ಜೆಡಿಎಸ್‌ನ 10 ಮುಖಂಡರು ಬಿಜೆಪಿಗೆ : ಬಿರುಸಾಯ್ತು ರಾಜಕೀಯ

By Kannadaprabha NewsFirst Published Oct 15, 2020, 11:52 AM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಕೊಂಡ ಬೆನ್ನಲ್ಲೇ ಇದೀಗ ಜೆಡಿಎಸ್‌ಗೆ ಆಘಾಥ ಎದುರಾಗಿದೆ. .. 10 ಜೆಡಿಎಸ್ ಮುಖಂಡರು ಪಕ್ಷ ತೊರೆದು ಬಿಜೆಪಿಗೆ ಹೋಗಿದ್ದಾರೆ.

ಕೆ.ಆರ್‌.ಪೇಟೆ (ಅ.15): ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಪಟ್ಟಣದಲ್ಲಿ ಪುರಸಭಾ ರಾಜಕೀಯ ಗರಿಗೆದರಿದೆ. ಕೆ.ಆರ್‌.ಪೇಟೆ ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟಪಂಗಡಕ್ಕೆ ಮೀಸಲಾಗಿದ್ದರೇ, ಉಪಾಧ್ಯಕ್ಷ ಸ್ಥಾನ ಬಿಸಿಎಂ ಮಹಿಳೆಗೆ ಮೀಸಲಾಗಿದೆ. ಮೂಲ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಬಿಜೆಪಿಗೆ ವಲಸೆ ಬಂದವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದೆ.

ಕೆ.ಆರ್‌.ಪೇಟೆ ಪುರಸಭೆಯಲ್ಲಿ 23 ಜನ ಚುನಾಯಿತ ಸದಸ್ಯರಿದ್ದು, ಕಾಂಗ್ರೆಸ್‌ 10, ಜೆಡಿಎಸ್‌ 11, ಬಿಜೆಪಿ 01 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬದಲಾದ ರಾಜಕೀಯ ವಾತಾವರಣದಲ್ಲಿ ಪಕ್ಷೇತರ ಸದಸ್ಯ ತಿಮ್ಮೇಗೌಡ ಸೇರಿದಂತೆ 10 ಮಂದಿ ಜೆಡಿಎಸ್‌ ಸದಸ್ಯರು ಬಿಜೆಪಿಗೆ ಸಾಮೂಹಿಕ ಪಕ್ಷಾಂತರ ಮಾಡಿದ್ದು, ಸಚಿವ ಕೆ.ಸಿ.ನಾರಾಯಣಗೌಡರೊಂದಿಗೆ ಗುರುತಿಸಿಕೊಂಡಿದ್ದಾರೆ.

ಬೈಎಲೆಕ್ಷನ್ ಟೈಮಲ್ಲಿ HDKಗೆ ಕಂಟಕ, ಕರೆದಾಗ ಬರಲೇಬೇಕು! ..

10 ಮಂದಿ ಬಿಜೆಪಿಗೆ

ಪುರಸಭೆ ಚುನಾವಣೆ ನಡೆದಾಗ ಕೆ.ಸಿ.ನಾರಾಯಣಗೌಡ ಜೆಡಿಎಸ್‌ ಶಾಸಕರಾಗಿದ್ದರು. ಜೆಡಿಎಸ್‌ನ 11 ಸದಸ್ಯರ ಗೆಲುವಿನಲ್ಲಿ ನಾರಾಯಣಗೌಡರ ಪ್ರಮುಖ ಪಾತ್ರವಿದೆ. ಈ ಹಿನ್ನೆಲೆಯಲ್ಲಿ 17ನೇ ವಾರ್ಡ್‌ನ ಕೆ.ಎಸ್‌.ಸಂತೋಷ್‌ ಹೊರತುಪಡಿಸಿ ಉಳಿದೆಲ್ಲಾ ಜೆಡಿಎಸ್‌ ಸದಸ್ಯರು ಸಚಿವ ನಾರಾಯಣಗೌಡ ಅವರನ್ನು ಹಿಂಬಾಲಿಸಿ ಬಿಜೆಪಿ ಸೇರಿದ್ದಾರೆ. ಪ್ರಸ್ತುತ ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟಪಂಗಡಕ್ಕೆ ಮೀಸಲಾಗಿರುವ ಕಾರಣ ಈ ಇಬ್ಬರ ನಡುವೆ ಯಾರು ಅಧ್ಯಕ್ಷರಾಗುತ್ತಾರೆ ಎನ್ನುವುದು ಸಚಿವ ಕೆ.ಸಿ.ನಾರಾಯಣಗೌಡರ ನಿರ್ಧಾರವನ್ನು ಅವಲಂಬಿಸಿದೆ.

click me!