ಎಚ್.ಡಿಕೆ ಸಿಎಂ ಆದರೆ ಖುಷಿಯೂ ಇಲ್ಲ, ಬೇಸರವೂ ಇಲ್ಲ

First Published May 19, 2018, 8:23 AM IST
Highlights

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಶನಿವಾರ ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ಬಗ್ಗೆ ಎಲ್ಲರಂತೆ ನಾನೂ ಸಹ ಉತ್ಸುಕನಾಗಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. 

ಬೆಂಗಳೂರು : ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರ ಶನಿವಾರ ಬಹುಮತ ಸಾಬೀತು ಪಡಿಸುವ ಪ್ರಕ್ರಿಯೆ ಬಗ್ಗೆ ಎಲ್ಲರಂತೆ ನಾನೂ ಸಹ ಉತ್ಸುಕ ನಾಗಿದ್ದೇನೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. 

ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ವಾಪಸ್ ಬೆಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಪ್ರೀಂ ಕೊರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. 

ಶನಿವಾರದ ಬೆಳವಣಿಗೆ ಏನಾಗಲಿದೆ ಎಂಬುದರ ಮೇಲೆ ನಮ್ಮ ಪಕ್ಷದ ನಿಲುವು ಅವಲಂಬಿತವಾಗಿರುತ್ತದೆ. ಇತಿಹಾ ಸದಲ್ಲಿಯೇ ನಮ್ಮ ಪಕ್ಷ ಈವರೆಗೂ ಪೂರ್ಣ ಬಹುಮತದಿಂದ ಸರ್ಕಾರ ರಚಿಸಿಯೇ ಇಲ್ಲ. ಈ ಬಗ್ಗೆ ಬೇಸರ ಇದೆ ಎಂದು ಹೇಳಿದರು. 

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ . ಡಿ . ಕುಮಾರಸ್ವಾಮಿ ಮುಖ್ಯಮಂತ್ರಿ ಯಾದರೆ ನನಗೆ ಸಂತೋಷವಾಗಲಿ ಅಥವಾ ಅಥವಾ ದುಃಖವಾಗಲಿ ಆಗುವು ದಿಲ್ಲ. ನಾನು ಸ್ಥಿತಪ್ರಜ್ಞನಾಗಿರುತ್ತೇನೆ ಎಂದು ಮಾರ್ಮಿಕವಾಗಿ ನುಡಿದ ಅವರು, ಬಿಜೆಪಿಯ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾ ರವು ದೇಶದ ಯಾವ ಯಾವ ರಾಜ್ಯದಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂಬುದು ಗೊತ್ತಿದೆ ಎಂದರು. 

click me!