ಅಭ್ಯರ್ಥಿ ಚಿಹ್ನೆ ಮುಂದೆ ಮಸಿ; ಮತದಾನ ಸ್ಥಗಿತ

Published : May 12, 2018, 10:35 AM ISTUpdated : May 12, 2018, 10:49 AM IST
ಅಭ್ಯರ್ಥಿ ಚಿಹ್ನೆ ಮುಂದೆ ಮಸಿ;  ಮತದಾನ ಸ್ಥಗಿತ

ಸಾರಾಂಶ

ಯಮಕನಮರಡಿ ಕ್ಷೇತ್ರದ ಭರಮ್ಯಾನಟ್ಟಿ ಗ್ರಾಮದ ಬೂತ್ ನಂ 218 ರಲ್ಲಿ ತಾತ್ಕಾಲಿಕವಾಗಿ ಮತದಾನ ಸ್ಥಗಿತಗೊಂಡಿದೆ.  ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ತಕರಾರು ಹಿನ್ನೆಲೆ ಮತದಾನ ಸ್ಥಗಿತಗೊಳಿಸಲಾಗಿದೆ.  

ಬೆಳಗಾವಿ (ಮೇ. 12): ಯಮಕನಮರಡಿ ಕ್ಷೇತ್ರದ ಭರಮ್ಯಾನಟ್ಟಿ ಗ್ರಾಮದ ಬೂತ್ ನಂ 218 ರಲ್ಲಿ ತಾತ್ಕಾಲಿಕವಾಗಿ ಮತದಾನ ಸ್ಥಗಿತಗೊಂಡಿದೆ. 

ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ತಕರಾರು ಹಿನ್ನೆಲೆ ಮತದಾನ ಸ್ಥಗಿತಗೊಳಿಸಲಾಗಿದೆ. ಮತಯಂತ್ರದ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಚಿನ್ಹೆ ಮುಂದೆ ಅಕ್ಕ ಪಕ್ಕ ಮಸಿ ಬಳಿದಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದರೆ. ಕಪ್ಪು ಮಸಿ ಬಳಿದಿರುವ ಕಡೆ ಬಟನ್ ಒತ್ತುವಂತೆ ಹೇಳುತ್ತಿರುವ ಸತೀಶ್ ಜಾರಕಿಹೊಳಿ ಬೆಂಬಲಿಗರು ಮತದಾರರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ತಕರಾರು ತೆಗೆದಿರುವುದರಿಂದ ಎರಡೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.  ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ಪಟ್ಟು ಹಿಡಿದಿದೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ