ಉಪ ಚುನಾವಣೆ : ಸ್ಥಾನ ಉಳಿವಿಗೆ ಶಾಸಕರ ಕಸರತ್ತು

Published : Oct 07, 2022, 05:53 AM IST
 ಉಪ ಚುನಾವಣೆ :  ಸ್ಥಾನ ಉಳಿವಿಗೆ ಶಾಸಕರ ಕಸರತ್ತು

ಸಾರಾಂಶ

 9ಮಂದಿ ಸದಸ್ಯರ ಪೈಕಿ 7ಮಂದಿ ವ್ಹೀಪ್‌ ಉಲ್ಲಂಘಿಸಿ ಸದಸ್ಯತ್ವ ಅನರ್ಹಗೊಂಡಿದ್ದ ಹಿನ್ನೆಲೆ ಆ 7ಸ್ಥಾನಗಳಿಗೂ ಚುನಾವಣೆ ನಡೆಸಲು ಹಾಗೂ ಪುನಃ 7ಮಂದಿ ಸ್ಪರ್ಧೆಗೂ ನ್ಯಾಯಾಲಯ ತೀರ್ಪು ಪ್ರಕಟಿರುವ ಹಿನ್ನೆಲೆ ಜಿಲ್ಲಾಡಳಿತ ಅ.28ರಂದು ಚುನಾವಣೆ ದಿನಾಂಕ ಪ್ರಕಟಿಸಿದೆ.

ಕೊಳ್ಳೇಗಾಲ ಅ.07):  ನಗರಸಭೆಯಿಂದ ಬಿಎಸ್ಪಿಯಿಂದ ಆಯ್ಕೆಯಾಗಿದ್ದ 9ಮಂದಿ ಸದಸ್ಯರ ಪೈಕಿ 7ಮಂದಿ ವ್ಹೀಪ್‌ ಉಲ್ಲಂಘಿಸಿ ಸದಸ್ಯತ್ವ ಅನರ್ಹಗೊಂಡಿದ್ದ ಹಿನ್ನೆಲೆ ಆ 7ಸ್ಥಾನಗಳಿಗೂ ಚುನಾವಣೆ ನಡೆಸಲು ಹಾಗೂ ಪುನಃ 7ಮಂದಿ ಸ್ಪರ್ಧೆಗೂ ನ್ಯಾಯಾಲಯ ತೀರ್ಪು ಪ್ರಕಟಿರುವ ಹಿನ್ನೆಲೆ ಜಿಲ್ಲಾಡಳಿತ ಅ.28ರಂದು ಚುನಾವಣೆ ದಿನಾಂಕ ಪ್ರಕಟಿಸಿದೆ.

ಕೊಳ್ಳೇಗಾಲ ನಗರಸಭೆಯ (city council ) 2,6,7,13,21,25, ಹಾಗೂ 26ನೇ ವಾರ್ಡ್‌ಗಳಲ್ಲಿ ಚುನಾವಣೆ (Election) ನಿಗಧಿಯಾಗಿದೆ. ಈ ವಾರ್ಡ್‌ಗಳಿಂದ ನಾಗಮಣಿ, ಗಂಗಮ್ಮ ವರದರಾಜು, ಪವಿತ್ರ, ನಾಗಸುಂದ್ರಮ್ಮ, ರಾಮಕೃಷ್ಣ, ನಾಸೀರ್‌ ಷರೀಫ್‌, ಶಂಕನಪುರ ಪ್ರಕಾಶ್‌ ಆಯ್ಕೆಯಾಗಿದ್ದರು. ಬಿಎಸ್ಪಿಯಿಂದ (BSP) ಜಯರಾಜು, ಜಯಮೇರಿ ಸೇರಿ 9ಮಂದಿ ಆಯ್ಕೆಯಾಗಿದ್ದರು, 9ಮಂದಿ ಸಹಾ ಶಾಸಕ ಮಹೇಶ್‌ ಅವರ ಬಣದಲ್ಲಿದ್ದರು, ಬದಲಾದ ರಾಜಕೀಯ ಸನ್ನಿವೇಶದಿಂದ 9ಮಂದಿ ಪೈಕಿ ಜಯರಾಜು, ಜಯಮೇರಿ ಮೂಲ ಬಿಎಸ್ಪಿಯಲ್ಲಿ ಉಳಿದರೆ, ಉಳಿದ 7ಮಂದಿ ಶಾಸಕರ ಜೊತೆ ಗುರುತಿಸಿಕೊಂಡರು, ನಗರಸಭೆ ಚುನಾವಣೆಯಲ್ಲಿ 2020ರ 29ರಲ್ಲಿ ನಡೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ವ್ಹೀಪ್‌ ಉಲ್ಲಂಘಿಸಿದ್ದರು ಎಂದು ಜಯಮೇರಿ ನೀಡಿದ ದೂರಿನ ಹಿನ್ನೆಲೆ ಅಂದಿನ ಜಿಲ್ಲಾಧಿಕಾರಿ ಡಾ. ಎಂ. ಆರ್‌. ರವಿ ಸದಸ್ಯತ್ವ ಅನರ್ಹಗೊಳಿಸಿದ್ದರು.

ಈ ಬೆಳವಣಿಗೆ ಪ್ರಶ್ನಿಸಿ 7ಮಂದಿ ಹೈಕೋರ್ಚ್‌ ಮೆಟ್ಟಿಲೇರಿದ್ದರು, ಬಳಿಕ ನಡೆದ ವಿಚಾರಣೆಯಲ್ಲಿ 7ಮಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿ ಪುನಃ 2ವರ್ಷದ ಬಳಿಕ ಉಪಚುನಾವಣೆ ನಡೆಸಲು ಸೂಚಿಸಿದೆ ಎನ್ನಲಾಗಿದೆ.

ಈ ಹಿನ್ನೆಲೆ ಜಿಲ್ಲಾಧಿಕಾರಿಗಳು 10ರಂದು ಅಧಿಸೂಚನೆ ಹೊರಡಿಸಿ ಅಂತಿಮ ನಿರ್ಣಯ ಪ್ರಕಟಿಸಿದ್ದಾರೆ. ಈಗಾಗಲೇ 7ಮಂದಿ ಸ್ಪರ್ಧಿಸಲು ಅವಕಾಶವಿದೆ ಎಂಬ ಕಾರಣಕ್ಕಾಗಿ ಅನರ್ಹಗೊಂಡು ಈಗ ಸ್ಪರ್ಧೆಗೂ ಅವಕಾಶ ಪಡೆದುಕೊಂಡಿರುವ 7ಮಂದಿಯ ಮೊಗದಲ್ಲಿ ನಗು ಮೂಡಿದ್ದು, ಪ್ರಸ್ತುತ ಶಾಸಕರ ಪಾಳೇಯದಲ್ಲಿ ಬಿಜೆಪಿ ಟಿಕೆಟ್‌ ಗಿಟ್ಟಿಸಲು 7ಮಂದಿ ಕಸರತ್ತು ಪ್ರಾರಂಭಿಸಿದ್ದಾರೆ.

ಶಾಸಕ ಮಹೇಶ್‌ ಸಹ ತಮ್ಮ ಬಣದಲ್ಲಿ ಗುರುತಿಸಿಕೊಂಡು ಬಿಜೆಪಿ ಸೇರಿದ್ದಕ್ಕೆ ಸದಸ್ಯತ್ವ ಕಳೆದುಕೊಂಡಿದ್ದ ಇವರ ಮೇಲೆ ಅನುಕಂಪ ಹೊಂದಿದ್ದು, 7ಮಂದಿಗೂ ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ 7ವಾರ್ಡ್‌ಗಳಲ್ಲಿಯೂ ಈ ಬಾರಿ ಭಾರೀ ಪೈಪೋಟಿ ಇದ್ದು ತ್ರಿಕೋನ ಸ್ಪರ್ಧೆ ನಡೆಯುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ. ಆದರೆ, ಶಾಸಕ ಮಹೇಶ್‌ ಈಗಾಗಲೇ 7ಮಂದಿಗೂ ಟಿಕೆಟ್‌ ನೀಡಬೇಕು, ಬಿಜೆಪಿಗೆ ಸಹಕಾರ ನೀಡಿ ಅವರು ಅತಂತ್ರರಾಗಿದ್ದರು. ಹಾಗಾಗಿ, ಅವರಿಗೆ ಪಕ್ಷ ಬಿಫಾರ್ಮ ನೀಡಬೇಕು ಎಂದು ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಮಾಜಿ ಶಾಸಕರ ನಡೆ ಏನು: ಮಾಜಿ ಶಾಸಕ ನಂಜುಂಡಸ್ವಾಮಿ ಅವರ ನಡೆ ಏನು ಎಂಬುದು ನಿಗೂಢವಾಗಿದ್ದು, ಕಳೆದ ಬಾರಿ ಲಿಂಗಣಾಪುರ ವಾರ್ಡ್‌ನಲ್ಲಿ ತಮ್ಮ ಪುತ್ರನನ್ನು ನಿಲ್ಲಿಸಿದ್ದರು. ಅಂದಿನ ಚುನಾವಣೆಯಲ್ಲಿ ಲೋಕೇಶ್‌ ಕೇವಲ 8ಮತದಿಂದ ಪರಾಭವಹೊಂದಿದ್ದರು. ಟಿಕೆಟ್‌ ಅಂತಿಮ ವಿಚಾರದಲ್ಲಿ ಬೆಂಬಲಿಗರಿಗೂ ಟಿಕೆಟ್‌ಬೇಕೆಂದು ಪಟ್ಟು ಹಿಡಿಯುತ್ತಾರಾ ಇಲ್ಲ ಪಕ್ಷ ಬೆಂಬಲಿಸಿ ಸದಸ್ಯತ್ವ ಕಳೆದುಕೊಂಡ 7ಮಂದಿ ಬೆಂಬಲಕ್ಕೆ ನಿಲ್ಲುತ್ತಾರ? ಕಾದು ನೋಡಬೇಕಿದೆ. ———

  ಲಿಂಗಣಾಪುರ ವಾರ್ಡ್‌ನಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ನನ್ನ ಮಗ 8ಮತದಿಂದ ಪರಾಭವಹೊಂದಿದ್ದ, ಆದರೆ, ಈ ಬಾರಿ ಉಪಚುನಾವಣೆಯಲ್ಲಿ ಲೋಕೇಶ್‌ ಸ್ಪರ್ಧಿಸಲ್ಲ, 10ರ ಅಧಿಸೂಚನೆ ಬಳಿಕ ಎಲ್ಲರೂ ಕುಳಿತು ತೀರ್ಮಾನಿಸುತ್ತೆವೆ. 7ಮಂದಿ ಸ್ಪರ್ಧಿಸುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ, ಸೋಮವಾರದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

 7ಮಂದಿಯ ಬೆಂಬಲಕ್ಕೆ ಪಕ್ಷ ನಿಲ್ಲಲೇಬೇಕು. ಅವರೆಲ್ಲ ಪಕ್ಷಕ್ಕಾಗಿ ತಮ್ಮ ಸ್ಥಾನ ಕಳೆದುಕೊಂಡವರು. ಹಾಗಾಗಿ, ಅವರ ಬೆಂಬಲ ನೀಡಬೇಕು ಎಂದು ಪಕ್ಷದ ವರಿಷ್ಠರಾದ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದೇನೆæ. ನಾಳೆ ರಾಜ್ಯಾಧ್ಯಕ್ಷರ ಜೊತೆಯೂ ಚರ್ಚಿಸುವೆ. 7ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ.

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!