
ಉಡುಪಿ (ಮೇ. 02): ಕೃಷ್ಣಮಠದಲ್ಲಿ ಯಾವುದೇ ಭದ್ರತಾಲೋಪ ಇಲ್ಲ. ಪ್ರಧಾನಿಗಳಿಗೆ ಜೀವ ಬೆದರಿಕೆ ಬಗ್ಗೆ ನಮಗೆ ಅರಿವಿಲ್ಲ. ಪ್ರಧಾನಿ ಬರಲ್ಲ ಅಂತ ಮೊದಲೇ ನಿರ್ಧಾರ ಆಗಿತ್ತು. ಅದಕ್ಕೆ ಬೇರೆ ಬಣ್ಣ ಕೊಡುವ ಅಗತ್ಯ ಇಲ್ಲ ಎಂದು ಪಲಿಮಾರು ಮಠದ ಮ್ಯಾನೇಜರ್ ವೆಂಕಟರಮಣಾಚಾರ್ಯ ಹೇಳಿದ್ದಾರೆ.
ಪ್ರಧಾನಿಗಳು ಬರುತ್ತಾರೆಂದು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು. ಪೊಲೀಸರು ಎಲ್ಲಾ ರೀತಿಯಲ್ಲಿ ಸನ್ನದ್ದರಾಗಿದ್ದರು. ಹತ್ತು ಗಂಟೆಯೊಳಗೆ ಪೂಜೆ ಮುಗಿಸಿ ಕಾದಿದ್ದೆವು. ಪ್ರಚಾರಕ್ಕೆ ಬಂದಾಗ ಮಠಕ್ಕೆ ಬರೋದು ಸರಿಯಲ್ಲ ಅನ್ನೋದು ಪ್ರಧಾನಿಗಳ ಭಾವನೆ. ಇನ್ನೊಮ್ಮೆ ಮಠಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ಅನಾನುಕೂಲತೆಯಿಂದ ಬಂದಿಲ್ಲ ಎಂದು ವೆಂಕಟರಮಣಾಚಾರ್ಯ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಏನೂ ಹೇಳಲ್ಲ. ಜೀವ ಬೆದರಿಕೆ ಇರುವ ಬಗ್ಗೆ ನಮಗೆ ಗೊತ್ತಿಲ್ಲ. ಮಠಕ್ಕೆ ಸೂಕ್ತ ಭದ್ರತೆ ಇದೆ.ಯಾವುದೇ ಅಪಾಯ ಇಲ್ಲ. ಪ್ರಧಾನಿಗಳಿಗೆ ಜೀವ ಬೆದರಿಕೆ ಇರೋದು ಸಹಜ ಅಲ್ವಾ? ಆ ಕಾರಣಕ್ಕೆ ಬಂದಿರಲಿಕ್ಕಿಲ್ಲ ಎಂದು ಹೇಳಿದ್ದಾರೆ.