ಕಲ್ಯಾಣ ಕರ್ನಾಟಕಕ್ಕೆ ಬಸ್‌ ಖರೀದಿಸಲು 100 ಕೋಟಿ: ಸಚಿವ ಶ್ರೀರಾಮುಲು

Published : Jul 20, 2022, 12:30 AM IST
ಕಲ್ಯಾಣ ಕರ್ನಾಟಕಕ್ಕೆ ಬಸ್‌ ಖರೀದಿಸಲು 100 ಕೋಟಿ: ಸಚಿವ ಶ್ರೀರಾಮುಲು

ಸಾರಾಂಶ

ಬಡ ಮತ್ತು ಮಧ್ಯಮ ವರ್ಗದ ಜನರು ಈ ಬಸ್ಸುಗಳಲ್ಲಿ ತಿರುಗಾಡುತ್ತಾರೆ. ಅವರಿಗೆ ಅನುಕೂಲವಾಗಲು ಹೊಸ ಬಸ್ಸುಗಳನ್ನು ಖರೀದಿಸಲಾಗುತ್ತದೆ. 

ಬೀದರ್‌(ಜು.20): ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಂತ ಹಂತವಾಗಿ ಹೊಸ ಬಸ್ಸುಗಳನ್ನು ಒದಗಿಸಲಾಗುವುದು, ವಿಶೇಷವಾಗಿ ಬೀದರ್‌ ಮತ್ತು ಕಲಬುರಗಿ ಜಿಲ್ಲೆಗಳಿಗೆ ಶೀಘ್ರದಲ್ಲಿಯೇ 100 ಹೊಸ ಬಸ್ಸುಗಳನ್ನು ಒದಗಿಸಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಮಂಗಳವಾರ ಪ್ರತಾಪ ನಗರದ ನೌಬಾದ್‌ನಲ್ಲಿರುವ ಬೀದರ್‌ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಬಸ್ಸುಗಳನ್ನು ಖರೀದಿಸಲು 100ಕೋಟಿ ರು. ಅನುದಾನ ನೀಡಲು ಮುಖ್ಯಮಂತ್ರಿಗಳು ನೀಡಲು ಒಪ್ಪಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರು ಈ ಬಸ್ಸುಗಳಲ್ಲಿ ತಿರುಗಾಡುತ್ತಾರೆ. ಅವರಿಗೆ ಅನುಕೂಲವಾಗಲು ಹೊಸ ಬಸ್ಸುಗಳನ್ನು ಖರೀದಿಸಲಾಗುತ್ತದೆ. ಅಪಘಾತಗಳನ್ನು ಕಡಿಮೆ ಮಾಡಲು ರಸ್ತೆ ಸುರಕ್ಷತೆಗಾಗಿ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಪ್ರತಿ ವರ್ಷ ನೀಡುತ್ತದೆ. ರಸ್ತೆ ಸುರಕ್ಷತೆಗಾಗಿ 295ಕೋಟಿ ರು. ಹಣ ತೆಗೆದಿಡುವ ಕೆಲಸ ಮಾಡಿದ್ದೇವೆ. ಸಾರಿಗೆ ಇಲಾಖೆಯಲ್ಲಿ 30 ಸೇವೆಗಳು ಸಂಪರ್ಕ ರಹಿತ ಅನ್‌ಲೈನ್‌ ಸೇವೆಯಾಗಿ ಒದಗಿಸುವ ಕೆಲಸ ಮಾಡಿದ್ದೇವೆ ಎಂದರು.

ಕರ್ನಾಟಕದ ಜನತೆಗೆ KSRTC ಬಸ್ ದರ ಏರಿಕೆ ಬಿಸಿ, ಎಷ್ಟಾಗಲಿದೆ ಟೆಕೆಟ್?

ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾನಿಧಿ:

ಟ್ಯಾಕ್ಸಿ ಮಾಲೀಕರು, ಚಾಲಕರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಕಾರಣಕ್ಕಾಗಿ ವಿದ್ಯಾನಿಧಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಅವರ ಕುಟುಂಬದವರ ಆರೋಗ್ಯಕ್ಕಾಗಿ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯಅರವಿಂದ ಅರಳಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟುಹಳ್ಳಿಗಳಿಗೆ ಬಸ್ಸುಗಳು ಹೋಗುವುದಿಲ್ಲ. ಇದರಿಂದ ಬಡ ಮಕ್ಕಳು ಶಾಲೆಗೆ ಹೋಗಿ ಬರುವುದಕ್ಕೆ ಕಷ್ಟವಾಗುತ್ತದೆ. 371(ಜೆ) ಅಡಿಯಲ್ಲಿ ನಮ್ಮ ಭಾಗಕ್ಕೆ ಬಸ್ಸು ಮತ್ತು ಬಸ್‌ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು ಹಾಗೂ ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌ ನೀಡುವಂತೆ ಸಚಿವರಿಗೆ ಮನವಿ ಮಾಡಿದರು.

KSRTC ವರ್ಗ ಹೊಂದಿದವರ ಜಾಗಕ್ಕೆ ಸಿಬ್ಬಂದಿಯೇ ಇಲ್ಲ!

ಅಧ್ಯಕ್ಷತೆ ವಹಿಸಿದ್ದ ಬೀದರ್‌ ಶಾಸಕ ರಹೀಮ್‌ ಖಾನ್‌ ಮಾತನಾಡಿ, ಶಾಲಾ ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ಸುಗಳನ್ನು ಓಡಿಸಬೇಕು. ಅವುಗಳು ಸರಿಯಾದ ಸಮಯದಲ್ಲಿ ಸಂಚರಿಸದೆ ಇರುವದರಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಾದ ಟಿಎಚ್‌ಎಂ ಕುಮಾರ, ಬೆಂಗಳೂರು ಅಪರ ಸಾರಿಗೆ ಆಯುಕ್ತರಾದ (ಆಡಳಿತ) ಬಿಪಿ ಉಮಾಶಂಕರ್‌, ಬೆಂಗಳೂರು ಅಪರ ಸಾರಿಗೆ ಆಯುಕ್ತರು, ಪ್ರವರ್ತನ (ದಕ್ಷಿಣ) ಸಿ.ಮಲ್ಲಿಕಾರ್ಜುನ, ಧಾರವಾಡ ಸಾರಿಗೆ ಅಪರ ಆಯುಕ್ತ ಮಾರುತಿ ಸಾಮ್ರಾಣಿ, ಕಲಬುರಗಿ ವಿಭಾಗದ ಜಂಟಿ ಸಾರಿಗೆ ಆಯುಕ್ತ ಬಿ. ನೂರ್‌ಮಹ್ಮದ್‌ ಬಾಷಾ, ಬೀದರ್‌ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾರಾಯಣಸ್ವಾಮಿ ನಾಯ್ಕ್‌ ಟಿಎಲ್‌, ವಾಹನ ಮಾಲೀಕರ ಸಂಘದ ಸದಸ್ಯರು ಪದಾಧಿಕಾರಿಗಳು ಇತರರಿದ್ದರು.
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ