ಹೊನ್ನಾಳಿ (ನ.12) : ಕ್ಷೇತ್ರಕ್ಕೆ ಶಾಸಕನಾಗಿ ಬಂದ ನಂತರ ಸುಮಾರು 4 ಸಾವಿರ ಕೋಟಿ ರು.ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳ ಮಾಡಲಾಗಿದೆ ಎಂದು ಸಿಎಂ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದಿನ ತಿಂಗಳು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೆಲವು ಸಚಿವರ ಕ್ಷೇತ್ರಕ್ಕೆ ಕರೆಸಿ ಸುಮಾರು 1 ಸಾವಿರ ಕೋಟಿ ರು. ಅನುದಾನದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
undefined
Davanagere: ರಾಷ್ಟ್ರೀಯ ಲೋಕ ಅದಾಲತ್ ಕೌಟುಂಬಿಕ ನ್ಯಾಯಾಲಯದಲ್ಲಿ 17 ಪ್ರಕರಣಗಳು ರಾಜಿ ಸಂಧಾನ
ಕುಂಬಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆ ಯೋಜನೆಯಡಿ ನೆಲಹೊನ್ನೆ ಗ್ರಾಮ ರಾಜಾಕಾಲುವೆ ಚರಂಡಿ ಕಾಮಗಾರಿಗೆ 55 ಲಕ್ಷ ರು., ನೆಲಹೊನ್ನೆ ಸಿಸಿ ರಸ್ತೆ, ಚರಂಡಿ ಅಭಿವೃದ್ಧಿಗೆ 25 ಲಕ್ಷ ರು., ಕುಂಬಳೂರು ಸಿ.ಸಿ.ರಸ್ತೆ ಅಭಿವೃದ್ಧಿಗೆ 30 ಲಕ್ಷ ರು. ಒಟ್ಟು 1.10 ಕೋಟಿ ಅನುದಾನ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದ್ದು ಈ ಕಾಮಗಾರಿಗಳ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿ. (ಕೆಆರ್‌ಐಡಿಎಲ್)ದಿಂದ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ಧೂಳು ಮುಕ್ತ ಗ್ರಾಮ:
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಕಾಸ್ ಮಾತನಾಡಿ, ತಮ್ಮ ಗ್ರಾಮ ಪಂಚಾಯಿತಿಗಾಗಿ ಸಾಕಷ್ಟುಅನುದಾನ ನೀಡಿದ್ದು ಸಿ.ಸಿ.ರಸ್ತೆಗೆ 5 ಕೋಟಿಗೂ ಹೆಚ್ಚು ಅನುದಾನ ನೀಡಿ ಧೂಳು ಮುಕ್ತ ಗ್ರಾಮವಾಗಿದೆ. 27 ಲಕ್ಷ ರು. ವೆಚ್ಚದಲ್ಲಿ ಪಶುವೈದ್ಯ ಆಸ್ಪತ್ರೆ, 21 ಲಕ್ಷ ರು.ಆಯುರ್ವೇದಿಕ್ ಆಸ್ಪತ್ರೆ ನಂತರ 6ಲಕ್ಷ ರು.ವೆಚ್ಚದಲ್ಲಿ ಯೋಗಾ ಸಭಾಂಗಣ, 5 ಹೈಮಾಸ್ಟ್ ದೀಪಗಳು, ಜಲಜೀವನ್ ಮಿಷನ್ ಯೋಜನೆಯಡಿ ಕುಂಬಳೂರಿಗೆ 87ಲಕ್ಷ ರು. ನೆಲಹೊನ್ನೆ ತಾಂಡಕ್ಕೆ 16 ಲಕ್ಷ ರು., ನೆಲಹೊನ್ನೆಗೆ 52 ಲಕ್ಷ ರು. ಕ್ಯಾಂಪ್‌ಗೆ 14 ಲಕ್ಷ ಹೀಗೆ ಸಾಕಷ್ಟುಅನುದಾನಗಳ ಶಾಸಕರು ಒದಗಿಸಿ ಸಮಗ್ರ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಚ್.ಜೆ.ರಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ ನೋವು,ಅಡೆತಡೆಗಳ ಮಧ್ಯೆಯೂ ಶಾಸಕರು ತಾಲೂಕಿನ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕ್ಷೇತ್ರದ ಜನರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ ಶಾಸಕರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಆರ್. ಈಶ್ವರಪ್ಪ, ಉಪಾಧ್ಯಕ್ಷರಾದ ಹಳಧಮ್ಮ, ಸದಸ್ಯರಾದ ವಿಕಾಸ್, ಶೃತಿ ಟಿ.ಎಸ್, ಎಚ್.ಪಂಚಾಕ್ಷರಿ, ಕವಿತಾ, ಕೆ.ಎಂ.ಕುಮಾರ್, ಪಾರ್ವತಿಬಾಯಿ, ಅಣ್ಣಪ್ಪ, ಪವನ, ಎಚ್.ರೇಖಾ, ಆಂಜನೇಯ, ಅನಸೂಯಮ್ಮ, ಕರಿಯಮ್ಮ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗರಾಜ್, ಸದಸ್ಯ ಮಾಲತೇಶ್, ಶಾಂತರಾಜ್,ಗ್ರಾಮದ ಮುಖಂಡರು, ಅಧಿಕಾರಿಗಳಿದ್ದರು.
ಚಂದ್ರು ಸಾವಿನ ಸಮಗ್ರ ವರದಿಗೆ ಕಾಯುತ್ತಿರುವೆ: ರೇಣುಕಾಚಾರ್ಯ
159 ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ, ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ 102 ಮನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳ ವಿತರಣೆ ಜೊತೆಗೆ ಸಂಧ್ಯಾಸುರಕ್ಷಾ ಯೋಜನೆ 09, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯಯೋಜನೆ 09, ಅಂಗವಿಕಲ ವೇತನ 04, ವಿಧವಾ ವೇತನ 04, ಮನಸ್ವಿನಿ ವೇತನ 01, ಬಗರ್ ಹುಕುಂ ಸಾಗುವಳಿ ಪತ್ರಗಳು 19, ಮನೆಹಾನಿ ಪರಿಹಾರ ಮಂಜೂರಾತಿ 11 ಹೀಗೆ ಒಟ್ಟು 159 ಫಲಾನುಭವಿಗಳಿಗೆ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರಗಳನ್ನು ಶಾಸಕ ರೇಣುಕಾಚಾರ್ಯ ವಿತರಿಸಿದರು.