ಸುಲಭವಿಲ್ಲ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಮುಂದಿನ ಹಾದಿ

Published : May 20, 2018, 11:07 AM IST
ಸುಲಭವಿಲ್ಲ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಮುಂದಿನ ಹಾದಿ

ಸಾರಾಂಶ

ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಚ್.ಡಿ.ಕುಮಾರಸ್ವಾಮಿ ಅವರ ಹಾದಿ ಸುಗಮವಾಗಿಯೇನೂ ಇಲ್ಲ. ಅವರ ಮುಂದೆ ಹಲವಾರು ಸವಾಲುಗಳಿವೆ. 1 ಚುನಾವಣಾ ಪ್ರಣಾಳಿಕೆಯಲ್ಲಿ ಹತ್ತು ಹಲವು ಭರವಸೆಗಳನ್ನು ನೀಡಿರುವ ಅವರು ಈಗ ಅವುಗಳನ್ನು ಕಾಂಗ್ರೆಸ್ ಜತೆ ಸೇರಿ ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುದು ಕುತೂಹಲಕರವಾಗಿದೆ.

ಬೆಂಗಳೂರು (20) : ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಚ್.ಡಿ.ಕುಮಾರಸ್ವಾಮಿ ಅವರ ಹಾದಿ ಸುಗಮವಾಗಿಯೇನೂ ಇಲ್ಲ. ಅವರ ಮುಂದೆ ಹಲವಾರು ಸವಾಲುಗಳಿವೆ.

1 ಚುನಾವಣಾ ಪ್ರಣಾಳಿಕೆಯಲ್ಲಿ ಹತ್ತು ಹಲವು ಭರವಸೆಗಳನ್ನು ನೀಡಿರುವ ಅವರು ಈಗ ಅವುಗಳನ್ನು ಕಾಂಗ್ರೆಸ್ ಜತೆ ಸೇರಿ ಹೇಗೆ ಅನುಷ್ಠಾನಗೊಳಿಸುತ್ತಾರೆ ಎಂಬುದು ಕುತೂಹಲಕರವಾಗಿದೆ.

2 ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿರುವ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಎಷ್ಟರಮಟ್ಟಿಗೆ ಬೆಂಬಲ ನೀಡುತ್ತದೆ ಎಂಬುದು ಸ್ಪಷ್ಟವಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಕೇಂದ್ರ ಸರ್ಕಾರವೇ ಮನ್ನಾ ಮಾಡಲಿ ಎಂದು ಕಾಂಗ್ರೆಸ್ ಬಲವಾಗಿ ಆಗ್ರಹಿಸಿಕೊಂಡು ಬಂದಿತ್ತು. 

3  ಮುಂಬರುವ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆ, ಜಯನಗರ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆ, ಮುಂಬರುವ ಲೋಕಸಭೆಯ ಮೂರು ಕ್ಷೇತ್ರಗಳ ಉಪಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬುದು ಗೊಂದಲವಾಗಿ ಪರಿಣಮಿಸಬಹುದು.

4 ರಾಜಕೀಯವಾಗಿ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸದಂತೆ ತಮ್ಮ ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳುವುದು ಪ್ರತಿ ಹೆಜ್ಜೆಯಲ್ಲೂ  ಕ್ಲಿಷ್ಟ ಕರವಾಗಬಹುದು. 

5 ಕೇವಲ ಸಚಿವ ಸಂಪುಟ ರಚನೆಯಷ್ಟೇ ಅಲ್ಲದೆ, ನಿಗಮ ಮಂಡಳಿಗಳ ನೇಮಕದಲ್ಲೂ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಿನ್ನಡೆ ಆಗದಂತೆ ಎಚ್ಚರಿಕೆ ವಹಿಸಬೇಕಾಗಿ ಬರಬಹುದು.

6 ಕಾಂಗ್ರೆಸ್ ಜತೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಿದ ಬಳಿಕವೂ ಬಿಜೆಪಿಯಿಂದ ತಮ್ಮ ಪಕ್ಷದ ಶಾಸಕರನ್ನು ರಕ್ಷಿಸಿಕೊಳ್ಳಲೇಬೇಕಾಗುತ್ತದೆ. ಯಾರನ್ನೂ ಕಡೆಗಣಿಸದೆ ಕ್ರಮ ಕೈಗೊಳ್ಳಬೇಕಾಗಬಹುದು.

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ