ್ಲ. ಹಣ ಉಳ್ಳವರು ಸಹಾಯ ಮಾಡಿ ನನ್ನ ಮಗನ ಜೀವ ಉಳಿಸಿಕೊಡಿ ಅಂತ ಮಗುವಿನ ತಾಯಿ ಈರಮ್ಮ ಬೆಟದೂರ ಅಂಗಲಾಚಿ ಬೇಟಿಕೊಂಡಿದ್ದಳು. 

ಒಂದ್ಕಡೆ ಹೇಗಾದ್ರೂ ಮಾಡಿ ಮಗನ ಜೀವ ಉಳಿಸಿಕೊಳ್ಳಲು ತಾಯಿ ಪರದಾಡುತ್ತಿದ್ದೆರೆ ವಿಧಿಯಾಟವೇ ಬೇರೆಯಾಗಿತ್ತು.  ನಿನ್ನೆ ರಾತ್ರಿ ಚನ್ನಯ್ಯ ಇಹಲೋಕ ತ್ಯಜಿಸಿದ್ದಾನೆ.  
 

click me!