ಸಿಮ್‌ ಖರೀದಿಸಿದ್ರೆ 1 ಕೆಜಿ ಈರುಳ್ಳಿ ಉಚಿ​ತ! ಬಂಪರ್ ಆಫರ್

By Kannadaprabha News  |  First Published Dec 27, 2019, 10:33 AM IST

ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ.  ಸಿಮ್ ಖರಿದಿಸಿದ್ರೆ ಒಂದು ಕೆಜಿ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. 


ಶಿವಮೊಗ್ಗ [ಡಿ.27]: ಈರುಳ್ಳಿ ದರ ಏರಿಕೆ ಹಲವು ವಿಡಂಬನೆ, ಟ್ರೋಲ್‌ಗಳಿಗೆ ಕಾರಣವಾಗುತ್ತಿರುವ ನಡುವೆಯೇ ನಗರ ಸಮೀಪದ ಪುರದಾಳು ಗ್ರಾಮದಲ್ಲಿ ಜಿಯೋ ಸಂಸ್ಥೆಯ ಪ್ರತಿನಿಧಿಗಳು ಪ್ರತಿ ಸಿಮ್‌ಗೆ ತಲಾ 1 ಕೆ.ಜಿ. ಈರುಳ್ಳಿ ಆಫರ್‌ ನೀಡಿದ್ದು ವಿಶೇಷವಾಗಿತ್ತು. 

ಗುರುವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಜಿಯೋ ಸಂಸ್ಥೆಯ ಪ್ರತಿನಿಧಿಗಳು ಅಲ್ಲಿ ತಮ್ಮ ಸಂಸ್ಥೆಯ ತಾತ್ಕಾಲಿಕ್‌ ಶೆಡ್‌ ತೆರೆದು ಮಾರಾಟ ಆರಂಭಿಸಿದರು. 300 ರು. ಕರೆನ್ಸಿಯೊಂದಿಗೆ ಸಿಮ್‌ ಖರೀದಿಸಿದರೆ ಒಂದು ಕೆ.ಜಿ. ಈರುಳ್ಳಿ ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು. 

Tap to resize

Latest Videos

ಈ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಮತ್ತು ಅಕ್ಕಪಕ್ಕದ ನೂರಾರು ಮಂದಿ ಬಂದು ಸಿಮ್‌ ಖರೀದಿಸಿದರು.

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...

ನಗರ ಸಮೀಪದ ಪುರದಾಳು ಗ್ರಾಮದಲ್ಲಿ ಜಿಯೋ ಸಂಸ್ಥೆ ತನ್ನ ಮೊಬೈಲ್‌ ಸಿಮ್‌ ಮಾರಾಟಕ್ಕೆ ಈರುಳ್ಳಿಯನ್ನು ಉಚಿತ ಕೊಡುಗೆಯಾಗಿ ನೀಡುತ್ತಿರುವುದು.

click me!