
ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಭಾರಿ ಹಿನ್ನಡೆಯಿದ್ದಾರೆ. ಹೊಳೆನರಸಿಪುರದಲ್ಲಿ ರೇವಣ್ಣ, ಶಾಂತಿನಗರದಲ್ಲಿ ಹ್ಯಾರಿಸ್, ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಜಗ್ಗೇಶ್, ಎಸ್.ಟಿ. ಸೋಮಶೇಖರ್ ಹಿನ್ನಡೆಯಾಗಿದ್ದರೆ. ಭದ್ರಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಗಮೇಶ್ ಮುನ್ನಡೆ ಸಾಧಿಸಿದ್ದಾರೆ.ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಕೆಲವು ಮತಗಳ ಅಂತರದಲ್ಲಿ ಹಿನ್ನಡೆಯಿದ್ದಾರೆ.
ಶ್ರೀರಾಮುಲು 2 ಕ್ಷೇತ್ರದಲ್ಲಿ ಮುನ್ನಡೆಯಿದ್ದಾರೆ. ಜಲಸಂಪನ್ಮೂಲ ಸಚಿವ ಎಂಬಿ. ಪಾಟೀಲ್ ಮುನ್ನಡೆ ಸಾಧಿಸಿದ್ದಾರೆ. ಹಾಸನದಲ್ಲಿ 3 ಜೆಡಿಎಸ್, 1 ಬಿಜೆಪಿ ಮುನ್ನಡೆ ಸಾಧಿಸಿದ್ದಾರೆ. ಮಾಗಡಿಯಲ್ಲಿ ಎ.ಮಂಜು ಹಾಗೂ ಯಶವಂತಪುರದಲ್ಲಿ ಜನರಾಯಿಗೌಡ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ. ಬೀದರ್ ಕ್ಷೇತ್ರದಲ್ಲಿ ಅಶೋಕ್ ಖೇಣಿ ಮುನ್ನಡೆಯಿದ್ದಾರೆ. ಒಟ್ಟು 222 ಕ್ಷೇತ್ರಗಳಲ್ಲಿ ಇತ್ತೀಚಿನ ವರದಿಗಳಂತೆ ಕಾಂಗ್ರೆಸ್ 62, ಬಿಜೆಪಿ 70 ಹಾಗೂ ಜೆಡಿಎಸ್ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ತುಮಕೂರಿನಲ್ಲಿ ಇನ್ನು ಮತ ಎಣಿಕೆ ಕಾರ್ಯ ಆರಂಭವಾಗಿಲ್ಲ.