ಕೊರೋನಾ ಕೇಸ್‌ನಲ್ಲಿ ಭಾರೀ ಇಳಿಕೆ: 7 ತಿಂಗಳ ಬಳಿಕ 3ಕ್ಕೆ ಇಳಿದ ಸಾವಿನ ಸಂಖ್ಯೆ

By Kannadaprabha News  |  First Published Nov 14, 2020, 7:10 AM IST

ಬೆಂಗಳೂರಲ್ಲಿ ಕೊರೋನಾ ಕೇಸ್‌, ಸಾವಿನ ಸಂಖ್ಯೆ ಭಾರೀ ಇಳಿಮುಖ| ಶುಕ್ರವಾರ 3 ಮಂದಿ ಕೊರೋನಾಗೆ ಬಲಿ| 1030 ಹೊಸ ಪ್ರಕರಣ ಪತ್ತೆ| ಸದ್ಯ 17,769 ಸಕ್ರಿಯ ಪ್ರಕರಣ, ಈ ಪೈಕಿ 391 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ| 


ಬೆಂಗಳೂರು(ನ.14):  ರಾಜಧಾನಿಯಲ್ಲಿ ಕೊರೋನಾ ಸೋಂಕು ಪ್ರಕರಣ ಹಾಗೂ ಸೋಂಕಿತರ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಕಳೆದ ಏಳು ತಿಂಗಳ ಬಳಿಕ ದಿನವೊಂದರ ಸೋಂಕಿತರ ಸಾವಿನ ಸಂಖ್ಯೆ ಮೂರಕ್ಕೆ ಇಳಿಕೆಯಾಗಿದೆ.

ಕಳೆದ ಜೂ.26ರಂದು ನಗರದಲ್ಲಿ ಮೂರು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ನಂತರದ ದಿನಗಳಲ್ಲಿ ದಿನಕ್ಕೆ ಮೂವತ್ತರವರೆಗೆ ಆಗುತ್ತಿದ್ದ ಸಾವಿನ ಸಂಖ್ಯೆ ಕಳೆದ ಒಂದು ಎಂಟತ್ತು ದಿನದಿಂದ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿತ್ತು. ಇದೀಗ ಶುಕ್ರವಾರ ಕೇವಲ ಮೂರು ಸಾವಿನ ಪ್ರಕರಣ ವರದಿಯಾಗಿವೆ.

Latest Videos

undefined

ಶುಕ್ರವಾರ ನಗರದಲ್ಲಿ 1,030 ಹೊಸ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 3,55245ಕ್ಕೆ ಏರಿಕೆಯಾಗಿದೆ. ಇದೇ ದಿನ 1,200 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗಿನ ಒಟ್ಟು ಗುಣಮುಖರ ಸಂಖ್ಯೆ 3,33,487ಕ್ಕೆ ಏರಿಕೆಯಾಗಿದೆ.

ಕೊರೋನಾ ಭೀತಿ: ‘ಆರೋಗ್ಯ ಸೇತು’ ಹೇಗೆ ಸುರಕ್ಷಿತವಲ್ಲ?

ಮೂವರ ಸಾವಿನೊಂದಿಗೆ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 3,988ಕ್ಕೆ ಏರಿಕೆಯಾಗಿದೆ. ಸದ್ಯ 17,769 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 391 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಲಹಂಕ-ಪಶ್ಚಿಮ ವಲಯಗಳಲ್ಲಿ ಹೆಚ್ಚು

ನಗರದಲ್ಲಿ ಕಳೆದ 24 ತಾಸಿನಲ್ಲಿ ವರದಿಯಾಗಿರುವ 1,030 ಪ್ರಕರಣಗಳ ಪೈಕಿ ಅತಿ ಹೆಚ್ಚು ಶೇ.16ರಷ್ಟು ಪ್ರಕರಣಗಳು ಯಲಹಂಕ ಮತ್ತು ಪಶ್ಚಿಮ ವಲಯಗಳಲ್ಲಿ ಪತ್ತೆಯಾಗಿವೆ. ಉಳಿದಂತೆ ಪೂರ್ವ ವಲಯದಲ್ಲಿ ಶೇ.15, ದಕ್ಷಿಣದಲ್ಲಿ ಶೇ.14, ಬೊಮ್ಮನಹಳ್ಳಿ ವಲಯದಲ್ಲಿ ಶೇ.13, ಮಹದೇವಪುರ ಮತ್ತು ರಾಜಾಜಿನಗರ ವಲಯದಲ್ಲಿ ತಲಾ ಶೇ.11 ಹಾಗೂ ದಾಸರಹಳ್ಳಿ ವಲಯದಲ್ಲಿ ಶೇ.4ರಷ್ಟು ಪ್ರಕರಣಗಳು ವರದಿಯಾಗಿವೆ.
 

click me!