ಕಾವೇರಿ ಸ್ಕೀಂ ಕರಡು ಬದಲಾವಣೆಗೆ ಸುಪ್ರೀಂ ಸೂಚನೆ; ಕರ್ನಾಟಕಕ್ಕೆ ಹಿನ್ನಡೆ?

Published : May 16, 2018, 01:19 PM IST
ಕಾವೇರಿ ಸ್ಕೀಂ ಕರಡು ಬದಲಾವಣೆಗೆ ಸುಪ್ರೀಂ ಸೂಚನೆ; ಕರ್ನಾಟಕಕ್ಕೆ ಹಿನ್ನಡೆ?

ಸಾರಾಂಶ

ಕಾವೇರಿ ಸ್ಕೀಮ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.   ಕೇಂದ್ರದ ಸ್ಕೀಮ್ ಕರಡಿನಲ್ಲಿನ ನಾಲ್ಕು ಅಂಶಗಳ ಬಗ್ಗೆ ಸುಪ್ರೀಂಕೋರ್ಟ್  ಕೇಂದ್ರ ಸರ್ಕಾರದ ಸ್ಪಷ್ಟಿಕರಣ ಕೇಳಿದೆ. 

ನವದೆಹಲಿ (ಮೇ. 16):  ಕಾವೇರಿ ಸ್ಕೀಮ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ.   ಕೇಂದ್ರದ ಸ್ಕೀಮ್ ಕರಡಿನಲ್ಲಿನ ನಾಲ್ಕು ಅಂಶಗಳ ಬಗ್ಗೆ ಸುಪ್ರೀಂಕೋರ್ಟ್  ಕೇಂದ್ರ ಸರ್ಕಾರದ ಸ್ಪಷ್ಟಿಕರಣ ಕೇಳಿದೆ. 

ಸ್ಕೀಮ್ ಕರಡಿನಲ್ಲಿ ಕೆಲ ಬದಲಾವಣೆಗಳನ್ನು ಮಾಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ ಮಾಡಿದೆ. 

- ಕಾವೇರಿ ಪ್ರಾಧಿಕಾರದ ಕೇಂದ್ರ ಕಚೇರಿ ದೆಹಲಿಯಲ್ಲಿ ಇರಬೇಕು. ಬೆಂಗಳೂರಿನಲ್ಲಿ ಬೇಡ. 
- ಕಾವೇರಿ ನೀರು ನಿಯಂತ್ರಣ ಸಮಿತಿ ಬೆಂಗಳೂರಿನಲ್ಲಿ ಇರಬಹುದು
- ನೀರು ಹಂಚಿಕೆ ವಿಷಯ ಅಥವಾ ಕಾವೇರಿ ತೀರ್ಪು ಅನುಷ್ಠಾನದಲ್ಲಿ ರಾಜ್ಯಗಳ ಅಸಹಕಾರ ಇದ್ದಾಗ ಪ್ರಾಧಿಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ. ಕೇಂದ್ರಕ್ಕೆ ದೂರು ನೀಡಿ, ಕೇಂದ್ರ ತೆಗೆದುಕೊಳ್ಳುವ ತೀರ್ಮಾನ ಅಂತಿಮ ಎಂಬುದನ್ನು ಒಪ್ಪಲಾಗದು
- ನೀರು ಹಂಚಿಕೆ ಬಗ್ಗೆ ರಾಜ್ಯಗಳಿಗೆ ಕೇಂದ್ರ ಸೂಚನೆ ನೀಡುವಂತಿಲ್ಲ. ಪ್ರಾಧಿಕಾರದಲ್ಲಿರುವ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಬಹುದು

ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಕೇಂದ್ರಕ್ಕೆ ಸೂಚಿಸಿ ನಾಳೆಗೆ ವಿಚಾರಣೆ ಮುಂದೂಡಿದೆ. 

ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಕಾವೇರಿ ಸ್ಕೀಮ್ ವಿಷಯದಲ್ಲಿ ಸದ್ಯ ಯಾವುದೇ ತೀರ್ಮಾನ ಕೈಗೊಳ್ಳಬೇಡಿ. ರಾಜ್ಯ ಸರ್ಕಾರದ ಸಲಹೆ-ಸೂಚನೆಗಳು ಅತ್ಯವಶ್ಯಕ. ಹೀಗಾಗಿ ವಿಚಾರಣೆಯನ್ನು ಜುಲೈ ಗೆ ಮುಂದೂಡಿಕೆ ಮಾಡಿ ಎಂದು ಕರ್ನಾಟಕ ರಾಜ್ಯ ವಿನಂತಿಸಿಕೊಂಡಿದೆ.  

ಕಾವೇರಿ ವಿಷಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆ ನಡೆಸಿ ಆಗಿದೆ. ರಾಜ್ಯ ಸರ್ಕಾರಗಳು ಇಲ್ಲಿ ಹೇಳುವಂತದ್ದು ಕಡಿಮೆ ಇರುತ್ತದೆ. ಸ್ಕೀಮ್ ರೂಪಿಸುವ ಜವಾಬ್ದಾರಿ ಕೇಂದ್ರಕ್ಕೆ ನೀಡಿದ್ದೇವೆ ಎಂದು ರಾಜ್ಯದ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. 
 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ