ಸೋಲಿನ ಕಾರಣ ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ

Published : May 15, 2018, 02:53 PM IST
ಸೋಲಿನ ಕಾರಣ ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ

ಸಾರಾಂಶ

ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಜೊತೆಗೆ ತವರು ಕ್ಷೇತ್ರವಾಗಿದ್ದರಿಂದ ಗೆಲುವು ಸುಲಭವಾಗಬಹುದೆಂಬ ಸಿಎಂ ಲೆಕ್ಕಾಚಾರ ತಲೆಕೆಳಗಾಗಿದೆ. ಚಾಮುಂಡೇಶ್ವರಿ ಜನ ಸಿಎಂ ಕೈ ಹಿಡಿಯಲು ಮನಸ್ಸು ಮಾಡಿಲ್ಲ. ಮತದಾರರ ಮನದಾಳ ಕೊನೆವರೆಗೂ ಬಿಟ್ಟು ಕೊಟ್ಟಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ. 

ಬೆಂಗಳೂರು (ಮೇ.15): ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಜೊತೆಗೆ ತವರು ಕ್ಷೇತ್ರವಾಗಿದ್ದರಿಂದ ಗೆಲುವು ಸುಲಭವಾಗಬಹುದೆಂಬ ಸಿಎಂ ಲೆಕ್ಕಾಚಾರ ತಲೆಕೆಳಗಾಗಿದೆ. ಚಾಮುಂಡೇಶ್ವರಿ ಜನ ಸಿಎಂ ಕೈ ಹಿಡಿಯಲು ಮನಸ್ಸು ಮಾಡಿಲ್ಲ. ಮತದಾರರ ಮನದಾಳ ಕೊನೆವರೆಗೂ ಬಿಟ್ಟು ಕೊಟ್ಟಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ. 

ಚಾಮುಂಡೇಶ್ವರಿ ಸೋಲಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,   ಕ್ಷೇತ್ರದ ಜನರೊಂದಿಗೆ ಹೆಚ್ಚು ಬೆರೆಯಲು ಆಗದಿದ್ದುದು ನನ್ನ ಸೋಲಿಗೆ ಕಾರಣ.  ಪುತ್ರ ರಾಕೇಶ್ ಅನುಪಸ್ಥಿತಿಯಲ್ಲಿ ಕ್ಷೇತ್ರದಲ್ಲಿ  ಸಂಪರ್ಕ ಸಾಧ್ಯವಾಗಲಿಲ್ಲ.  ಮೊದಲ ಬಾರಿಗೆ ಪ್ರಚಾರಕ್ಕೆ ಹೋದಾಗ ನನಗೆ  ಸೋಲಿನ ಸುಳಿವು ಗೊತ್ತಾಗಿತ್ತು.  ಆದರೂ ಕೊನೆಯ ಚುನಾವಣೆ  ಜನರು ಕೈಹಿಡಿಯಬಹುದು ಅಂತ ಅಂದುಕೊಂಡಿದ್ದೆ. ಆದರೆ ಲೆಕ್ಕಾಚಾರ ತಲೆಕೆಳಗಾಗಿದೆ.  

ಜಾತಿವಾರು ಮತಗಳ ಕ್ರೋಡಿಕರಣ  ತಡೆಯಲು ವಿಫಲವಾದದ್ದೇ ನನ್ನ ಸೋಲಿಗೆ ಕಾರಣ ಎಂದು ಸಿದ್ದರಾಮಯ್ಯ ತಮ್ಮ ನಾಯಕರಿಗೆ ವಿವರಣೆ ನೀಡಿದ್ದಾರೆ. 
 

PREV
click me!

Recommended Stories

ಕರ್ನಾಟಕ ಬಂದ್ : ಖಾಸಗಿ ಮ್ಯಾಕ್ಸಿಕ್ಯಾಬ್, ಪೆಟ್ರೋಲ್ ಯಥಾಸ್ಥಿತಿ
ಚುನಾವಣಾ ಪ್ರಚಾರದಿಂದ ದೂರ ಉಳಿದ ಎಸ್ ಎಂ ಕೃಷ್ಣ