ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ಶಿವನ ಧ್ಯಾನ: ವಿವಿಧ ದೇಶಗಳಿಂದ 1 ಲಕ್ಷ ಭಕ್ತರು

By Kannadaprabha NewsFirst Published Feb 22, 2020, 9:59 AM IST
Highlights

ಆರ್ಟ್‌ ಆಫ್‌ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶಿವರಾತ್ರಿ ಆಚರಣೆ| ವಿವಿಧ 50 ದೇಶಗಳಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಭಕ್ತರ ಆಗಮನ| ಲಕ್ಷಾಂತರ ಜನರಿಂದ ಸಾಮೂಹಿಕವಾಗಿ ಪವಿತ್ರ ಮಂತ್ರೋಚ್ಛಾರಣೆ|  

ಬೆಂಗಳೂರು(ಫೆ.22): ‘ಮಹಾಶಿವರಾತ್ರಿ’ ಹಬ್ಬವನ್ನು ಶುಕ್ರವಾರ ಆರ್ಟ್‌ ಆಫ್‌ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ 50 ದೇಶಗಳಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಜನರು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ನೇತೃತ್ವದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಿದ್ದಾರೆ.

ಹಬ್ಬದ ಅಂಗವಾಗಿ ಲಕ್ಷಾಂತರ ಜನರು ಸಾಮೂಹಿಕವಾಗಿ ಪವಿತ್ರ ಮಂತ್ರೋಚ್ಛಾರಣೆಯೊಡನೆ ಧ್ಯಾನ ಮಾಡಿದರು. ಈ ಉತ್ಸವವು ರುದ್ರಪಠಣ, ಧ್ಯಾನದೊಂದಿಗೆ ಶುಕ್ರವಾರ ಸಂಜೆ ಆರಂಭವಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ಭಕ್ತಿ ಸಂಗೀತ ಹಾಗೂ ವಾದ್ಯ ಸಂಗೀತ ಜರುಗಿತು. ಮಹಾಶಿವರಾತ್ರಿ ಆಚರಣೆ ಕುರಿತು ಮಾತನಾಡಿದ ರವಿಶಂಕರ್‌ ಗುರೂಜಿ, ಮನುಷ್ಯನಿಗೆ ಮೂರು ರೀತಿಯ ಶಾಂತಿ ಅವಶ್ಯಕ. ಒಂದು ಭೌತಿಕ ಶಾಂತಿ ಅಗತ್ಯ. ಹಾಗೇ ವಾತಾವರಣ, ದೇಹದಲ್ಲಿ ಮತ್ತು ಮನಸ್ಸಿನಲ್ಲಿ ಶಾಂತಿ ಹಾಗೂ ಆತ್ಮದಲ್ಲಿ ಶಾಂತಿ ಬೇಕು. ಶಿವರಾತ್ರಿಯಂದು ಪರಮಚೇತನವು ಈ ಎಲ್ಲಾ ಮೂರು ಹಂತಗಳಲ್ಲೂ ಸಾಂತ್ವನವನ್ನು ತರುತ್ತದೆ ಎಂದರು.
 

click me!