ಮದರಸಾ ಟೆರರಿಸ್ಟ್‌ ತಯಾರು ಮಾಡುವ ಕೇಂದ್ರಗಳಾಗ್ತಿವೆ: ಮುತಾಲಿಕ್

By Suvarna News  |  First Published Jul 19, 2022, 10:39 PM IST

ಮದರಸಾ ಬ್ಯಾನ್ ಮಾಡಬೇಕು, ಮಕ್ಕಳು ಭಾರತ್ ಮಾತಕೀ ಜೈ ಎನ್ನುವ ವಿಡಿಯೋ ಸರ್ಕಾರಕ್ಕೆ ರವಾನಿಸಬೇಕು: ಮುತಾಲಿಕ್‌


ವರದಿ: ವರದರಾಜ್, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ದಾವಣಗೆರೆ
ದಾವಣಗೆರೆ(ಜು.19):
 ಮದರಸಾಗಳಲ್ಲಿ ಶಿಕ್ಷಣವನ್ನು ಬ್ಯಾನ್ ಮಾಡಬೇಕು, ಆ. 15 ರಂದು ಅದೇ ಮದರಸಾಗಳಲ್ಲಿ ಮಕ್ಕಳು ಭಾರತ್ ಮಾತಾಕಿ ಜೈ, ವಂದೇ ಮಾತರಂ ಎಂದು ಕೂಗುವ ವಿಡಿಯೋ ಸರ್ಕಾರಕ್ಕೆ ರವಾನಿಸಬೇಕೆಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.  ಇಂದು(ಮಂಗಳವಾರ) ಮಾತನಾಡಿದ ಅವರು, ಖುರಾನ್ ಏನಾದ್ರು ಬೇಕಾದ್ರೆ ಮನೆಯಲ್ಲಿ ಕಲಿಸಲಿ, ಶಿಕ್ಷಣವನ್ನು ಉರ್ದು ಶಾಲೆಯಲ್ಲಿ ಪಠ್ಯ ಪುಸ್ತಕ ಮೂಲಕ ಓದಲಿ, ಮದರಸಾಗಳು  ಟೆರರಿಸ್ಟ್‌ಗಳನ್ನು ತಯಾರು ಮಾಡುವ ಕೇಂದ್ರಗಳಾಗುತ್ತಿದೆ. ಪಾಕಿಸ್ತಾನದಲ್ಲಿ ಮದರಸಾಗಳನ್ನು ಬ್ಯಾನ್ ಮಾಡಿದ್ದಾರೆ. ಇಸ್ಲಾಂ ದೇಶದಲ್ಲೇ ಬ್ಯಾನ್ ಮಾಡಿದ್ದಾರೆ. ಇಲ್ಲಿ ನೂರಕ್ಕೆ ನೂರರಷ್ಟು ಬ್ಯಾನ್ ಮಾಡಬೇಕು. ಭಾರತದ ಪಠ್ಯ ಪುಸ್ತಕ ಓದಿ ಭಾರತೀಯ ನಾಗರಿಕರಾಗಿ ಅದನ್ನು ಬಿಟ್ಟು ಪಾಕಿಸ್ತಾನಿ ತಾಲಿಬಾನ್‌ಗಳಾಗಬಾರದು. ರಿಜಿಸ್ಟರ್ ಆಗದೇ ಇರುವ ಮದರಸಾಗಳು ಇವೆ. ಇದನ್ನು ನಿಲ್ಲಿಸಲು ಕೇಂದ್ರ ರಾಜ್ಯ ಸರ್ಕಾರ ಚಿಂತನ ಮಾಡಬೇಕು. ನೋಡುತ್ತೇವೆ, ಕ್ರಮ ಕೈಗೊಳ್ಳುತ್ತೇವೆ ಎನ್ನುವುದರ ಬದಲು ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ಸರಿಯಾಗಿ ಜಾರಿ ಬಂದಿಲ್ಲ

Tap to resize

Latest Videos

ಎಲ್ಲಿ ಕಸಾಯಿಖಾನೆಗಳು ಇವೆ, ಎಲ್ಲಿ ಮಾರಾಟ ಆಗುತ್ತೆ ಎಂದು ಇಂಚಿಂಚು ಮಾಹಿತಿ ಪೋಲಿಸ್ ಇಲಾಖೆಗೆ ಗೊತ್ತಿರುತ್ತದೆ. ಪೊಲೀಸರಿಗೆ ಪ್ರೀ ಹ್ಯಾಂಡ್ ನೀಡಿದರೆ ಸಂಪೂರ್ಣ ನಿಲ್ಲುತ್ತದೆ. ಇಲ್ಲವಾದ್ರೆ ಬೂಟಾಟಿಗೆಯಾಗುತ್ತದೆ. ದಾವಣಗೆರೆಯಲ್ಲಿ 300 ಕ್ಕೂ ಹೆಚ್ಚು ಅಕ್ರಮ ಕಸಾಯಿಖಾನೆಗಳಿವೆ. ತಾಖತ್ ಇದ್ದರೆ ತೆರವು ಮಾಡಿ, ಕರ್ನಾಟಕ ಸರ್ಕಾರಕ್ಕೆ  ಸಚಿವ ಪ್ರಭು ಚೌವ್ಹಾಣಗೆ  ಗೋ ಮಾತೆಯ ಮೇಲೆ ಕಳಕಳಿ ಇದ್ದಲ್ಲಿ ಗೋಹತ್ಯೆ ಕಾಯ್ದೆ ಜಾರಿಗೆ ತನ್ನಿ. ಪ್ರತ್ಯೇಕ ಸ್ಕ್ವಾಡ್ ಮಾಡಿ ಆಗ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗುತ್ತೆ ಎಂದರು. 

ಹಿಂದೂಗಳ ಹತ್ಯೆ ನಡೆದ್ರೂ ಬಿಜೆಪಿ ಸರ್ಕಾರಗಳು ಕತ್ತೆ ಕಾಯುತ್ತಿವೆಯಾ?: ಮುತಾಲಿಕ್‌

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ

ಚಾಮರಾಜಪೇಟೆ ಈದ್ಗಾ ಮೈದಾನ ಈಗಾಗಲೇ ಸುಪ್ರೀಂಕೋರ್ಟ್ ಕೂಡ ಬಿಬಿಎಂಪಿಗೆ ಸೇರಿದೆ ಎಂದು ಹೇಳಿದೆ, ಅದ್ರೇ ಶಾಸಕ ಜಮೀರ್ ಈ ಜಾಗ ನಮ್ಮದು ಎಂದು ವಕ್ಫ್ ಬೋರ್ಡ್ ನನ್ನು ಎತ್ತಿಕಟ್ಟಿದ್ದಾರೆ, ಈ ಜಾಗ ನಮ್ಮದು ಎಂದು ಹೇಳಲು ವಕ್ಫ್ ಬೋರ್ಡ್ ಬಳಿ ಒಂದು ದಾಖಲೆ ಇಲ್ಲ‌, ಈ ಜಾಗ ನಮ್ಮದು ಎಂದು ಸರ್ಕಾರದ ಡಿಕ್ಲೇರ್ ಮಾಡಲಿ, ಅಲ್ಲಿ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡ್ತಾರೆ ಹಾಗೇ ಗಣಪತಿ ಹಬ್ಬಕ್ಕೆ ಅವಕಾಶ ನೀಡಲಿ, ಅಲ್ಲಿ ರಾಷ್ಟ್ರ ಧ್ವಜ ಹಾರಿಸಲು ವಿರೋಧ ಮಾಡ್ತಾರೆ. ಹೀಗೆ ಮಾಡಿದರೆ ರಾಷ್ಟ್ರದ್ರೋಹಿಗಳಾಗ್ತಿರಿ. ಈದ್ಗಾ ಮೈದಾನ ಮಾಡಲು ಐದು ಎಕರೆಯನ್ನು ನೀಡಿದ್ದಾರೆ , ಕೂಡಲೇ ಅಲ್ಲಿಗೆ ಶಿಪ್ಟ್ ಮಾಡಿಕೊಳ್ಳಿ. ಅಲ್ಲಿರುವ ಗೋಡೆಯನ್ನು ಅಲ್ಲಿಗೆ ಶಿಪ್ಟ್ ಮಾಡಿಕೊಳ್ಳಿ ಅಂತ ಹೇಳಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಗಳಲ್ಲಿ ಸಂಘ ಸಂಸ್ಥೆಗಳಲ್ಲಿ ದ್ವಜ ಹಾರಿಸುವುದು ಸ್ವಾಗತಾರ್ಹ. ಮದರಸಗಳಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಎನ್ನುವುದು ಯೋಗ್ಯವಾಗಿದೆ. ಅಲ್ಲಿ ರಾಷ್ಟ್ರಧ್ವಜ ಹಾರಿಸಿ, ಆ ಮಕ್ಕಳ ಬಾಯಿಯಲ್ಲಿ ರಾಷ್ಟ್ರ ಗೀತೆ ಹಾಡಿಸಿ ಭಾರತ್ ಮಾತಾಕೀ ಜೈ ಎನ್ನಿಸಬೇಕು ಉತ್ತರ ಪ್ರದೇಶ ಮಾದರಿಯಲ್ಲಿ ವಂದೇ ಮಾತರಂ ಭಾರತ್ ಮಾತ ಕೀ ಜೈ ಎಂದು ಮದರಸಾದಲ್ಲಿ ಕೂಗುವ ವಿಡಿಯೋ ರಾಜ್ಯ ಸರ್ಕಾರಕ್ಕೆ ರವಾನಿಸಬೇಕೆಂದು ಮುತಾಲಿಕ್  ಒತ್ತಾಯಿಸಿದರು.

click me!