ಜೆಡಿಎಸ್ ಸಂಪರ್ಕದಲ್ಲಿ ಸೊಗಡು ಶಿವಣ್ಣ : ಶರವಣ

Published : May 03, 2018, 08:53 AM ISTUpdated : May 03, 2018, 08:57 AM IST
ಜೆಡಿಎಸ್ ಸಂಪರ್ಕದಲ್ಲಿ ಸೊಗಡು ಶಿವಣ್ಣ : ಶರವಣ

ಸಾರಾಂಶ

ಬಿಜೆಪಿ ಮುಖಂಡರೋರ್ವರು  ತಮ್ಮ ಪಕ್ಷದ ವಿರುದ್ಧ ಬೇಸರಗೊಂಡಿದ್ದಾರೆ. ಅಲ್ಲದೇ ಅವರು ತಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ಜೆಡಿಎಸ್ ಮುಖಂಡ ಶರವಣ ಹೇಳಿದ್ದಾರೆ. 

ತುಮಕೂರು: ರಾಜ್ಯದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪಕ್ಷಾಂತರ ಪರ್ವವೂ ಕೂಡ ಜೋರಾಗುತ್ತಿದೆ. ಟಿಕೆಟ್ ಸಿಗದೇ ಅನೇಕ ಮುಖಂಡರು ಈಗಾಗಲೇ ತಮ್ಮ ಪಕ್ಷ ತೊರೆದು ಬೇರೆ ಪಕ್ಷಗಳನ್ನು ಸೇರುತ್ತಿದ್ದಾರೆ. ಈಗಾಲೇ ಅನೇಕರು ಪಕ್ಷಾಂತರವನ್ನೂ ಮಾಡಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. 

ಕೆಲ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಸಿಗದ ಕಾರಣ ಬಂಡಾಯವಾಗಿಯೂ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಇದೀಗ ಬಿಜೆಪಿ ಮುಖಂಡರೋರ್ವರು ನಮ್ಮ ಪಕ್ಷದ ವಿರುದ್ಧ ಬೇಸರಗೊಂಡಿದ್ದಾರೆ. ಅಲ್ಲದೇ ಅವರು ತಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ಜೆಡಿಎಸ್ ಮುಖಂಡ ಶರವಣ ಹೇಳಿದ್ದಾರೆ. 

ಬಿಜೆಪಿಯ ಸೊಗಡು ಶಿವಣ್ಣ ಜೆಡಿಎಸ್ ಸಂಪರ್ಕದಲ್ಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹೇಳಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ಬಿಜೆಪಿ ಕಡೆಗಣಿಸಿದೆ. ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಪಕ್ಷದಲ್ಲಿ ನೊಂದಿದ್ದಾರೆ. ನಾನೂ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಶರವಣ ಹೇಳಿದ್ದಾರೆ. 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ