ಬಹುಮತ ಸಾಬೀತು ಪಡಿಸಲು ಬಿಎಸ್‌ವೈ ಸೋತರೆ, ಮುಂದೇನು?

First Published May 19, 2018, 2:28 PM IST
Highlights

ಸಂಜೆ ನಡೆಯಲಿರುವ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯಲ್ಲಿ ಬಿಎಸ್‌ವೈ ಬಹುಮತ ಸಾಬೀತು ಪಡಿಸಲು ವಿಫಲರಾದರೆ ಮುಂದೇನು? 

ಬೆಂಗಳೂರು [ಮೇ.19]: ಸಂಜೆ ನಡೆಯಲಿರುವ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯಲ್ಲಿ ಬಿಎಸ್‌ವೈ ಬಹುಮತ ಸಾಬೀತು ಪಡಿಸಲು ವಿಫಲರಾದರೆ ಮುಂದೇನು? ಎಂಬ ಜಿಜ್ಞಾಸೆ ಎಲ್ಲರನ್ನು ಕಾಡುತ್ತಿದೆ. 

ಒಂದು ವೇಳೆ ವಿಶ್ವಾಸ ಮತ ಯಾಚನೆ ಪ್ರಕ್ರಿಯೆಯಲ್ಲಿ ಬಿಎಸ್‌ವೈ ಬಹುಮತ ಸಾಬೀತು ಪಡಿಸಲು ವಿಫಲರಾದರೆ, ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತಾರೆ. ಅದನ್ನು ರಾಜ್ಯಪಾಲರು ಸ್ವೀಕರಿಸಲೇಬೇಕು. 

ತಕ್ಷಣ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವು ರಾಜ್ಯಪಾಲರಿಗೆ ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತಾರೆ. ರಾಜ್ಯಪಾಲರು ಅವರಿಗೆ ‘ಇಲ್ಲ’ ವೆನ್ನುವ ಹಾಗಿಲ್ಲ. ರಾಜ್ಯಪಾಲರ ನಿರ್ದೇಶನದ ಮೇರೆಗೆ ಮೈತ್ರಿಕೂಟದ ಸಿಎಂ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅದಾದ ಬಳಿಕ  ನಿರ್ಧರಿತ ಸಮಯದೊಳಗೆ ನೂತನ ಸಿಎಂ ಸದನದಲ್ಲಿ ವಿಶ್ವಾಸ ಮತ ಯಾಚಿಸಿ, ಬಹುಮತ ಸಾಬೀತುಪಡಿಸಬೇಕು.

ಒಂದು ವೇಳೆ ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ ಬಿಜೆಪಿಯು ಕೆಲವು ಶಾಸಕರನ್ನು ತಮ್ಮ ಬಳಿ ಸೆಳೆದುಕೊಂಡು  ಅಡ್ಡ ಮತದಾನ ಮಾಡಿಸಿದರೆ ಮುಂದೇನು? ಆಗ ಆ ಸರ್ಕಾರವೂ ಕೂಡಾ ಬಿದ್ದು ಹೋಗುತ್ತದೆ. 

 ಅಂತಹ ಪರಿಸ್ಥಿತಿಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬಹುದು. 

click me!