ಡಿಸಿಎಂ ಹುದ್ದೆಗಾಗಿ ‘ಕೈ’ ಕಚ್ಚಾಟ

First Published May 22, 2018, 9:38 AM IST
Highlights

ಡಿಸಿಎಂ ಹುದ್ದೆಗಾಗಿ ‘ಕೈ’ನಲ್ಲೇ ಕಚ್ಚಾಟ ಆರಂಭವಾಗಿದೆ ಎನ್ನಲಾಗಿದೆ.  ಕಾಂಗ್ರೆಸ್ ಗೆ ಸಿಗುವ ಒಂದು ಉಪ ಮುಖ್ಯಮಂತ್ರಿ ಹುದ್ದೆಗೆ ಇಬ್ಬರು ನಾಯಕರ  ನಡುವೆ ಜಿದ್ದಾ ಜಿದ್ದಿ ನಡೆದಿದ್ದು,  ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಹಣಾಹಣಿ ನಡೆದಿದೆ.

ಬೆಂಗಳೂರು :  ಡಿಸಿಎಂ ಹುದ್ದೆಗಾಗಿ ‘ಕೈ’ನಲ್ಲೇ ಕಚ್ಚಾಟ ಆರಂಭವಾಗಿದೆ ಎನ್ನಲಾಗಿದೆ.  ಕಾಂಗ್ರೆಸ್ ಗೆ ಸಿಗುವ ಒಂದು ಉಪ ಮುಖ್ಯಮಂತ್ರಿ ಹುದ್ದೆಗೆ ಇಬ್ಬರು ನಾಯಕರ  ನಡುವೆ ಜಿದ್ದಾ ಜಿದ್ದಿ ನಡೆದಿದ್ದು,  ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಹಣಾಹಣಿ ನಡೆದಿದೆ. ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್ ಗೆ ಡಿಸಿಎಂ ಪಟ್ಟ ಎಂದು ಮೇಲ್ನೋಟಕ್ಕೆ ಫೈನಲ್ ಆಗಿದೆ. ಆದರೆ  ರಾಜ್ಯ ಕಾಂಗ್ರೆಸ್ ಮಾಸ್ಟರ್ ಮ್ಯಾನೇಜರ್ ಡಿಕೆಶಿ ಸಹ ಪ್ರಬಲ ಪೈಪೋಟಿ ನೀಡಿದ್ದಾರೆ.  

ಡಿಸಿಎಂ ರೇಸ್ ನಲ್ಲಿ ಕೈ ಪಾಳಯದ ಟ್ರಬಲ್ ಶೂಟರ್ ಖ್ಯಾತಿಯ ಡಿ.ಕೆ. ಶಿವಕುಮಾರ್ ಇದ್ದು  ಕಾಂಗ್ರೆಸ್ ಶಾಸಕರನ್ನು ಒಗ್ಗಟ್ಟಾಗಿರಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ ಖ್ಯಾತಿ ಅವರಿಗಿದೆ.  ಕಾಂಗ್ರೆಸ್ ಮೇಲಿನ ನಿಷ್ಠೆ, ರಾಜಕೀಯ ನಿಪುಣತೆಗೆ ಬೆಲೆ ಕೊಡಿ ಎಂದು ಪಟ್ಟು ಹಿಡಿದಿದ್ದು, ಡಿಸಿಎಂ ಕೊಡಿ ಎಂದು ಕಾಂಗ್ರೆಸ್ ವರಿಷ್ಠರಿಗೆ ಡಿಕೆಶಿ ಸಂದೇಶ ರವಾನೆ ಮಾಡಿದ್ದಾರೆ ಎನ್ನುವ ವಿಚಾರ  ಸುವರ್ಣ ನ್ಯೂಸ್ ಗೆ ಕಾಂಗ್ರೆಸ್ ಹೈಕಮಾಂಡ್ ಮೂಲಗಳಿಂದ ಖಚಿತವಾಗಿದೆ. 

ಆದರೆ ಇನ್ನೊಂದೆಡೆ  ಬಿ.ಎಂ.ಫಾರೂಕ್ ಗೆ ಬಿಗ್ ಸೀಟ್ ಸಿಗುತ್ತಾ ಎನ್ನುವ ಪ್ರಶ್ನೆ ಮೂಡಿದೆ.  ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಗೆ ಸಂಪುಟದಲ್ಲಿ ಸಚಿವ ಸ್ಥಾನ ಪಕ್ಕಾ ಆಗಿದ್ದು, ಅವರಿಗೆ  ಡಿಸಿಎಂ ಪಟ್ಟ ನೀಡಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.   ಮುಸ್ಲಿಂ ಸಮುದಾಯದ ಕೋಟಾದಲ್ಲಿ ಫಾರೂಕ್ ಗೆ ಡಿಸಿಎಂ  ಸ್ಥಾನ ನೀಡುವ ಸಾಧ್ಯತೆ ಇದೆ.   ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಪರಮಾಪ್ತ ಫಾರೂಕ್ ಗೆ ಬೃಹತ್ ಕೈಗಾರಿಕೆ ಖಾತೆ ಜತೆ ಅಲ್ಪಸಂಖ್ಯಾತ ಹಾಗೂ ವಕ್ಫ್ ಖಾತೆ ನೀಡುವ ಸಾಧ್ಯತೆ  ಇದೆ. ಇನ್ನೊಂದೆಡೆ  ಸಮ್ಮಿಶ್ರ ಸರ್ಕಾರದಲ್ಲಿ 2 ಡಿಸಿಎಂ ಹುದ್ದೆ ಸೃಷ್ಟಿಸಲಾಗುತ್ತದೆ ಎನ್ನಲಾಗುತ್ತಿದೆ.  

click me!