ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಮ್ಮ ಸ್ವ ಕ್ಷೇತ್ರ ಭರ್ಜರಿ ಗಿಫ್ಟ್ ನೀಡಿದ್ದಾರೆ.ಈಗಾಗಲೇ ರಸ್ತೆ ಕಾಮಾಗರಿಗೆ ಚಾಲನೆ ನೀಡಿದ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ (ಆ.18): ಜಿಲ್ಲೆಯ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಚಿಂತಾಮಣಿ ತಾಲೂಕಿನಲ್ಲಿ ಭವಿಷ್ಯ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿದ್ದು ಈಗಾಗಲೇ ಮಸ್ತೇನಹಳ್ಳಿ ಸಮೀಪ ಕೈಗಾರಿಕಾ ಎಸ್ಟೇಟ್ ಗುರುತಿಸಿ ಸುಮಾರು ಸಾವಿರ ಎಕರೆ ಜಮೀನು ಮೀಸಲಿಡಲಾಗಿದೆಯೆಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಪ್ರಧಾನ ಮಂತ್ರಿ ಗ್ರಾಮ ಸಡಕ್ 3ನೇ ಯೋಜನೆಯಡಿ ಸುಮಾರು 18 ಕೋಟಿ ರೂ, ವೆಚ್ಚದಲ್ಲಿ 30 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ತಾಲೂಕಿನ ಬೋಮ್ಮೆಕಲ್ಲು, ಬ್ಯಾಲಹಳ್ಳಿ ಕ್ರಾಸ್ ಹಾಗೂ ಚಿಕ್ಕಪುರ ಗ್ರಾಮಗಳಲ್ಲಿ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು.
ರಾಜ್ಯದಲ್ಲಿ ಶೀಘ್ರ ನಿತ್ಯ 75 ಸಾವಿರ ಕೋವಿಡ್ ಟೆಸ್ಟ್: ಸಚಿವ ಸುಧಾಕರ್...
ಕ್ಷೇತ್ರದಲ್ಲಿ ಕೈಗಾರಿಗಳ ಸ್ಥಾಪನೆಗೆ ಒತ್ತು
ಜಿಲ್ಲೆಯಲ್ಲಿ ಚಿಂತಾಮಣಿ ತಾಲೂಕು ಕೇವಲ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಆರ್ಥಿಕ ಹಾಗೂ ಕೈಗಾರಿಕಾ ವಲಯದಲ್ಲಿ ಸಾಕಷ್ಟುಅಭಿವೃದ್ದಿ ಆಗಬೇಕಿದೆ. ಈ ದಿಸೆಯಲ್ಲಿ ಕ್ಷೇತ್ರದ ಶಾಸಕ ಜೆಕೆ ಕೃಷ್ಣಾರೆಡ್ಡಿ ಸೇರಿದಂತೆ ಈ ಭಾಗದ ಚುನಾಯಿತ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ಒತ್ತು ಕೊಡಲಾಗುವುದು. ಕೋವಿಡ್ ಸಂಕಷ್ಟಮುಗಿದ ಕೂಡಲೇ ಈ ಭಾಗದ ಕೈಗಾರಿಕಾ ಪ್ರದೇಶದಲ್ಲಿ ಅನೇಕ ಕೈಗಾರಿಕೆಗಳು ಬರಲು ಸಿದ್ಧವಿದ್ದು ಈಗಾಗಲೇ ಸರ್ಕಾರದೊಂದಿಗೆ ಕೈಗಾರಿಕೋದ್ಯಮಿಗಳೊಮದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ಟಾಪರ್ಸ್‌ಗೆ ಸ್ವಂತ ಹಣದಲ್ಲಿ ಸಚಿವ ಸುಧಾಕರ್ ಗಿಫ್ಟ್...
ಸ್ಥಳೀಯರಿಗೆ ಉದ್ಯೋಗ:
ಈ ಭಾಗದ ಕೈಗಾರಿಕಾ ಅಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟು ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು. ಕ್ಷೇತ್ರದ ಶಾಸಕ ಜೆಕೆ ಕೃಷ್ಣಾರೆಡ್ಡಿ ನನ್ನ ಆತ್ಮೀಯರು. ಕ್ಷೇತ್ರದಲ್ಲಿ ಸಾಕಷ್ಟುಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಮುಂದೆಯು ಕ್ಷೇತ್ರದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
SSLC ಫಲಿತಾಂಶ: ಚಿಕ್ಕಬಳ್ಳಾಪುರ ನಂ.1: ಸಚಿವ ಸುಧಾಕರ್ ಸಂತಸ...
ಕೋಲಾರ ಸಂಸದ ಎಸ್. ಮುನಿಸ್ವಾಮಿ, ಚಿಂತಾಮಣಿ ಶಾಸಕ ಜೆಕೆ ಕೃಷ್ಣಾರೆಡ್ಡಿ, ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಬಿ.ಫೌಝೀಯಾ ತರುನ್ನುಮ್, ಎಸ್ಪಿ ಮಿಥುನ್ ಕುಮಾರ್, ಜಿಪಂ ಮಾಜಿ ಸದಸ್ಯ ಮೌಲಾ, ತಾಪಂ ಸದಸ್ಯೆ ಶಾಂತಮ್ಮ ವರದಪ್ಪ, ಮುಖಂಡರಾದ ತಳಗವಾರ ರಾಜಗೋಪಾಲ್, ತಿನಕಲ್ ಮುನಿರೆಡ್ಡಿ, ಬೊಮ್ಮೇಕಲ್ಲು ದೇವರಾಜ್, ತಹಶೀಲ್ದಾರ್ ಹನುಮಂತರಾಯಪ್ಪ, ತಾಪಂ ಇಒ ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.