ಗ್ರೀನ್ ಝೋನ್ ಆಗುವತ್ತು ಬೆಣ್ಣೆನಗರಿ ದಾವಣಗೆರೆ ದಾಪುಗಾಲ ಇಡಲಾರಂಭಿಸಿದೆ. ಭಾನುವಾರ ಯಾವುದೇ ಹೊಸ ಕೊರೋನಾ ಕೇಸ್ ಪತ್ತೆಯಾಗಿಲ್ಲ, ಇನ್ನು ಆಸ್ಪತ್ರೆಯಿಂದ ಗುಣಮುಖರಾಗಿ 10 ಮಂದಿ ಬಿಡುಗಡೆಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಜೂ.15): ಕೊರೋನಾ ಸೋಂಕಿನಿಂದ ಗುಣಮುಖರಾದ 10 ಜನರು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಆಗುವುದರೊಂದಿಗೆ ಸೋಂಕಿತರ ಸಂಖ್ಯೆ 26ಕ್ಕೆ ಇಳಿಕೆಯಾಗಿದೆ. ಭಾನುವಾರ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.
ನಗರದ ಪಿ-5313, 5306, 5308, 5310, 5312, 5299, 5315, 5311, 5309, ಹಾಗೂ 5300 ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರ ಸಂಖ್ಯೆ ಕಡಿಮೆಯಾಗಿ, ಗುಣಮುಖರಾಗಿ ಬಿಡುಗಡೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ದಾವಣಗೆರೆ ಮತ್ತೆ ಗ್ರೀನ್ ಝೋನ್‌ಗೆ ಮರಳಿ, ಕೊರೋನಾಮುಕ್ತ ಜಿಲ್ಲೆಯಾಗುವ ಗುರಿಯೊಂದಿಗೆ ಮುನ್ನುಗ್ಗುತ್ತಿದೆ.
undefined
ಈವರೆಗೆ 226 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಇದರಲ್ಲಿ 6 ಜನರು ಸಾವನ್ನಪ್ಪಿದ್ದಾರೆ. 194 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯಕ್ಕೆ ಸಕ್ರಿಯ ಕೇಸ್ ಸಂಖ್ಯೆ 26ಕ್ಕೆ ಇಳಿದಿದೆ. ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 16 ಕಂಟೈನ್‌ಮೆಂಟ್ ಝೋನ್ ಘೋಷಿಸಿ, 2 ಪ್ರದೇಶಗಳಲ್ಲಿ ಪ್ರತಿ ದಿನ ಜ್ವರ, ಐಎಲ್‌ಐ, ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಕ್ಕೊಮ್ಮೆ ಬಫರ್ ಝೋನ್‌ನಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.
ನಾಲ್ಕು ರಾಜ್ಯಗಳಿಗೆ ಐಸೋಲೇಷನ್ ರೈಲು ಕೋಚ್ ರವಾನೆ
ಇಲ್ಲಿನ ರೈತರ ಬೀದಿ, ಆನೆಕೊಂಡ, ಎಸ್‌ಜೆಎಂ ನಗರ, ವಿನಾಯಕ ನಗರ, ಜಾಲಿನಗರ, ಶಿವಕುಮಾರಸ್ವಾಮಿ ಬಡಾವಣೆ, ಶೇಖರಪ್ಪ ನಗರ, ತರಳಬಾಳು ಬಡಾವಣೆ, ಬಸವರಾಜ ಪೇಟೆ, ಕೆಟಿಜೆ ನಗರ ಪೊಲೀಸ್ ಕ್ವಾರ್ಟಸ್, ಎಸ್ ಸ್ಕೆ$್ವಯರ್ ಅಪಾರ್ಟ್‌ಮೆಂಟ್, ದೇವರಾಜ ನಗರ, ಭಗತ್‌ಸಿಂಗ್ ನಗರ, ನಾಡಿಗೇರ ಕಣ್ಣಿನ ಆಸ್ಪತ್ರೆ ಬೀದಿ, ಬೂದಾಳ್ ರಸ್ತೆಯ ಜಗಜೀವನ ರಾಂ ನಗರ, ಚೌಡೇಶ್ವರಿ ನಗರ ಕಂಟೈನ್‌ಮೆಂಟ್‌ಗಳಾಗಿವೆ.