ಓರ್ವ ವ್ಯಕ್ತಿ ಮೃತ| ಜಿಂದಾಲ್‌ನ 479 ಪ್ರಕರಣಗಳು ದೃಢ| 580 ಜನರು ಗುಣಮುಖ| 657 ಸೋಂಕಿತರು ಚಿಕಿತ್ಸೆ| 35 ಜನರ ಮರಣ| ಇನ್ನು 909 ಗಂಟಲು ದ್ರವ ಪರೀಕ್ಷೆಯ ವರದಿ ಬರಬೇಕಾಗಿದೆ|
ಬಳ್ಳಾರಿ(ಜು.06): ಜಿಲ್ಲೆಯಲ್ಲಿ ಭಾನುವಾರ 104 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 1307 ಜನರಿಗೆ ಪಾಸಿಟಿವ್ ಸೋಂಕು ಹರಡಿದಂತಾಗಿದೆ. ಜಿಲ್ಲೆಯ ಸೋಂಕಿತರ ಸಂಖ್ಯೆಯಲ್ಲಿ ಜಿಂದಾಲ್‌ಗೆ ಸೇರಿದ 479 ಪ್ರಕರಣಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹೊಸಪೇಟೆ 28, ಕೊಪ್ಪಳ 1, ಬಳ್ಳಾರಿ 28, ಸಂಡೂರು 38, ಸಿರುಗುಪ್ಪ 2, ಹಡಗಲಿ 1, ಕೂಡ್ಲಿಗಿ 2 ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ 2 ಪ್ರಕರಣ ಪತ್ತೆಯಾಗಿವೆ.
ಬಳ್ಳಾರಿ: ವಿಮ್ಸ್‌ನಲ್ಲಿ ವೈದ್ಯ ಸೇರಿ 19 ಜನರಿಗೆ ಕೊರೋನಾ ಸೋಂಕು
ಜಿಲ್ಲೆಯಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ 580 ಜನರು ಗುಣಮುಖರಾಗಿದ್ದಾರೆ. 657 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 35 ಜನರು ಮರಣ ಹೊಂದಿದ್ದಾರೆ. ಇನ್ನು 909 ಗಂಟಲು ದ್ರವ ಪರೀಕ್ಷೆಯ ವರದಿ ಬರಬೇಕಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.