ಉಡುಪಿಯಲ್ಲಿ SSLC ಪರೀ​ಕ್ಷೆ​ಗೆ ಕೊರೋನಾ ಸೋಂಕಿತೆ ಸೇರಿ 109 ಮಂದಿ ಗೈರು

By Kannadaprabha News  |  First Published Jun 30, 2020, 8:27 AM IST

ಸೋಮವಾರ ನಡೆದ ಎಸ್‌ಎಸ್‌​ಎ​ಲ್‌​ಸಿಯ ವಿಜ್ಞಾನ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 109 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕಾಪು ಕ್ಷೇತ್ರದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಕೆಗೆ ಈ ಪರೀಕ್ಷೆ ಬರೆಯುವುದಕ್ಕೆ ಅನಿವಾರ್ಯವಾಗಿ ಅವಕಾಶ ಸಿಗಲಿಲ್ಲ.


ಉಡುಪಿ(ಜೂ.30): ಸೋಮವಾರ ನಡೆದ ಎಸ್‌ಎಸ್‌​ಎ​ಲ್‌​ಸಿಯ ವಿಜ್ಞಾನ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 109 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕಾಪು ಕ್ಷೇತ್ರದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಕೆಗೆ ಈ ಪರೀಕ್ಷೆ ಬರೆಯುವುದಕ್ಕೆ ಅನಿವಾರ್ಯವಾಗಿ ಅವಕಾಶ ಸಿಗಲಿಲ್ಲ.

ವಿಜ್ಞಾನ ಪರೀಕ್ಷೆಗೆ ಜಿಲ್ಲೆ​ಯಲ್ಲಿ ಒಟ್ಟು 13768 ಮಂದಿ ನೋಂದಾಯಿಸಿಕೊಂಡಿದ್ದರು, ಅವರಲ್ಲಿ 12976 ವಿದ್ಯಾರ್ಥಿಗಳು ಹಾಜರಾಗಿದ್ದರು. ಹೊರಜಿಲ್ಲೆಯಿಂದ ಹೆಸರು ನೋಂದಾಯಿಸಿಕೊಂಡ 82 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪರೀಕ್ಷೆಗೆ ಹಾಜರಾಗಿದ್ದರು. ಖಾಸಗಿಯಾಗಿ ಪರೀಕ್ಷೆ ಕಟ್ಟಿದ್ದ 453 ವಿದ್ಯಾರ್ಥಿಗಳಲ್ಲಿ 376 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 77 ಮಂದಿ ಪರೀಕ್ಷೆಗೆ ಬಂದಿರಲಿಲ್ಲ.

Latest Videos

undefined

ಸೋಂಕು ಸ್ಫೋಟ: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಕಾಯ್ದಿರಿಸಲು ಸಂಸದ ಸೂಚನೆ

ಕೊರೋನಾ ಕಂಟೈನ್ಮೆಂಟ್‌ ವಲಯದಿಂದ ಬಂದ 10 ವಿದ್ಯಾರ್ಥಿಗಳಿಗೆ ಮತ್ತು ಅನಾರೋಗ್ಯ ಪೀಡಿತ ಮಕ್ಕಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿಂದಿನಂತೆ ಪರೀಕ್ಷೆಗೆ ಮೊದಲು ಎಲ್ಲ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿತ್ತು. ಕೊರೋನಾ ಪೀಡಿತ ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿಯ ಇತರ ವಿದ್ಯಾರ್ಥಿಗಳಿಗೆ ಆ ಕೊಠಡಿಯ ಬದಲು ಬೇರೆ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿತ್ತು.

ಕಣ್ಣೂರು ಏರ್ಪೋರ್ಟ್‌ನಿಂದ ತಪ್ಪಿಸಿಕೊಂಡ್ರಾ‌ 30ಕ್ಕೂ ಅಧಿಕ ಕನ್ನಡಿಗರು..?

ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಬರುವುದಕ್ಕೆ ಜಿಲ್ಲಾಡಳಿತ 82 ಬಸ್‌​ಗಳ ವ್ಯವಸ್ಥೆ ಮಾಡಿತ್ತು. ಪರೀಕ್ಷಾ ಕೊಠಡಿಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್‌ - ಮಾಸ್ಕ್ ಬಳಕೆ ಕಡ್ಡಾಯವಾಗಿ ಪಾಲಿಸಲಾಯಿತು.

click me!