ಬೆಳಿಗ್ಗೆಯಿಂದ ಮತದಾನ ಮಾಡದೇ ಗ್ರಾಮಸ್ಥರಿಂದ ಬಹಿಷ್ಕಾರ

Published : May 12, 2018, 02:28 PM IST
ಬೆಳಿಗ್ಗೆಯಿಂದ ಮತದಾನ ಮಾಡದೇ ಗ್ರಾಮಸ್ಥರಿಂದ ಬಹಿಷ್ಕಾರ

ಸಾರಾಂಶ

ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಡದರಗಡ್ಡೆ ಗ್ರಾಮದ ಗ್ರಾಮಸ್ಥರು ಬೆಳಿಗ್ಗೆಯಿಂದ ಮತದಾನ ಮಾಡದೇ ಬಹಿಷ್ಕಾರ ಹಾಕಿದ್ದಾರೆ.  ಕಡದರಗಡ್ಡೆ- ಗೋನವಾಟ್ಲಾ ಮಧ್ಯದ ಸೇತುವೆ ನಿರ್ಮಾಣ ಆಗುವವರೆಗೂ ಮತದಾನ ಮಾಡುವುದಿಲ್ಲ ಎಂದು ಬಹಿಷ್ಕರಿಸಿದ್ದಾರೆ.   

ರಾಯಚೂರು (ಮೇ. 12): ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಕಡದರಗಡ್ಡೆ ಗ್ರಾಮದ ಗ್ರಾಮಸ್ಥರು ಬೆಳಿಗ್ಗೆಯಿಂದ ಮತದಾನ ಮಾಡದೇ ಬಹಿಷ್ಕಾರ ಹಾಕಿದ್ದಾರೆ.  ಕಡದರಗಡ್ಡೆ- ಗೋನವಾಟ್ಲಾ ಮಧ್ಯದ ಸೇತುವೆ ನಿರ್ಮಾಣ ಆಗುವವರೆಗೂ ಮತದಾನ ಮಾಡುವುದಿಲ್ಲ ಎಂದು ಬಹಿಷ್ಕರಿಸಿದ್ದಾರೆ.   

ಗ್ರಾಮಸ್ಥರ ಮನ ವೋಲಿಸಲು ತಹಶೀಲ್ದಾರ್, ಪೊಲೀಸರು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ.  ತಹಶೀಲ್ದಾರ್ ಎಮ್ ಎಸ್ ಬಾಗವಾನ್ ವಿರುದ್ದ ಗ್ರಾಮಸ್ಥರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಗ್ರಾಮದಿಂದ ತಹಶೀಲ್ದಾರ್ ಹೊರಗಡೆ ಹೋಗದಂತೆ ಪ್ರತಿಭಟನೆ ಮೂಲಕ ದಿಗ್ಭಂಧನ ಹಾಕಿದ್ದಾರೆ. 

ಮೂಲಭೂತ ಸಮಸ್ಯೆ, ಸೇತುವೆ ನಿರ್ಮಾಣ ಆಗುವವರೆಗೂ ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಲಿಂಗಸುಗೂರು ವಿಧಾನ ಸಭಾ ಕ್ಷೇತ್ರದ ಕಡದರಗಡ್ಡೆ ಗ್ರಾಮದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.  ಪರಿಸ್ಥಿತಿ ನಿಯಂತ್ರಣದಲ್ಲಿಡಲು ಪೋಲೀಸ್ ಸಿಬ್ಬಂದಿ ಹೆಚ್ಚಿನ ಭದ್ರತಾ ಸಿಬ್ಬಂದಿ ಕರೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. 
 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ