
ಮೊಳಕಾಲ್ಮೂರು(ಮೇ.04): ಬಾದಾಮಿಯಲ್ಲಿ ಇದೇ ತಿಂಗಳು ಸಿದ್ದರಾಮಯ್ಯ ಪರ ನಟ ಸುದೀಪ್ ಪ್ರಚಾರ ನಡೆಸಲು ಸಮ್ಮತಿ ಸೂಚಿಸಿದ್ದಾರೆ. ಇದಕ್ಕೆ ಪ್ರತಿಕೌಂಟರ್ ಕೊಡುವಂತೆ ಶ್ರೀರಾಮುಲು ಪರ ಮೊಳಕಾಲ್ಮೂರು ಕ್ಷೇತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರೋಡ್ ಶೋ ನಡೆಸಿದ್ದಾರೆ.
ಪ್ರಚಾರದಲ್ಲಿ ಜನಾರ್ದನ್ ರೆಡ್ಡಿ ಕೂಡ ಪಾಲ್ಗೊಂಡಿದ್ದರು. ಕರ್ನಾಟಕ ವಿಧಾನ ಸಭಾ ಚುನಾವಣೆ ಸ್ಟಾರ್ ಪ್ರಚಾರಕರ ಕಣವಾಗಿ ರಂಗೇರಿದೆ. ಹಲವು ನಟರು ಮೂರು ಪಕ್ಷದ ಪರ ಈಗಾಗಲೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇಂದು ಚಾಮರಾಜನಗರದಲ್ಲಿ ಮಾತಾಡಿದ್ದ ಶ್ರೀರಾಮುಲು, ಸುದೀಪ್ ನಮ್ಮ ಸಮುದಾಯದವರಾಗಿದ್ದು ನನ್ನ ಪರ ಪ್ರಚಾರ ಮಾಡಬೇಕೆಂದು ಮನವಿ ಮಾಡಿದ್ದರು.