ಈ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ ಬಾರಿಸುತ್ತಾ?

First Published May 7, 2018, 12:50 PM IST
Highlights

ಅಮೇರಿಕಾ ರಾಯಭಾರಿ ಸಂಸ್ಥೆ ನಡೆಸಿದೆ ಎನ್ನಲಾದ ಸಮೀಕ್ಷೆಯಲ್ಲಿ ಜೆಡಿಎಸ್‌ ಮೊದಲ ಸ್ಥಾನ ಪಡೆದಿದೆ. ವಿದೇಶಿ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆ  ತೀವ್ರ ಚರ್ಚೆಗೆ ಕಾರಣವಾಗಿದೆ. 

ಬೆಂಗಳೂರು (ಮೇ. 07): ಅಮೇರಿಕಾ ರಾಯಭಾರಿ ಸಂಸ್ಥೆ ನಡೆಸಿದೆ ಎನ್ನಲಾದ ಸಮೀಕ್ಷೆಯಲ್ಲಿ ಜೆಡಿಎಸ್‌ ಮೊದಲ ಸ್ಥಾನ ಪಡೆದಿದೆ. ವಿದೇಶಿ ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆ  ತೀವ್ರ ಚರ್ಚೆಗೆ ಕಾರಣವಾಗಿದೆ. 

ಜೆಡಿಎಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ವರದಿ ಹೇಳಿದೆ.   ಜೆಡಿಎಸ್‌ 90 ಸ್ಥಾನ ಗಳಿಸಲಿದೆ ಎಂದು ಅಮೆರಿಕ ರಾಯಭಾರಿ ಕಛೇರಿ ವರದಿ ನೀಡಿದೆ.  ಜೆಡಿಎಸ್‌ 90, ಕಾಂಗ್ರೆಸ್ 70 ,ಬಿಜೆಪಿ 63 ಸ್ಥಾನ ಗಳಿಸುತ್ತದೆ ಎಂದು ಸರ್ವೆ ಹೇಳುತ್ತದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಬಿಜೆಪಿ ಮೂರನೆ ಸ್ಥಾನಕ್ಕೆ ಇಳಿಯಲಿದೆ ಎನ್ನಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಸಹಿ‌ ಇಲ್ಲದ ಪತ್ರ ವೈರಲ್ ಆಗಿದೆ.  ಹಾಸನದಲ್ಲಿ 7ಕ್ಕೆ 7 ಕ್ಷೇತ್ರಗಳು ಜೆಡಿಎಸ್‌ ಮಡಿಲಿಗೆ ಎನ್ನಲಾಗಿದೆ. ಹಾಸನದಲ್ಲಿ ಬಿಸಿ ಬಿಸಿ ರಾಜಕೀಯ ಚರ್ಚೆಗೆ ಕಾರಣವಾಗಿದೆ ಈ ಸಮೀಕ್ಷಾ ವರದಿ.  

click me!