ಮುಂದುವರೆದ ಕೋರೊನಾ ವೈರಸ್ ಅಟ್ಟಹಾಸ| ಸೋಂಕಿತರ ಸಂಖ್ಯೆ 149 ಕ್ಕೆ ಏರಿಕೆ| ಆಸ್ಪತ್ರೆಯಿಂದ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ|
ಕೊಪ್ಪಳ(ಜು.08): ಕೊರೋನಾ ತಗ್ಗುವ ಯಾವುದೇ ಲಕ್ಷಣಗಳು ಕಾಣುತ್ತಲೇ ಇಲ್ಲ. ಆದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಲೇ ಇದ್ದು, ಮಂಗಳವಾರ 10 ಜನರಿಗೆ ಪಾಸಿಟಿವ್ ಬರುವುದರ ಮೂಲಕ ಸೋಂಕಿತರ ಸಂಖ್ಯೆ 149 ಕ್ಕೆ ಏರಿಕೆಯಾಗಿದೆ.
ಗಂಗಾವತಿ ತಾಲೂಕಿನ ನಾಲ್ಕು ಹಾಗೂ ಕೊಪ್ಪಳ ಮತ್ತು ಕುಷ್ಟಗಿ ತಾಲೂಕಿನಲ್ಲಿ ತಲಾ ಮೂರು ಪಾಸಿಟಿವ್ ಪ್ರಕರಣಗಳು ಸೇರಿವೆ. ಇದರಲ್ಲಿ ಓರ್ವ ಸೈನಿಕನಿಗೂ ಕೊರೋನಾ ಪಾಸಿಟಿವ್ ಬಂದಿದೆ.
ಕೊಪ್ಪಳ: ಹಳ್ಳಿಗೂ ಅಂಟಿದ ಹೈದರಾಬಾದ್ ನಂಜು, ಆತಂಕದಲ್ಲಿ ಜನತೆ
ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ:
ಕೊಪ್ಪಳ ಜಿಲ್ಲಾ ಬೋಧಕ ಆಸ್ಪತ್ರೆ ಕಿಮ್ಸ್, ಕೊಪ್ಪಳದಲ್ಲಿ ಕೋವಿಡ್-19 ದೃಢಪಟ್ಟ ಕೆಪಿಎಲ್-83, ಪಿ-12308 ಮತ್ತು ಕೆಪಿಎಲ್-96, ಪಿ-16429 ಇವರಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ ನಂತರ ಅನುಸರಣ ಸ್ವ್ಯಾಬ್ ಋುಣಾತ್ಮಕ ವರದಿ ಬಂದಿದ್ದು, ಕೊರೋನಾ ಸೋಂಕಿನಿಂದ ಗುಣಮುಖವಾದ ಹಿನ್ನೆಲೆಯಲ್ಲಿ ಇವರನ್ನು ನಿಗದಿತ ಕೋವಿಡ್ -19 ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಬಿ. ದಾನರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.