ಅವರಿಬ್ಬರ ನಡುವೆ ನಡೆದಿತ್ತು ಅದೆಲ್ಲವೂ : ಆ ಫೋಟೊ ಇಟ್ಕೊಂಡು ತಿರುಗಿಬಿದ್ಲು ಆಕೆ

By Kannadaprabha News  |  First Published Nov 13, 2020, 4:06 PM IST

ಅವರಿಬ್ಬರ ನಡುವೇ ಫೋನಲ್ಲೇ ಎಲ್ಲಾ ನಡೆದಿತ್ತು. ಬಳಿಕ ಅದನ್ನೇ ಇಟ್ಕೊಂಡು ಅವನ ಮೇಲೆ ತಿರುಗಿ ಬಿದ್ದಳು ಆಕೆ..


ಮಂಗಳೂರು (ನ.13): ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಬೆದರಿಕೆ ಒಡ್ಡಿದ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಶರ್ಬತ್‌ಕಟ್ಟೆಯ ವ್ಯಕ್ತಿಯೊಬ್ಬರಿಗೆ ಕಳೆದ ಆಗಸ್ಟ್‌ನಲ್ಲಿ ಯುವತಿಯೊಬ್ಬಳು ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಾಳೆ. 

Tap to resize

Latest Videos

ಬಳಿಕ ಫೇಸ್‌ಬುಕ್‌ ಮೆಸೆಂಜರ್‌ ಮೂಲಕ ನಿರಂತರವಾಗಿ ತಮ್ಮ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಹಣದ ಬೇಡಿಕೆ ಇಟ್ಟಿದ್ದಾಳೆ. ಬಳಿಕ ಶರ್ಬತ್‌ಕಟ್ಟೆಯ ವ್ಯಕ್ತಿಗೂ ಅಶ್ಲೀಲ ಭಂಗಿಯ ಫೋಟೊ ಕಳುಹಿಸುವಂತೆ ಪ್ರೇರೇಪಿಸಿದ್ದಾಳೆ. ಆಗ ಇವರು ಫೋಟೊ ಕಳುಹಿಸಿದ್ದಾರೆ. 

ಪಕ್ಕದ ಮನೆಯಲ್ಲಿ ಪ್ರೇಮಾಂಕುರ : 14ರ ಬಾಲಕನಿಂದ 12ರ ಬಾಲಕಿ ಗರ್ಭಿ​ಣಿ! ..

ಅದೇ ಫೋಟೊಗಳನ್ನು ಇಟ್ಟುಕೊಂಡು ಆರೋಪಿಗಳು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಒಡ್ಡಿದ್ದರು ಎಂದು ಸಂತ್ರಸ್ತ ದೂರು ನೀಡಿದ್ದಾರೆ.

click me!