ರಾಜ್ಯದಲ್ಲಿ 1.80 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಲೋಕೇಶ್‌

By Kannadaprabha News  |  First Published Mar 2, 2024, 11:28 AM IST

ಕಳೆದ 20 ವರ್ಷದಿಂದ ಸರ್ಕಾರಿ ಶಾಲೆಗೆ ಆಳುವಂತ ಸರ್ಕಾರ ಉದ್ದೇಶ ಪೂರಕವಾಗಿ ಶಿಕ್ಷಕರನ್ನ ನೇಮಿಸಿಲ್ಲ. ಖಾಲಿ ಇರುವ ರಾಜ್ಯದಲ್ಲಿ 1.80 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದರೂ ಸಹ ನೇಮಕಾತಿ ವಿಷಯದಲ್ಲಿ ಸರ್ಕಾರ ಮೌನವಹಿಸಿದೆ ಎಂದು ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಪಕ್ಷೇತರ ಆಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.


 ಕೊರಟಗೆರೆ :  ಕಳೆದ 20 ವರ್ಷದಿಂದ ಸರ್ಕಾರಿ ಶಾಲೆಗೆ ಆಳುವಂತ ಸರ್ಕಾರ ಉದ್ದೇಶ ಪೂರಕವಾಗಿ ಶಿಕ್ಷಕರನ್ನ ನೇಮಿಸಿಲ್ಲ. ಖಾಲಿ ಇರುವ ರಾಜ್ಯದಲ್ಲಿ 1.80 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದರೂ ಸಹ ನೇಮಕಾತಿ ವಿಷಯದಲ್ಲಿ ಸರ್ಕಾರ ಮೌನವಹಿಸಿದೆ ಎಂದು ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಶಿಕ್ಷಕರ ಪಕ್ಷೇತರ ಆಭ್ಯರ್ಥಿ ಲೋಕೇಶ್ ತಾಳಿಕಟ್ಟೆ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಈಗಿನ ಗಳನ್ನ ಮುಚ್ಚುವಂತ ಹುನ್ನಾರವನ್ನ ಶಿಕ್ಷಣ ಇಲಾಖೆ ಮಾಡುತ್ತಿದ್ದಾರೆ. ಕಳೆದ ೧೫ ವರ್ಷದಲ್ಲಿ ೬೧ ಸಾವಿರ ಶಾಲೆಗಳು ಇದ್ದಿದ್ದು ಈಗ 41 ಸಾವಿರಕ್ಕೆ ಬಂದು ನಿಂತಿದೆ. ಸುಮಾರು ೨೦ ಸಾವಿರ ಶಾಲೆಗಳನ್ನ ಮುಚ್ಚಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚುವುದರಿಂದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದು ತಿಳಿಸಿದರು.

Tap to resize

Latest Videos

undefined

ರಾಜ್ಯದಲ್ಲಿ ಗುಣಾತ್ಮಕ ನೀಡದಿದ್ದರೆ ಆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ. ಕಳೆದ ಬಜೆಟ್‌ಗಿಂತ ಈ ಬಜೆಟ್‌ನಲ್ಲಿ ಶೇ.೧೧ ಮಾತ್ರ ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ. ಮಹಾರಾಷ್ಟ್ರ, ಆಂಧ್ರ, ಕೇರಳಕ್ಕೆ ಹೊಲಿಸಿದರೆ ನಮ್ಮ ರಾಜ್ಯದಲ್ಲಿ ಅತಿ ಕಡಿಮೆ ಹಣವನ್ನ ಶಿಕ್ಷಣಕ್ಕೆ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಮಹತ್ವ ನೀಡದೇ ಮತ್ತೆ ಮಕ್ಕಳನ್ನ ಅನಕ್ಷರಸ್ಥರಾಗಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2020 ರಲ್ಲಿ ಶಿಕ್ಷಕರ ರಕ್ಷಣೆಗಾಗಿ ಈ ಸಂಘವನ್ನ ಕಟ್ಟಲಾಯಿತ್ತು. ಕೋವಿಡ್ ಪ್ಯಾಕೇಜ್ ಕೊಡಿಸಬೇಕು ಎಂದಾಗ ಶಿಕ್ಷಕರಿಂದ ಮತ ಪಡೆದು ಆಯ್ಕೆಯಾದ ೧೪ ಜನ ಎಂಎಲ್ಸಿಗಳು ಶಿಕ್ಷಕರ ಯಾವುದೆ ಸಮಸ್ಯೆಯನ್ನ ಬಗೆಹರಿಸಿಲ್ಲ ಎಂದು ನಮ್ಮ ಗಮನಕ್ಕೆ ಬಂದಾಗ ನಮ್ಮ ಸಂಘ ನಿರಂತರ ಹೋರಾಟಕ್ಕೆ ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಇರುವ ಖಾಸಗಿ ಅನುದಾನರಹಿತ ಶಾಲೆಯ ಶಿಕ್ಷಕರಿಗೆ ಸುಮಾರು ೧೪೮ ಕೋಟಿ ಹಣವನ್ನ ರಾಜ್ಯ ನೀಡಲಾಯಿತ್ತು. ಅದರೆ ೧೧ ಜನ ಎಂಎಲ್ಸಿ ಯವರು ರೆಜಲ್ಯೋಷನ್ ಮಾಡಿ ಆ ಶಿಕ್ಷಕರಿಗೆ ಕೊಡುವುದಕ್ಕೆ ಬರುವುದಿಲ್ಲ ಎಂದು ಸರ್ಕಾರದ ಮೇಲೆ ಒತ್ತಡ ಹಾಕಿ ಕ್ಯಾನ್ಸಲ್ ಮಾಡಿದ್ದು ನಮ್ಮ ಕೆರಳಿಸಿತ್ತು ಎಂದು ತಿಳಿಸಿದರು.

ಕೊರಟಗೆರೆ ತಾಲೂಕಿನಲ್ಲಿ ಸುಮಾರು ೨೦ಕ್ಕೂ ಹೆಚ್ಚು ಶಾಲೆಯ ಶಿಕ್ಷಕರನ್ನ ಭೇಟಿ ನೀಡಿ ಮತಯಾಚನೆ ಮಾಡಿದ್ದೇವೆ. ಶಿಕ್ಷಕರು ಉತ್ತಮವಾದ ಸ್ಪಂದನೆ ನೀಡುತ್ತಿದ್ದಾರೆ. ಶಿಕ್ಷಕರ ಸಮಸ್ಯೆ ಬಗ್ಗೆ ಯಾರು ಕೂಡ ದ್ವನಿ ಎತ್ತುತ್ತಿಲ್ಲ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ, ಶಾಲೆಯ ಶಿಕ್ಷಕರ ಸಮಸ್ಯೆಗಳನ್ನ ಸಂಪೂರ್ಣ ಬಗೆಹರಿಸುವ ಉದ್ದೇಶದಿಂದ ಬಂದಿದ್ದೇನೆ ಬಂದು ಭಾರಿ ನನಗೆ ಅವಕಾಶ ನೀಡಿದರೆ ಅವರ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು. ಇದೆ ಸಂದರ್ಭದಲ್ಲಿ ಪ್ರದೀಪ್ ಕುಮಾರ್‌, ಪ್ರೊ. ನಾಗಣ್ಣ ಇದ್ದರು.

click me!