* ಡೊಂಬರಳ್ಳಿ ಗ್ರಾಮದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
* ಸುಭದ್ರ ಆಡಳಿತವನ್ನು ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು
* ಬ್ಯಾರೇಜ್ ನಿರ್ಮಾಣಗಳಿಂದ ಅಂತರ್ಜಲ ಹೆಚ್ಚಳ
ಕೊಪ್ಪಳ(ಆ.25): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಡವರಿಗೆ ನೀಡುತ್ತಿದ್ದ ಪಡಿತರ ವ್ಯವಸ್ಥೆಯಲ್ಲಿನ ಅಕ್ಕಿಯನ್ನು ಐದು ಕೆಜಿಗೆ ಕಡಿತ ಮಾಡಿದ್ದು, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ ಪಕ್ಷದ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ ಎಂದು ಶಾಸಕ ಹೇಳಿದ್ದಾರೆ.
ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೇವಲ ಆಂತರಿಕ ಕಚ್ಚಾದಲ್ಲಿ ಕಾಲಕಳೆಯುತ್ತಿದೆ. ಇಂಥ ಕೆಟ್ಟ ಸರ್ಕಾರವನ್ನು ಎಂದು ಜನರು ನೋಡಿರಲಿಲ್ಲ. ಬಡವರಿಗೆ ಏನು ಕೊಡುತ್ತಿಲ್ಲ. ಕೋವಿಡ್ ಸಮಯದಲ್ಲಿಯೂ ಸ್ಪಂದನೆ ಮಾಡಲಿಲ್ಲ. ಪ್ರವಾಹ ಬಂದು ಜನರು ತೇಲಿ ಹೋದರೂ ಪರಿಹಾರ ನೀಡಲಿಲ್ಲ. ಆದ್ದರಿಂದ ಇಂಥ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ.
undefined
ಮುಂದಿನ ದಿನಗಳಲ್ಲಿ ಮತ್ತೆ ಸುಭದ್ರ ಆಡಳಿತವನ್ನು ನೀಡಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರ ಆಶಯವಾಗಿದೆ. ಸಿದ್ದರಾಮಯ್ಯ ಅವರು ಸಿ.ಎಂ. ಆಗಿದ್ದ ವೇಳೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಬರೋಬ್ಬರಿ . 3 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಇದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಅತ್ಯಧಿಕ ಅನುದಾನ ಬಂದಿರುವ ದಾಖಲೆಯಾಗಿದೆ. ಆದರೆ, ಪ್ರಸ್ತುತ ಸರ್ಕಾರದಲ್ಲಿ ಅಂಥ ಗಮನಾರ್ಹ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಈಗಾಗಲೇ ಈ ಮೊದಲೇ ಆಗಿದ್ದ ಹಿರೇಹಳ್ಳಕ್ಕೆ ಸರಣಿ ಬ್ಯಾರೇಜ್ ನಿರ್ಮಾಣ ಮಾಡುವ ಕಾರ್ಯ ಆಗಿದ್ದು, ಬ್ಯಾರೇಜ್ ನಿರ್ಮಾಣಗಳಿಂದ ಅಂತರ್ಜಲ ಹೆಚ್ಚಳವಾಗಿದೆ. ನೀರಿನ ಸಮಸ್ಯೆ ನಿಗಿದೆ ಎಂದರು.
ಕೊಪ್ಪಳ: ಅಂಜನಾದ್ರಿ ದರ್ಶನ ನಿರ್ಬಂಧ ಮತ್ತೆ ಮುಂದುವರಿಕೆ
ಕೋವಿಡ್ ಬಂದಿದ್ದರಿಂದ ತೀವ್ರ ಸಮಸ್ಯೆಯಾಗಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಗವಿಸಿದ್ಧೇಶ್ವರ ಆಸ್ಪತ್ರೆ ಇದ್ದಿದ್ದರಿಂದ ಅಷ್ಟೊಂದು ದೊಡ್ಡ ಪ್ರಮಾಣದ ಸಾವು ಆಗಲಿಲ್ಲ. ಬೇರೆಡೆಗೆ ಹೋಲಿಕೆ ಮಾಡಿದರೇ ಇಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತಿತ್ತು ಎಂದು ಪಕ್ಕದ ಜಿಲ್ಲೆಯವರೇ ಹೇಳುತ್ತಿದ್ದಾರೆ ಎಂದರು.
ಯಾವ್ಯಾವ ಊರಲ್ಲಿ ಭೂಮಿ ಪೂಜೆ
ಕಾತರಕಿ-ಗುಡ್ಲಾನೂರು, ಬೆಳೂರು, ಡೊಂಬರಳ್ಳಿ, ಬೂದಿಹಾಳ, ಬಿಸರಳ್ಳಿ, ಬಿಕನಳ್ಳಿ, ಮೈನಳ್ಳಿ, ಹಣವಾಳ ಹಾಗೂ ವದಗನಾಳ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ. ಹಂದ್ರಾಳ ಗ್ರಾಮದಲ್ಲಿ ಮಾತ್ರ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕರು ಅಡಿಗಲ್ಲು ಹಾಕಿದರು.
ಕಾಮಗಾರಿಗೆ ಭೂಮಿ ಪೂಜೆ
ಕೊಪ್ಪಳ ನಗರದಲ್ಲಿ ಅಂಜುಮನ್ ಕಮಿಟಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರುಪಾಯಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಲತಾ ಗವಿಸಿದ್ದಪ್ಪ ಚಿನ್ನೂರು, ಪ್ರಸನ್ ಗಡಾದ್, ಕೊಪ್ಪಳ ತಾಪಂ ಅಧ್ಯಕ್ಷ ಬಾಲಚಂದ್ರನ್, ರಾಬಕೋ ನಿರ್ದೇಶಕರಾದ ವೆಂಕನಗೌಡ ಹಿರೇಗೌಡ್‌್ರ, ಪ್ರಸನ್ ಗಡಾದ, ಕೃಷ್ಣಾರಡ್ಡಿ ಗಲಬಿ, ಯಲ್ಲನಗೌಡ್ರ, ಭರಮಪ್ಪ ಹಟ್ಟಿ, ವಿರೂಪಾಕ್ಷಗೌಡ, ನಿಂಗಪ್ಪ ಯತ್ನಟ್ಟಿ, ತೋಟಪ್ಪ ಸಿಂಟ್ರಿ, ಪಂಪಣ್ಣ ಪೂಜಾರ, ಹನುಮೇಶ ಹೊಸಳ್ಳಿ, ಶ್ರೀಧರ ಬೂದಿಹಾಳ, ಪ್ರಕಾಶ ಕಿನ್ನಾಳ, ಶಂಕ್ರಪ್ಪ ಮೊದಲಾದವರು ಇದ್ದರು.