ಮತ ಚೀಟಿ ಅಕ್ರಮ : ಆರ್ ಆರ್ ಕ್ಷೇತ್ರದ ಚುನಾವಣೆ ಮುಂದಕ್ಕೆ

Published : May 11, 2018, 06:44 PM ISTUpdated : May 11, 2018, 07:57 PM IST
ಮತ ಚೀಟಿ ಅಕ್ರಮ :  ಆರ್ ಆರ್ ಕ್ಷೇತ್ರದ ಚುನಾವಣೆ ಮುಂದಕ್ಕೆ

ಸಾರಾಂಶ

ಅಕ್ರಮ ಮತಚೀಟಿ ಹಗರಣದ  ಹಿನ್ನಲೆಯಲ್ಲಿ ಮೇ.12 ರಂದು ನಡೆಯಬೇಕಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮೇ.28ಕ್ಕೆ ಮುಂದೂಡಲಾಗಿದೆ. ಫಲಿತಾಂಶ ಮೇ. 31 ರಂದು ನಡೆಯಲಿದೆ. 

ಬೆಂಗಳೂರು(ಮೇ.11):ಅಕ್ರಮ ಮತಚೀಟಿ ಹಗರಣದ  ಹಿನ್ನಲೆಯಲ್ಲಿ ಮೇ.12 ರಂದು ನಡೆಯಬೇಕಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮೇ.28ಕ್ಕೆ ಮುಂದೂಡಲಾಗಿದೆ. ಫಲಿತಾಂಶ ಮೇ. 31 ರಂದು ನಡೆಯಲಿದೆ. ಈ ಕ್ಷೇತ್ರದಲ್ಲಿ  ಕಾಂಗ್ರೆಸ್ ನಿಂದ ಮುನಿರತ್ನ, ಬಿಜೆಪಿಯಿಂದ ಮುನಿರಾಜು ಗೌಡ ಹಾಗೂ ಜೆಡಿಎಸ್ ನಿಂದ ಆರ್. ರಾಮ ಚಂದ್ರ ಸ್ಪರ್ಧಿಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾ ಆಯುಕ್ತ ಸಂಜೀವ್ ಕುಮಾರ್,  ಮತದಾರರಿಗೆ ಆಮಿಷ ಒಡ್ಡಲಾಗಿದ್ದು ಒಂಭತ್ತು ಸಾವಿರಕ್ಕೂ ಹೆಚ್ಚು ಜನರ ಬಳಿ ಮತದಾರರ ಗುರುತಿನ ಚೀಟಿಯೇ ಇಲ್ಲ. ರಾ.ರಾ. ನಗರದ ಮತದಾರರ ಮೇಲೆ ಒತ್ತಡ ಇದೆ. ಮತದಾರರ ಗುರುತಿನ ಚೀಟಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿದ್ದಾರೆ. ಈ ಕಾರಣದಿಂದ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದ ಕಾರಣ ಚುನಾವಣೆ ಮುಂದಿಡಿದ್ದೇವೆ ಎಂದು ಹೇಳಿದರು.
ಆರ್ ಆರ್ ನಗರದ ಜಾಲಹಳ್ಳಿಯಲ್ಲಿ ಬಹಳ ದೊಡ್ಡ ಪ್ರಮಾಣದ ಎಪಿಕ್ ಕಾರ್ಡ್ ಸಿಕ್ಕಿತ್ತು. ಫೀಲ್ಡ್ ವೆರಿಫಿಕೆಷನ್ ಮಾಡಿದ್ದೇವೆ.  ಸರ್ವೆ ಸ್ಲಿಪ್ ಗಳು ಸಿಕ್ಕಿವೆ. ಕೆಲವು ಆಮಿಷಗಳ ಮೇರೆಗೆ ಕಾರ್ಡ್ ತೆಗೆದುಕೊಳ್ಳಲಾಗಿದೆ. ಸೀರೆ,ನೀರಿನ ಕ್ಯಾನ್,ಕುಕ್ಕರ್ ಗಳನ್ನು ಕೊಡ ಈ ರೀತಿ ಮಾಡಲಾಗಿದೆ. ಇದರಲ್ಲಿ ಒಬ್ಬ ಅಭ್ಯರ್ಥಿಯ ಹೆಸರಿದೆ. ಮತದಾರರನ್ನು ಸೆಳೆಯಲು ಈ ರೀತಿ ಮಾಡಲಾಗಿದೆ. 5018 ಟೀ ಶರ್ಟ್ ಟ್ರಕ್ ನಲ್ಲಿ ಸಿಕ್ಕಿದೆ. 29390 ಹಾಪ್ ಪ್ಯಾಂಟ್ ಸಿಕ್ಕಿದೆ. ಮತದಾರರಿಗೆ ಪ್ರೆಷರ್ ಕುಕರ್ ಭರವಸೆಯನ್ನು ನೀಡಿ ಓಟರ್ ಕಾರ್ಡ್ ಪಡೆದಿದ್ದಾರೆ. ಮತದಾರರು ಯಾವುದೇ ಒತ್ತಡಕ್ಕೆ ಒಳಗಾಗದರೆ ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ಹೊಸತಾಗಿ ನಡೆಸಲು ಆಯೋಗದ ಕೆಲ ಸೆಕ್ಷನ್'ಗಳು ಹೇಳಿದೆ ಎಂದು ತಿಳಿಸಿದರು.

 

ಕನ್ನಡ ಪ್ರಭಕ್ಕಾಗಿ http://kpepaper.asianetnews.com ಕ್ಲಿಕ್ ಮಾಡಿ

 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ